ಬಿಜೆಪಿ ನಾಯಕಿ ಖುಷ್ಬೂ ಅವರು ಚಲಿಸುತ್ತಿದ್ದ ಕಾರ್ ಅಪಘಾತ! ಮುರುಗನ್ ದೇವರ ಪವಾಡ!ತಮಿಳುನಾಡಿನ ಬಿಜೆಪಿ ನಾಯಕರ ಹಾಗೂ ಖ್ಯಾತ ಚಿತ್ರನಟಿ ಖುಷ್ಬೂ ಅವರು ಚಲಿಸುತ್ತಿದ್ದ ಕಾರ್ ಅಪಘಾತಕ್ಕೀಡಾಗಿದೆ.

ಜಾಹಿರಾತು : ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/

ಕಡಲೂರಿಗೆ ತೆರಳುತ್ತಿದ್ದ ಖುಷ್ಬೂ ಹಾಗೂ ಅವರ ಪತಿ ಸುಂದರ್ ಅವರ ಕಾರ್ ಗೆ ಟ್ಯಾಂಕರ್ ಒಂದು ಗುದ್ದಿ ಕಾರ್ ನುಜ್ಜುಗುಜ್ಜಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ.

ಈ ಬಗ್ಗೆ ಟ್ವೀಟ್ ಮಾಡಿರುವ ಖುಷ್ಬೂ ಅವರು ” ನಿನ್ನೆ ನಾನು ಚಲಿಸುತ್ತಿದ್ದ ಕಾರ್ ಆಕ್ಸಿಡೆಂಟ್ ಆಗಿದೆ. ನಿಮ್ಮೆಲ್ಲರ ಪ್ರೀತಿ ಹಾಗೂ ನನ್ನ ಪತಿ ನಂಬಿದ ಮುರುಗನ್ ದೇವರ ದಯೆ ನಾವು ಅಪಾಯದಿಂದ ಪಾರಾಗಿದ್ದೇವೆ” ಎಂದು ಬರೆದಿದ್ದಾರೆ.