ಕಳೆದವರ್ಷ ಕೊಚ್ಚಿಹೋದ ಸೇತುವೆಗೆ ಇನ್ನೂ ಸಿಕ್ಕಿಲ್ಲ ಪರಿಹಾರ! ಇದು ಈ ಕ್ಷೇತ್ರದ ಜನರ ಪಾಡುಚಿಕ್ಕಮಗಳೂರು: 2019ರ ಆಗಸ್ಟ್ ತಿಂಗಳಲ್ಲಿ ಸುರಿದ ಮಹಾಮಳೆಗೆ ಕೊಚ್ಚಿ ಹೋದ ಸೇತುವೆ ಇನ್ನೂ ನಿರ್ಮಾಣವಾಗದ ಹಿನ್ನೆಲೆ ಮತ್ತೆ ಮಳೆಗಾಲ ಬಂತೆಂದು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಂಕೇನಹಳ್ಳಿ ಜನ ಆತಂಕಕ್ಕೀಡಾಗಿದ್ದಾರೆ. ಸರ್ಕಾರ ತಾತ್ಕಾಲಿಕವಾಗಿ ಕಬ್ಬಣದ ಕಾಲುಸಂಕವನ್ನ ನಿರ್ಮಾಣ ಮಾಡಿತ್ತು. ಆದರೆ ಈ ವರ್ಷ ಸುರಿದ ಅಕಾಲಿಕ ಮಳೆಯಿಂದ ಆ ಸೇತುವೆಯೂ ಇಂದೋ-ನಾಳೆಯೋ ಎಂದು ದಿನ ಎಣಿಸುತ್ತಿರೋದ್ರಿಂದ ಬಂಕೇನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಏಳೆಂಟು ಹಳ್ಳಿಯ ಜನ ಕಂಗಾಲಾಗಿದ್ದಾರೆ. ತಾತ್ಕಾಲಿಕವಾಗಿ ಕಬ್ಬಿಣದ ಕಾಲುಸಂಕ ನಿರ್ಮಿಸಿದ್ದ ಶಾಸಕರು ಹಾಗೂ ಅಧಿಕಾರಿಗಳು ಇಂದಿಗೂ ಇತ್ತ ತಲೆ ಹಾಕಿ ಹಾಕಿಲ್ಲ. ಆ ಕಾಲು ಸಂಕ ಕೂಡ ಹೇಮಾವತಿ ನೀರಿನ ರಭಸಕ್ಕೆ ಕಾಲುಸಂಕ ನಿಂತಿರೋ ಹಿಂದೆ-ಮುಂದಿನ ಮಣ್ಣು ಕುಸಿಯುತ್ತಿರುವುದರಿಂದ ಈ ಸಂಕವೂ ಶೀಘ್ರದಲ್ಲೇ ಹೇಮಾವತಿಗೆ ಬಲಿಯಾಗುವ ಆತಂಕ ಸ್ಥಳೀಯರಲ್ಲಿ ಮೂಡಿದೆ.

ಸಂಕ ನಿರ್ಮಿಸಿದ ಅಧಿಕಾರಿಗಳು ಅದಕ್ಕೆ ಬೇಕಾದ ಸೂಕ್ತ ಭದ್ರತೆ ಕಲ್ಪಿಸಿಲ್ಲ ಅನ್ನೋದು ಸ್ಥಳೀಯರ ಮಾತು. ಕಬ್ಬಣದ ಕಾಲುಸೇತುವೆ ತಂದರು. ಈ ತುದಿಯಿಂದ ಆ ತುದಿಗೆ ಇಟ್ಟು ಹೋದರು. ಅದರ ಪರಿಣಾಮವೇ ಸೇತುವೆ ಈ ಸ್ಥಿತಿ ತಲುಪಿದ ಅಂತಾರೆ ಸ್ಥಳೀಯರು. ಅಷ್ಟೆ ಅಲ್ಲದೆ, ಸೇತುವೆ ಮಧ್ಯ ಹಾಗೂ ನೀರು ಹರಿಯುವ ಜಾಗದಲ್ಲಿ ಸಂಕಕ್ಕೆ ಸಪೋರ್ಟಿಂಗ್ ಪಿಲ್ಲರ್ ಇಟ್ಟಿರೋ ಅಧಿಕಾರಿಗಳು ಸಿಮೆಂಟ್ ಪೈಪಿನ ಮೇಲೆ ಸೇತುವೆಯನ್ನ ನಿಲ್ಲಿಸಿದ್ದಾರೆ. ಇದು ತಡೆಯುತ್ತಾ, ಮಳೆ ಬಂದರೆ ಕೊಚ್ಚಿ ಹೋಗುತ್ತೆ, ಸೇತುವೆಯ ಎರಡೂ ಬದಿ ಹಾಗೂ ಮಧ್ಯದಲ್ಲಿ ಗಟ್ಟಿಯಾದ ಗ್ರಿಪ್ ಇಲ್ಲ ಎಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಈಗ ಮತ್ತೆ ನಾಳೆ-ನಾಡಿದ್ದು ಎನ್ನುವಷ್ಟರಲ್ಲಿ ಮಳೆಗಾಲ ಆರಂಭವಾಗುತ್ತೆ. ಒಂದು ವೇಳೆ ಈ ಸೇತುವೆಯೂ ಕೊಚ್ಚಿ ಹೋದರೆ ನಮ್ಮ ಬದುಕು ಹೇಗೆಂದು ಸ್ಥಳೀಯರು ಚಿಂತಾಕ್ರಾಂತರಾಗಿದ್ದಾರೆ.

ಸ್ಥಳೀಯರೇ ನಿರ್ಮಿಸಿಕೊಂಡಿದ್ದ ಸೇತುವೆ ಕೊಚ್ಚಿ ಹೋಗಿತ್ತು: 2019ರಲ್ಲಿ ಕೊಚ್ಚಿ ಹೋಗಿದ್ದ ಸೇತುವೆಯಿಂದ ತೀವ್ರ ಸಂಕಷ್ಟಕ್ಕೀಡಾಗಿದ್ದ ಜನ ನಗರ ಪ್ರದೇಶಕ್ಕೆ ಬರಬೇಕೆಂದರೆ ಸುಮಾರು ಏಳೆಂಟು ಕಿ.ಮೀ. ಸುತ್ತಿಕೊಂಡು ಬರಬೇಕಿತ್ತು. ಅದಕ್ಕಾಗಿ 2019ರ ಮಳೆಗಾಲ ಮುಗಿಯುತ್ತಿದ್ದಂತೆ ಸ್ಥಳೀಯರೇ ಸೇತುವೆ ನಿರ್ಮಿಸಿಕೊಂಡಿದನಿರ್ಮಿಸಿಕೊಂಡಿದ.