ತಮ್ಮ ಮುದ್ದುಮುದ್ದಾದ ನಟನೆಯ ಮೂಲಕ ಎಲ್ಲರ ಗಮನ ಸೆಳೆದ ನಟಿ ಅಮೂಲ್ಯ ಈಗ ಗರ್ಭಿಣಿ??!

ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಕನ್ನಡಿಗರ ಮನಸೆಳೆದು ಒಳ್ಳೆಯ ನಾಯಕ ನಟಿ ಎನಿಸಿಕೊಂಡ ಖ್ಯಾತಿ ಅಮೂಲ್ಯಾರವರದು. ಇವರು ಬಾಲ್ಯದಲ್ಲಿಯೇ ಕೆಲವು ಸಿನೆಮಾಗಳಲ್ಲಿ ನಟನೆ ಮಾಡಿದ್ದಾರೆ, ಪರ್ವ ಸಿನೆಮಾದ ಮೂಲಕ ವಿಷ್ಣುವರ್ದನ್‌ರವರ ಜೊತೆ ಬಾಲ್ಯನಟನೆ ಮಾಡಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ತಮ್ಮ ಮುದ್ದುಮುದ್ದಾದ ನಟನೆಯ ಮೂಲಕ ಎಲ್ಲರ ಗಮನ ಸೆಳೆದ ಈಕೆ ಈಗ ಗರ್ಭಿಣಿ ಇರಬಹುದೇ ಎಂಬುದು ಅವರ ಅಭಿಮಾನಿಗಳ ಸಂದೇಹವಾಗಿದೆ. ಒಂದು ಕಾಲದಲ್ಲಿ ಗೋಲ್ಡನ್ ಕ್ವೀನ್ ಎಂದು ಖ್ಯಾತಿಯನ್ನು ಹೊಂದಿದ್ದ ಅಮೂಲ್ಯ ಈಗ ಹೇಗೆ ಕಾಣುತ್ತಿದ್ದಾರೆ ಗೊತ್ತಾ?

ದೊಡ್ಡ ದೊಡ್ಡ ನಟರ ಜೊತೆ ಸ್ಕ್ರೀನ್‌ ಶೇರ್ ಮಾಡಿಕೊಂಡಿರುವ ಅಮೂಲ್ಯರವರಿಗೆ ಈಗ ಕೇವಲ 26 ವರ್ಷ 1993 ರಲ್ಲಿ ಇವರ ಜನನವಾಗಿತ್ತು. ಮಾಸ್ತಿಗುಡಿ ಇವರು ಅಭಿನಯಿಸಿರುವ ಕಡೆಯ ಚಿತ್ರವಾಗಿದೆ. ಮದುವೆಯ ಬಳಿಕ ಸಿನೆಮಾರಂಗಕ್ಕೆ ಗುಡ್‌ಬಾಯ್ ಹೇಳಿ ಹೋಗಿಬಿಟ್ಟಿರುವ ಇವರು ಆಗಾಗ ರಾಜಕೀಯ ವಲಯದಲ್ಲಿ ಕಾಣಸಿಗುತ್ತಾರೆ. ಶಾಸಕನ ಮಗನಾದ ಜಗದೀಶ್‌ರನ್ನು ಮದುವೆ ಆಗಿರುವ ಈಕೆ ಕೆಲವೊಂದು ರಾಜಕೀಯ ಪ್ರಚಾರಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಈ ಹಿಂದೆ 2020 ರಲ್ಲಿ ಇವರು ಮತ್ತೆ ಸಿನೆಮಾ ರಂಗಕ್ಕೆ ಬರುತ್ತಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಈಗ ಅದರ ಬಗ್ಗೆ ಯಾವುದೇ ಮಾತುಗಳು ಕೇಳಿ ಬರುತ್ತಿಲ್ಲ.

ಇದನ್ನೂ ಓದಿ :  ವೆರಿಕೋಸ್ ವೇಯ್ನ್ ಲಕ್ಷಣಗಳು ಏನು? ಇದನ್ನು ಗುಣಪಡಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ!

ಚಿಕ್ಕ ವಯಸಿನಲ್ಲಿಯೇ ಮದುವೆ ಮಾಡಿಕೊಂಡಿರುವ ಇವರು ಈಗ ಪ್ರೆಗ್ನೆಂಟ್ ಇರಬಹುದು ಎಂಬ ಸುದ್ದಿ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ, ಆದರೆ ಇದರ ಬಗ್ಗೆ ಅಮೂಲ್ಯರವರು ಹೊರಗೆಲ್ಲೂ ಹೇಳಿಕೊಂಡಿಲ್ಲ. ಮನೆಯಲ್ಲಿಯೇ ಹೆಚ್ಚು ಸಮಯವನ್ನು ಕಳೆಯುತ್ತಿರುವ ಅಮೂಲ್ಯರವರು ಇತ್ತಿಚಿನ ದಿನಗಳಲ್ಲಿ ಕೊಂಚ ದಪ್ಪಗಾಗಿದ್ದಾರೆ ಎಂಬುದು ಅವರ ಕೆಲವು ಫೋಟೋಗಳನ್ನು ನೋಡಿದಾಗ ತಿಳಿಯುತ್ತದೆ. ಅದಕ್ಕಾಗಿ ಅಮೂಲ್ಯರವರು ವ್ಯಾಯಾಮವನ್ನು ಕೂಡಾ ಮಾಡುತ್ತಿರಬಹುದು. ಏನೇ ಆದರೂ ಬಹು ಬೇಡಿಕೆ ಇದ್ದ ಒಬ್ಬ ನಟಿ ಈಗ ಚಿತ್ರರಂಗದಿAದ ದೂರವುಳಿದಿರುವುದು ಅವರ ಅಭಿಮಾನಿಗಳಿಗೆ ಬೇಸರದ ಸಂಗತಿಯೇ ಆಗಿದೆ.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/