ವಿಡಿಯೊ ; ಬುದ್ಧಿಜೀವೀಗಳ ಥರ ಆಡಿದ ಅಕ್ಷಯ್ ಕುಮಾರ್ ಗೆ ಗ್ರಹಚಾರ ಬಿಡಿಸಿದ ಸರ್ದಾರ್ ಜೀಅಕ್ಷಯ್ ಕುಮಾರ್. ಬಾಲಿವುಡ್ ನಲ್ಲಿ ಯಾರಾದರೂ ಒಬ್ಬ ನಟ ಸಾಮಾಜಿಕ ಕಳಕಳಿ ಹೊಂದಿದ್ದಾರೆ, ದೇಶದ ಮೇಲೆ ಅಪಾರ ಗೌರವ ಹೊಂದಿದ್ದಾರೆ ಎಂದರೆ ಮೊದಲು ಬರುವ ಹೆಸರು ಅಕ್ಷಯ್ ಕುಮಾರ್.ದೇಶ ಪ್ರವಾಹಗಳಿಂದ ತತ್ತರಿಸಿದರೆ ಸ್ವಯಂಪ್ರೇರಿತರಾಗಿ ಮುಂದೆ ಬಂದು ತಮ್ಮ ಕೈಲಾದಷ್ಟು ಸಹಾಯ ನೀಡುತ್ತಾರೆ. ಇತ್ತೀಚೆಗೆ ಪಬ್ಜಿ ಬ್ಯಾನ್ ಆಯ್ತು ಅಂತ ನಿರಾಸೆಯಲ್ಲಿದ್ದ ಗೇಮರ್ಸ್ ಗಳಿಗೆ ಫೌಜಿ ಗೇಮ್ ಲಾಂಚ್ ಮಾಡಿ ಅದರಲ್ಲಿ ಬರುವ ಆದಾಯವನ್ನು ಭಾರತ್ ಕೇ ವೀರ್ ಯೋಜನೆಯಲ್ಲಿ ಸೈನಿಕರ ಕುಟುಂಬಗಳಿಗೆ ತಲುಪಿಸುವ ಪ್ರಯತ್ನ ಮಾಡಿದ್ದಾರೆ.

ಅಕ್ಷಯ್ ನಟನೆಯ ಲಕ್ಷೀಬಾಂ-ಬ್ ಚಿತ್ರ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತದೆ ಎಂದು ಅದರ ಹೆಸರನ್ನು ಲಕ್ಷ್ಮಿ ಎಂದು ಮಾಡಲಾಗಿದೆ. ಇದರ ಬೆನ್ನಲ್ಲೇ ಅಕ್ಷಯ್ ಕುಮಾರ್ ಅವರು ಕಾರ್ಯಕ್ರಮವೊಂದರಲ್ಲಿ “ವೈಷ್ಣೋದೇವಿ ದರ್ಶನಕ್ಕೆ ಸುಮಾರು 3 ಲಕ್ಷ ಹಣ ಖರ್ಚಾಗುತ್ತದೆ ಅದರ ಬದಲು ಆ ಹಣವನ್ನು ಬಡವರಿಗೆ ನೀಡಿದರೆ ಉಪಯೋಗವಾಗುತ್ತದೆ” ಎಂದು ಹೇಳಿದರು.

ಇದಕ್ಕೆ ಸರ್ದಾರ್ ಜಿ ಒಬ್ಬರು ಪ್ರತಿಕ್ರಿಯೆ ನೀಡಿದ್ದು “ಅಕ್ಷಯ್ ಕುಮಾರ್ ಅವರ ಸಿನಿಮಾಗಳನ್ನು ನಾವು ಒಬ್ಬ ದೇಶಭಕ್ತನ ಸಿನಿಮಾ, ಒಳ್ಳೆಯ ಕಲಾವಿದ ಎಂದು ನೋಡಲು ಹೋಗುತ್ತಿದ್ದೆವು. ಆದರೆ ಇನ್ನುಮುಂದೆ ಅಕ್ಷಯ್ ಅವರ ಸಿನಿಮಾ ನೋಡಲು ಹಣ ಖರ್ಚು ಮಾಡೋದು ಬೇಡ. ಅದೇ ಹಣವನ್ನು ಬಡವರಿಗೆ ನೀಡೋಣ” ಎಂದಿದ್ದಾರೆ. ಸರ್ದಾರ್ ಜೀ ಅವರ ಈ ಪ್ರತಿಕ್ರಿಯೆಗೆ ಎಲ್ಲೆಡೆ ಶಭಾಷ್ ಎಂದಿದ್ದಾರೆ ಜನತೆ.