ಮಾಲಿವುಡ್ ಸಿನೆಮಾಗೆ ಆಯ್ಕೆಯಾದ ಶಾನ್ವಿ! ಹೀರೋ ಯಾರು ಗೊತ್ತಾ?ಸ್ಯಾಂಡಲ್​ವುಡ್​ನಲ್ಲಿ ಬೇಡಿಕೆಯ ನಟಿಯಾಗಿದ್ದಾರೆ ಶಾನ್ವಿ ಇದೀಗ ಮಾಲಿವುಡ್ ನತ್ತ ಪಾದಾರ್ಪಣೆ ಮಾಡುತ್ತಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಮಿಂಚಿರುವ ಶಾನ್ವಿ, ಕನ್ನಡದಲ್ಲಿಯೂ ಅನೇಕ ಸ್ಟಾರ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಶಾನ್ವಿ ಮಾಲಿವುಡ್​ ಇಂಡಸ್ಟ್ರಿಯತ್ತ ಜರ್ನಿ ಬೆಳೆಸಿದ್ದಾರೆ.

ಮಲಯಾಳಂ ಸಿನಿಮಾದಲ್ಲಿ ನಟಿ ಶಾನ್ವಿ ಶ್ರೀವಾಸ್ತವ್​ ನಟಿಸ್ತಿದ್ದಾರೆ. ಇದೇ ಮೊದಲ ಬಾರಿಗೆ ಮಾಲಿವುಡ್​ ಇಂಡಸ್ಟ್ರಿಗೆ ಕಾಲಿಟ್ಟಿದ್ದಾರೆ ಶ್ರೀಮನ್ನಾರಾಯಣನ ಲಕ್ಷ್ಮಿ. ವಿಶೇಷ ಅಂದ್ರೆ  ಶಾನ್ವಿ ಮಲಯಾಳಂ ಸಿನಿಮಾದಲ್ಲಿ 18 ವರ್ಷದ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅಂತ ಹೇಳಲಾಗ್ತಿದೆ. ಚಿತ್ರಕ್ಕೆ ‘ಮಹಾವೀರ್​​ಯರ್’​ ಅಂತ ಹೆಸರಿಟ್ಟಿದ್ದು, ಇಂದಿನಿಂದ ಚಿತ್ರೀಕರಣ ಆರಂಭವಾಗಿದೆ. ಮಲಯಾಳಂನ ಸ್ಟಾರ್​ ನಟ ನಿವೀನ್​ ಪೌಳಿ ಹಾಗೂ ನಟ ಆಸಿಫ್​ ಅಲಿ ಜೊತೆ ಶಾನ್ವಿ ಸ್ಕ್ರೀನ್​ ಶೇರ್​ ಮಾಡಿಕೊಳ್ತಿದ್ದಾರೆ.