ಹೊಟೇಲ್ ನಲ್ಲಿ ಪಾತ್ರೆ ತೊಳೆಯುತ್ತಿದ್ದ ಹುಡುಗ ಮುಂದೆ ಅತಿಹೆಚ್ಚು ರೌಡಿಗಳ ಎನ್ಕೌಂಟರ್ ಮಾಡಿದ ಪೊಲೀಸ್ ಅಧಿಕಾರಿ!ದಯಾನಾಯಕ್‌ರವರಿಗೆ ಸಣ್ಣವರಿಂದಲೇ ಅಲ್ಲೇ ಬೆಳೆದ ಕಾರಣ ಅಲ್ಲಿನ ಅಟ್ರಾಸಿಟಿಯ ಪ್ರಾರ್ಥಮಿಕ ಅರಿವಿತ್ತು ಇವರ ಉಪಟಳವನ್ನು ಹೇಗಾದರೂ ಮಾಡಿ ತಡೆಗಟ್ಟಲೇಬೇಕೆಂಬ ಕಾರಣಕ್ಕಾಗಿಯೇ ಪೋಲೀಸ್ ಇಲಾಖೆಗೆ ಸೇರಿದ್ದರು. ಅವರ ಹಂಬಲ ಈಡೇರುವ ಕಾಲ ಸನ್ನಿಹಿತವಾಗಿತ್ತು, ಇವರು ಬಯಸಿದಂತಹ ಅಧಿಕಾರ ಇವರ ಕೈಗೆ ಒಂದು ಅಧಿಕೃತ ಪವರಾಗಿ ಸಿಕ್ಕಿತು. ಅಧಿಕಾರ ಸಿಗುತ್ತಲೇ ಟಾರ್ಗೆಟ್ ಮಾಡಿದ್ದೇ ಬಾಂಬೆಯ ದಾದ ಆಗಿದ್ದ ದಾವೂದ್‌ನ ಛೇಲಾಗಳನ್ನು, ದಾವೂದ್‌ನ ವಲಯ ವಿಸ್ತರವಾಗಿತ್ತು ಅದರಲ್ಲಿ ನೂರಾರು ಜನ ಗ್ಯಾಂಗ್‌ಸ್ಟರ್‌ಗಳಿದ್ದರು ಇವರೆಲ್ಲರೂ ಅಲ್ಲಿನ ಪೋಲೀಸ್ ಹಾಗೂ ಕಾನೂನಿಗೆ ತಡೆಗೋಡೆಯಂತಿದ್ದರು. ದಯಾನಾಕ್‌ರವರು ನೇರವಾಗಿ ದಾವೂದ್‌ನ ಮುಖ್ಯ ಚೈನ್‌ಲಿಂಕ್ ಆಗಿದ್ದವರನ್ನೇ ಗುರಿಮಾಡಿದ್ದರು 1996ರ ಡಿಸೆಂಬರ್ 31ನೇ ತಾರಿಕಿನ ಚಳಿಗಾಲದ ರಾತ್ರಿ ದಯಾನಾಯಕ್‌ರವರ ಮೊದಲ ಎನ್‌ಕೌಂಟರ್ ಜರುಗಿತ್ತು ಅದು ಚೋಟಾರಾಜನ್ ಹಾಗೂ ಶಕೀಲ್ ಎಂಬ ಕುಖ್ಯಾತ ಖದೀಮರ ಗುಂಪಿನ ಇಬ್ಬರನ್ನು ಗುಂಡಿಕ್ಕಿ ಕೊಂದಿದ್ದರು ಆ ರಾತ್ರಿ ಅವರಿದ್ದ ಅಡ್ಡೆಯ ಬಗ್ಗೆ ಮಾಹಿತಿ ಸಿಕ್ಕಿದ ಕೂಡಲೇ ಚೂರೂ ಎದೆಗುಂದದೆ ನೇರ ತಮ್ಮ ರಿವಾಲ್ವರ್‌ನೊಂದಿಗೆ ಅಲ್ಲಿಗೆ ದಾಳಿಯಿಟ್ಟಿದ್ದರು, ಆಗ ನಡೆದ ಘರ್ಷಣೆಯಲ್ಲಿ ಈ ಸದಸ್ಯರು ದಾಯಾನಾಯಕ್ ಮೇಲೆ ಫೈರಿಂಗ್ ಮಾಡಲಾರಂಬಿಸಿದರು ಶರಣಾಗತಿಗೆ ಅವರು ಒಪ್ಪದೇ ಇದ್ದಾಗ ದಯಾನಾಯಕ್ ಅವರಿಬ್ಬರ ಮೇಲೆ ರಿವಾಲ್ವರ್‌ನ ಟ್ರಿಗರ್ ಒತ್ತಿದರು. ಈ ಸಮಯದಲ್ಲಿ ಇನ್ನೂ ಎನ್‌ಕೌಂಟರ್ ವಿಭಾಗಕ್ಕೆ ಇವರನ್ನು ಸೇರಿಸಿಯೇ ಇರಲಿಲ್ಲ ಕುಖ್ಯಾತರನ್ನು ಯಾವಾಗ ಅವರು ಧೈರ್ಯವಾಗಿ ಎದುರಿಸಿದರೋ ಆವಾಗ ಕ್ರಮೇಣ ಅವರನ್ನು ಅಲ್ಲಿನ ಗ್ಯಾಂಗ್‌ಸ್ಟರ್‌ಗಳ ವಿರುದ್ದದ ಸ್ಪೆಶಲ್ ಸ್ಕಾ÷್ವಡ್‌ಗಳಿಗೆ ಪ್ರಮೋಟ್ ಮಾಡಲಾಯಿತು. ಇಲ್ಲಿಂದ ಅವರ ಎನ್‌ಕೌಂಟರ್‌ಗಳ ಸರಣಿ ಶುರುವಾದವು ದಯಾನಾಯಕ್ ರಿವಾಲ್ವರ್‌ನ್ನು ಹಿಡಿದು ಎದುರಾಳಿಯ ಅಡ್ಡೆಗೆ ನುಗ್ಗಿದರೂ ಎಂದರೆ ಅವರ ರಿವಾಲ್ವರ್ ಎದುರಾಳಿಯನ್ನು ಬಲಿ ಪಡೆಯದೇ ವಿರಮಿಸುತ್ತಿರಲಿಲ್ಲ ಹೀಗೆ ಕೈಯಲ್ಲಿ ಗನ್ ಇದೆ ಎಂದು ಪೂರ್ವಪರ ಯೋಚಿಸದೆ ಕೊಲ್ಲುವುದು ಕ್ರಮವೂ ಅಲ್ಲ ದಯಾನಾಯಕ್‌ರಿಗೆ ಇಂತಹ ಯಾವುದೇ ಹಿಂಸಾತ್ಮಕ ಟೆಂಡೆನ್ಸಿಗಳಿರಲಿಲ್ಲ ಆದರೆ ಮುಂಬೈನ ಅಂಡರ್‌ವಲ್ಡ್ ಅಷ್ಟು ಒರಟಾಗಿ ಹೋಗಿತ್ತು ಅಲ್ಲಿನ ಯಾರೂ ಸಹ ಪೋಲೀಸಿನ ಬಾಯಿಮಾತಿಗೆ ಬಗ್ಗುವ ಜಾಯಮಾನದವರಾಗಿರಲಿಲ್ಲ ಅಂತವರನ್ನು ಸದೆ ಬಡಿಯುಲು ಇದ್ದ ಒಂದೇ ಒಂದು ಮಾರ್ಗ ಇದಾಗಿತ್ತು. ದಯಾನಾಕರಿಗೆ ಸಿಕ್ಕ ಬಹುತೇಕರು ಇಂತಹವರೇ.
1992ರಲ್ಲಿ ಒಮ್ಮೆ ಇವರಿಗೆ ಎರಡು ಗುಂಡೇಟುಗಳು ಬಿದ್ದು ತೀರ್ವ ಗಾಯಾಳಾಗಿ ಅವರಿಗೆ ಐಸಿಯುನಲ್ಲಿ ಇಡಲಾಗಿತ್ತು. ಆದರೆ ಈ ಪ್ರಕರಣದಲ್ಲಿ ಗುಂಡೇಟು ಬಿದ್ದರೂ ಸಹ ಜನಸಂದಣಿಯ ನಡುವೆಯೇ ಆ ಆಗುಂತಕನನ್ನು ಯಶಸ್ವಿಯಾಗಿ ಶೂಟ್ ಮಾಡಿದ ದಯಾನಾಯಕ್ ಇಲಾಖೆಯ ಪ್ರಶಂಸೆಗೆ ಪಾತ್ರರಾಗಿದ್ದರು. 2004ರ ಹೊತ್ತಿಗೆ ಅಂದರೆ ತಮ್ಮ ಅಧಿಕಾರದ 8 ವರ್ಷಗಳಲ್ಲಿ ದಯಾನಾಯಕ್ ಸುಮಾರು 83 ಗ್ಯಾಂಗ್‌ಸ್ಟರ್‌ಗಳನ್ನು ಶೂಟ್‌ಮಾಡಿದ್ದರು ಇದು ಅವರಿಗೆ ಇಲಾಖೆಯಲ್ಲಿ ಎನ್‌ಕೌಂಟರ್ ಸ್ಪೆಶಲಿಸ್ಟ್ ಎಂಬ ಹೆಸರು ಬರುವಂತೆ ಮಾಡಿತ್ತು. ನಾನು ರಕ್ತಪಿಪಾಸುವಲ್ಲ ಎಂದು ಈ ಬಿರುದನ್ನು ನಿರಾಕರಿಸುವ ದಯಾನಾಯಕ್ ಸಮಾಜಘಾತುಕರಾದ ಈ ಗ್ಯಾಂಗ್‌ಸ್ಟರ್‌ಗಳಿAದ ಮುಂದಾಗುವ ರಕ್ತಪಾತವನ್ನು ತಪ್ಪಿಸುವುದಕ್ಕಾಗಿ ಈ ಕೆಲಸ ಮಾಡಿದೆ ಎಂದು ಹೇಳುತ್ತಾರೆ.

ಜಾಹಿರಾತು : ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/

ಮುಂಬೈನ ಡೆಪ್ಯುಟಿ ಚೀಫ್ ಮಿನಿಸ್ಟರ್ ಆಗಿ ಬಂದ ಆರ್‌ಆರ್ ಪಾಟೇಲ್ ಎಂಬ ರಾಜಕೀಯ ಪ್ರವೇಶಮಾಡಿದ ಕಾರಣದಿಂದ ತದನಂತರ ಎಷ್ಟೋ ಕೆಲಸಗಳಿಗೆ ದಯಾನಾಯಕ್‌ರಿಗೆ ತಡೆ ಬಂದಿತು. ಇವರು ಎಷ್ಟು ನಿಷ್ಟಾವಂತರೋ ಅಷ್ಟೇ ಅವರಿಗೆ ರಾಜಕೀಯ ಒತ್ತಡ ಬೀಳತೊಡಗಿತು. ಅವರ ಕೆಲಸ ನಿಲ್ಲಿಸುವಂತೆ ಅನೇಕರು ಪ್ರಯತ್ನಪಟ್ಟಿದ್ದಿದೆ ಅವರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೇರಿ ಸಾರ್ವಜನಿಕರಲ್ಲಿ ಅವರ ಮೇಲಿರುವ ಗೌರವಕ್ಕೆ ದಕ್ಕೆ ತರುವ ಎಷ್ಟೋ ಪ್ರಯತ್ನಗಳು ಜರುಗಿವೆ. ಇದರಲ್ಲಿ ಪ್ರಮುಖವಾಗಿ ಹೇಳಬಹುದಾದುದೆಂದರೆ 2003ರಲ್ಲಿ ಕೆಟಲ್‌ಕೆರೋಡ್ಕರ್ ಎಂಬ ಮುಂಬೈನ ಜರ್ನಲಿಸ್ಟ್ ಮಾಡಿದ ಆರೋಪ, ಈತ ದಯಾನಾಯಕ್‌ರ ಮೇಲೆ ತುಸು ಗಂಭೀರ ಆರೋಪವೇ ಮಾಡಿದ್ದ ದಯಾನಾಯಕ್‌ರಿಗೆ ಮುಂಬೈ ಭೂಗತ ಲೋಕದ ಹಲವರ ಜೊತೆ ನಂಟಿದೆ ಎಂದೂ ಈ ಮೂಲಕ ಅವರು ಸಾಕಷ್ಟು ಬೇನಾಮಿ ಆಸ್ತಿಯನ್ನು ಗಳಿಸಿದ್ದಾರೆ ಎಂದು ದೂರಿದ್ದ, ಇಷ್ಟೇ ಅಲ್ಲದೆ ನಾನು ದಯಾನಾಯಕ್‌ಗೆ 2002ರಿಂದಲೇ ಪರಿಚಿತರೆಂದು ನಾವಿಬ್ಬರೂ ಸೇರಿ ಮುಂಬೈನಲ್ಲಿ ಸ್ತಿçà ದಂದೆ ವ್ಯವಹಾರವನ್ನು ನಡೆಸಿದ್ದೇವೆ ಎಂದು ಹೇಳಿದ್ದ, ಕೂಡಲೇ ಈ ಆರೋಪ ಬಹಳ ಸದ್ದು ಮಾಡಿದ್ದಲ್ಲದೇ ದಯಾನಾಯಕ್ ಮೇಲೆ ಅಲ್ಲಿನ ಮಹರಾಷ್ಟç ಕಂಟ್ರೋಲ್ ಆಫ್ ಆರ್ಗನೈಸ್ಡ್ ಕ್ರೆöÊಮ್‌ಮ್ಯಾರ್ಟ್ ಎಂಬ ಕೋರ್ಟ್ ವಿಶೇಷ ತನಿಖೆ ಕೈಗೊಂಡಿತು. ಎಸಿಪಿ ಶಂಕರ್ ಕಾಂಬ್ಳೆ ಹಾಗು ಡಿಸಿಪಿ ಕೆಎಲ್ ಬಿಸ್ಟೆçöÊ ಎಂಬ ಅಧಿಕಾರಿಗಳಿಂದ ವಿಚಾರಣೆ ನಡೆದು ದಯಾನಾಯಕ್ ಆರೋಪ ಮುಕ್ತರಾಗಿ ಹೊರಬಂದರು. 2004ರಲ್ಲಿ ಅವರು ನಿರ್ದೋಶಿ ಎಂದು ಕ್ಲೀನ್‌ಚಿಟ್ ಕೊಡಲಾಯಿತು. ಸುಳ್ಳು ಆರೋಪಮಾಡಿದ್ದ ಪತ್ರಕರ್ತನನ್ನು ಅಲ್ಲಿನ ಚೋಟಾಶಕೀಲ್ ಎಂಬ ಕುಖ್ಯಾತನ ಭಂಟ ಎಂಬ ಆರೋಪದಡಿ ಕಸ್ಟಡಿಗೆ ತೆಗೆದುಕೊಂಡರು. 2006ರಲ್ಲಿ ಅಲ್ಲಿನ ಆಂಟಿಕರಪ್ಷನ್ ಬ್ಯೂರೋ ದಯಾನಾಯಕ್ ರವನ್ನು ಅಕ್ರಮ ವ್ಯವಹಾರಗಳಡಿ ಬಂಧಿಸಿತ್ತು, ಅದೇ ವರ್ಷದ ಜನವರಿಯಲ್ಲಿ ಅವರ ಮನೆ ಮೇಲೆ ಐಟಿದಾಳಿ ನಡೆಸಿತ್ತು, ಅವರೇ ಕಟ್ಟಿಸಿದ ಶಾಲೆಯನ್ನು ಅದು ಕರ್ನಾಟಕ ಸರ್ಕಾರದಿಂದ ಮಾನ್ಯಗೊಂಡಿಲ್ಲ ಎಂದು ವಶಪಡಿಸಿಕೊಳ್ಳಲಾಯಿತು. ಆ ವರ್ಷ ಈ ಕೇಸ್‌ನಲ್ಲಿ ಸಿಲುಕಿದ ಅವರಿಗೆ ಮುಂಬೈನ ಸೆಶನ್‌ಕೋರ್ಟ್ನಲ್ಲಿ ಬೇಲ್ ಸಹ ಸಿಗಲಿಲ್ಲ ಅವರು 60 ದಿನಗಳ ಕಾಲ ಅಲ್ಲಿನ ನ್ಯಾಯಾಂಗ ಬಂಧನದಲ್ಲಿರಬೇಕಾಯಿತು. ಇದೆಲ್ಲದರ ಬಳಿಕ ಅವರಿಗೆ ಬೇಲ್‌ಸಿಕ್ಕಿ ಅವರ ಮೇಲೆ ಹೊರಿಸಿದ್ದ ಅಕ್ರಮಗಳಿಗೆ ಸಾಕ್ಷಿಗಳಿಲ್ಲ ಎಂದು ಯಾವ ಚಾರ್ಜಶೀಟನ್ನು ಹೊರಿಸದೆ ಅವರನ್ನು ಬಿಡುಗಡೆ ಮಾಡಲಾಯಿತು. 2003 ರಲ್ಲಿ ಅವರ ಮೇಲೆ ಹೊರಿಸಿದ್ದ ಕೋಟ್ಯಾಂತರ ರೂಗಳ ಅಕ್ರಮ ಸಂಪತ್ತು ಕ್ರೂಡೀಕರಣ ಆರೋಪಕ್ಕೂ ಸಹ ಯಾವುದೇ ಆಧಾರಗಳಿರಲಿಲ್ಲ, ಅವರ ಒಟ್ಟು ಆಸ್ತಿಯೇ ಎಲ್ಲ ಮೂಲಗಳಿಂದ 89 ಲಕ್ಷಕ್ಕಿಂತಲೂ ಕಡಿಮೆ ಇತ್ತು ದಯಾನಾಯಕ್ ತಮ್ಮ ಪತ್ನಿ ಹಾಗು ಸಂಬAಧಿಕರ ಹೆಸರಿನಲ್ಲಿ ಮುಂಬೈ ಅಂಡರ್‌ವಲ್ಡ್ನ ಕುಖ್ಯಾತರ ಜೊತೆ ಕೈ ಜೋಡಿಸಿ ಆಸ್ತಿಮಾಡಿದ್ದಾರೆಂದು ಅವರ ಮೇಲೆ ದೂರುಗಳು ಕೇಳಿ ಬಂದಿದ್ದವು.

ಎಸಿಬಿ ತಂಡವು ಸುಮಾರು 27 ಬಾರಿ ಅವರ ಮೇಲೆ ಸಮ್ಮನ್ಸ ಹೊರಡಿಸಿತ್ತು, ಆದರೆ ಯಾವ ಆರೋಪಗಳನ್ನು ನಿಜವೆಂದು ಸಾಬೀತುಪಡಿಸಲು ಅವರಿಂದಾಗಲಿಲ್ಲ. ದಯಾನಾಯಕ್‌ರವರು ಎಷ್ಟೆ ಕ್ಲೀನ್‌ಹ್ಯಾಂಡ್ ಎಂಬ ಹಣೆಪಟ್ಟಿಯೊಂದಿಗೆ ಹೊರಬಂದರೂ ಈ ಹಿಪೋಕ್ರೆಸಿ ಅವರ ಬೆಂಬಿಡಲಿಲ್ಲ ಇವೇ ಮೊದಲಾದ ಆರೋಪದಡಿ 62 ದಿನಗಳ ಕಾಲ ಅವರನ್ನು ಬಂಧಿಸಿ ಜೈಲಿನಲ್ಲಿ ಇಡಲಾಗಿತ್ತು, ಈ ಸಮಯದಲ್ಲಿ ಅವರ ಇಬ್ಬರು ಪೋಷಕರು ಸಾವನ್ನಪ್ಪಿದರು ಪೋಷಕರ ಹೆಣವನ್ನೂ ಕೂಡ ನೋಡುವುದಕ್ಕೆ ಇವರಿಗೆ ಕಾನೂನು ನಿರಾಕರಿಸಿತು, 2006ರಿಂದ ಹೀಗೆ ಇವರಿಗೆ ಒಂದಲ್ಲಾ ಒಂದು ಆರೋಪಗಳು, ಕಷ್ಟಗಳು ಅವರ ಸುತ್ತಾ ಕುಣಿದಾಡಿದವು. 2008ರಲ್ಲಿ ಪುನಃ ಅವರ ಕೆಲವು ಎನ್‌ಕೌಂಟರ್‌ಗಳು ಸುಳ್ಳೆಂಬ ಆರೋಪವು ಕೇಳಿಬಂದಿತು ದಯಾನಾಯಕ್‌ರವರು ಈ ಎಲ್ಲಾ ಛಾಡಿಗಳನ್ನು ಸಹ ಬಂಡೆಯ ತರಹ ಎದುರಿಸಿ ನಿಂತರು ತಿಂಗಳಿಗೆ ಕೇವಲ 10000ಪಗಾರ ಪಡೆಯುತ್ತಿದ್ದ ಅವರಮೇಲೆ ಕೋಟ್ಯಾಂತರ ರೂಗಳ ಹಣ ಸಂಗ್ರಹ ಆರೋಪಗಳು ಕೇಳಿಬಂದವು ಅವರ ಬಳಿ ಇದ್ದದ್ದೇ ಕೇವಲ ಒಂದು ಸರ್ಕಾರಿ ಟಾಟಸುಮೊ ಆದರೂ ಅವರ ಬಳಿ ಅನೇಕ ಕಾರುಗಳಿವೆ ಎಂಬ ಆರೋಪಗಳಿದ್ದವು. 2010ರವರೆಗೂ ಅವರು ಈ ಎಲ್ಲಾ ಷಢ್ಯಂತರಗಳ ವಿರುದ್ಧ ಈಜಿ ಹೊರಬಂದರು ಆ ವರ್ಷ ಅವರು ಎಲ್ಲಾ ಕ್ಲೀನ್‌ಚಿಟ್ ಪಡೆದು ಹೊರಬಂದರು, 2012ರಲ್ಲಿ ಅವರನ್ನು ಮುಂಬೈ ಇಲಾಖೆ ಲೋಕಲ್‌ಹಾರ್ಮ್ಸ್ ಯುನಿಟ್‌ಗೆ ಸೇರಿಸಿತು, 2014ರಲ್ಲಿ ಅವರು ನಾಗಪುರ್‌ಗೆ ವರ್ಗಾವಣೆಯಾದರು ಜುಲೈ 2015ರಲ್ಲಿ ಅವರನ್ನು ಪನಃ ಸುಳ್ಳು ದೂರುಗಳಡಿ ಸಸ್ಪೆಂಡ್‌ಮಾಡಲಾಯಿತು ಅದೇ ವರ್ಷ ಆಗಸ್ಟ್ ಅವರ ಸಸ್ಪೆಂಡ್ ಕ್ಯಾನ್ಸಲ್ ಆಯಿತು, 2016ರಲ್ಲಿ ಅವರನ್ನು ಮುಂಬೈ ಸರ್ಕಾರ ಪುನಃ ಬರಮಾಡಿಕೊಂಡಿತು ಹಾಗೂ ಈ ವರೆಗೂ ಅವರನ್ನು ಪೋಸ್ಟಿಂಗ್‌ನಲ್ಲಿ ಇಟ್ಟಿದೆ.
ಧೈರ್ಯ, ಧಕ್ಷತೆ ಮತ್ತು ಪ್ರಾಮಣಿಕತೆಗೆ ಇವರ ಜೀವನವೊಂದು ಉದಾಹರಣೆಯಾಗಿದೆ, ಹಾಗು ಇದೆಲ್ಲದರಿಂದ ಒಬ್ಬ ವ್ಯಕ್ತಿ ಎಷ್ಟೆಲ್ಲಾ ತೊಂದರೆ ಎದುರಿಸಬಹುದೆಂದು ತಿಳಿಯಬಹುದಾಗಿದೆ.