ಮುಂದುವರೆದ ಆಪರೇಷನ್ ಕಮಲ! ; ನಿತೀಶ್ ಗೆ ಶಾಕ್ ಕೊಟ್ಟ ಜೆಡಿಯುದ 6 ಶಾಸಕರ ಬಿಜೆಪಿ ಸೇರ್ಪಡೆಯ ನಿಲುವು!ಪಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷಕ್ಕೆ ಅರುಣಾಚಲ ಪ್ರದೇಶದಲ್ಲಿ ದೊಡ್ಡ ಆಘಾತ ಎದುರಾಗಿದೆ. ಅರುಣಾಚಲ ಪ್ರದೇಶದ ಏಳು ಜೆಡಿಯು ಶಾಸಕರ ಪೈಕಿ ಆರು ಮಂದಿ ಶಾಸಕರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದು ಬಿಜೆಪಿಯ ನೆರವಿನಿಂದ ಮುಖ್ಯಮಂತ್ರಿ ಗಾದಿಯನ್ನು ಮತ್ತೆ ಪಡೆದುಕೊಂಡಿರುವ ನಿತೀಶ್ ಕುಮಾರ್ ಅವರಿಗೆ ಇದರಿಂದ ಮತ್ತೊಂದು ಮುಜುಗರ ಉಂಟಾಗಿದೆ. ಪಂಚಾಯಿತಿ ಮತ್ತು ಮುನ್ಸಿಪಲ್ ಚುನಾವಣೆಗಳ ಫಲಿತಾಂಶ ಪ್ರಕಟವಾದ ಮರುದಿನವೇ ಈ ಬೆಳವಣಿಗೆ ನಡೆದಿದೆ. 60 ಸದಸ್ಯರ ಅರುಣಾಚಲ ಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿಯು ತನ್ನ ಬಲವನ್ನು ಈಗ 48ಕ್ಕೆ ಏರಿಸಿಕೊಂಡಂತಾಗಿದೆ. ಆದರೆ ಜೆಡಿಯುನಲ್ಲಿ ಒಬ್ಬ ಶಾಸಕ ಮಾತ್ರ ಉಳಿದುಕೊಂಡಿದ್ದಾರೆ. ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ್ ಏಕೈಕ ಶಾಸಕರಾದ ಲಿಕಾಬಲಿ ಕ್ಷೇತ್ರದ ಕರ್ಡೊ ನೈಗ್ಯಾರ್ ಕೂಡ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಪಿಪಿಎ ಶಾಸಕನನ್ನು ಈ ತಿಂಗಳ ಆರಂಭದಲ್ಲಿ ಪಕ್ಷದ ಪ್ರಾದೇಶಿಕ ಘಟಕ ಅಮಾನತು ಮಾಡಿತ್ತು. ಜೆಡಿಯು ಶಾಸಕರಾದ ತಲೇಮ್ ಟಬೊಹ್, ಹಯೆಂಗ್ ಮಾಂಗ್ಫಿ, ಜಿಕ್ಕೆ ಟಕೊ, ಡೊರ್ಜಿ ವಾಂಗ್ಡಿ ಖರ್ಮ, ಡೊಂಗ್ರು ಸಿಯೊಂಗ್ಜು ಮತ್ತು ಕಂಗ್‌ಗಾಂಗ್ ಟಕು ಅವರು ಬಿಜೆಪಿ ಸೇರಿಕೊಂಡಿದ್ದಾರೆ. ನವೆಂಬರ್ 26ರಂದು ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಸಿಯೊಂಗ್ಜು, ಖರ್ಮ ಮತ್ತು ಟಕು ಅವರಿಗೆ ಪಕ್ಷ ವಿರೋಧಿ ಚಟುವಟಿಕೆಗಳ ಕಾರಣ ಶೋಕಾಸ್ ನೋಟಿಸ್ ನೀಡಿದ್ದ ಜೆಡಿಯು, ಅವರನ್ನು ಪಕ್ಷದಿಂದ ಅಮಾನತು ಮಾಡಿತ್ತು. ಪಕ್ಷದ ಹಿರಿಯ ನಾಯಕರ ಗಮನಕ್ಕೆ ತಾರದೆಯೇ ಪಕ್ಷ ಶಾಸಕಾಂಗ ನಾಯಕರನ್ನಾಗಿ ತಲೇಮ್ ಟಬೊಹ್ ಅವರನ್ನು ಆರು ಶಾಸಕರು ಆಯ್ಕೆ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಈಗ ಈ ಶಾಸಕರು ಜೆಡಿಯುಗೆ ಕೈಕೊಟ್ಟು ಕೇಸರಿ ಪಾಳೆಯಕ್ಕೆ ಕಾಲಿರಿಸಿದ್ದಾರೆ.  ಅರುಣಾಚಲ ಪ್ರದೇಶದಲ್ಲಿ ಕಳೆದ ವರ್ಷವಷ್ಟೇ ಜೆಡಿಯು ರಾಜ್ಯಮಟ್ಟದ ಪಕ್ಷ ಎಂದು ಪರಿಗಣಿಸಲ್ಪಟ್ಟಿತ್ತು.

41 ಸೀಟುಗಳನ್ನು ಗೆದ್ದಿದ್ದ ಬಿಜೆಪಿಯ ಬಳಿಕ 7 ಕ್ಷೇತ್ರಗಳಲ್ಲಿ ಗೆದ್ದು ಎರಡನೆಯ ಸ್ಥಾನ ಪಡೆದಿತ್ತು. ಅರುಣಾಚಲ ಪ್ರದೇಶದಲ್ಲಿ ಬಿಜೆಪಿಯ ಏಕೈಕ ಎದುರಾಳಿಯಾಗಿದ್ದರೂ ಅದು ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡಿತ್ತು. ಬಿಜೆಪಿ ವಿರುದ್ಧ ಅಸಅರುಣಾಚಲ ಪ್ರದೇಶದಲ್ಲಿ ಬಿಜೆಪಿ ತನ್ನನ್ನು ವಂಚಿಸಿದೆ ಎಂದು ನಿತೀಶ್ ಕುಮಾರ್ ಅವರಿಗೆ ಆಪ್ತರಾಗಿರುವವರು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ವಾರಾಂತ್ಯದಲ್ಲಿ ನಡೆಯಲಿರುವ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ. ಆರು ಮಂದಿ ಶಾಸಕರ ಬಿಜೆಪಿ ಸೇರ್ಪಡೆಯಿಂದ ವಿರೋಧಪಕ್ಷದ ಬಲ 12 ಕ್ಕೆ ಕುಸಿದಿದೆ. ಕಾಂಗ್ರೆಸ್ ಮತ್ತು ನ್ಯಾಷನಲ್ ಪೀಪಲ್ಸ್ ಪಾರ್ಟಿಯ ತಲಾ ನಾಲ್ವರು, ಜೆಡಿಯುದ ಒಬ್ಬರು ಮತ್ತು ಮೂವರು ಪಕ್ಷೇತರರು ವಿರೋಧಪಕ್ಷದಲ್ಲಿದ್ದಾರೆ.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/