40 ವರ್ಷದ ಬಳಿಕ ಹೊಸ ಸಾಧನೆ ಗೈದ ಚೀನಾದ ಚಾಂಗ್‌ಇ ಉಪಗ್ರಹ!

ಬೀಜಿಂಗ್‌: ಚಂದ್ರನ ಮೇಲ್ಮೈಯಿಂದ ಮಾದರಿಗಳನ್ನು ಸಂಗ್ರಹಿಸುವ ಚೀನಾದ ಮೊದಲ ಯತ್ನ ಯಶಸ್ವಿಯಾಗಿದೆ. ಮಾದರಿಗಳನ್ನು ಸಂಗ್ರಹಿಸಿದ ಚೀನಾದ ಉಪಗ್ರಹ ಚಾಂಗ್‌ಇ ಗುರುವಾರ ಬೆಳಿಗ್ಗೆ ಭೂಮಿಗೆ ಮರಳಿದೆ. 40 ವರ್ಷಗಳ ನಂತರ ಹೀಗೆ ಚಂದ್ರನ ಅಂಗಳದಿಂದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಚಾಂಗ್‌ಇ ಉಪಗ್ರಹವು ಉತ್ತರ ಚೀನಾದ ಸಿಜಿವಂಗ್‌ನಲ್ಲಿ ಸ್ಥಳೀಯ ಕಾಲಮಾನ ಬೆಳಿಗ್ಗೆ4 1.59 ಗಂಟೆಗೆ ತಲುಪಿತು ಎಂದು ಚೀನಾ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ (ಸಿಎನ್‌ಎಸ್‌ಎ) ತಿಳಿಸಿದೆ.

ಉಪಗ್ರಹದ ಉದ್ದೇಶ ಯಶಸ್ವಿಯಾಗಿದೆ ಎಂದು ಸಿಎನ್‌ಎಸ್‌ಎ ಮುಖ್ಯಸ್ಥ ಝಾಂಗ್ ಕೇಜಿಯಾನ್ ಪ್ರಕಟಿಸಿದರು. ಚೀನಾದ ಚಂದ್ರಯಾನ ಕುರಿತು ಮೂರು ಹಂತಗಳಲ್ಲಿ ಮೊದಲ ಯತ್ನ ಯಶಸ್ವಿಯಾಗಿದೆ. ಉಪಗ್ರಹವನ್ನು ನವೆಂಬರ್ 24ರಂದು ಕಕ್ಷೆಗೆ ಉಡಾವಣೆ ಮಾಡಲಾಗಿತ್ತು. 40ವರ್ಷಗಳ ನಂತರ ನಡೆದಿರುವ ಪ್ರಥಮ ಯತ್ನವಾಗಿತ್ತು. ಈ ಹಿಂದೆ ಅಮೆರಿಕ ಗಗನಯಾತ್ರಿಗಳನ್ನು ಕಳುಹಿಸಿ ಮಾದರಿ ಸಂಗ್ರಹಿಸಲು ಯತ್ನಿಸಿತ್ತು. ಅದಕ್ಕೂ ಹಿಂದೆ ರಷ್ಯಾ ಮಾನವರಹಿತ ಉಪಗ್ರಹ ಉಡಾವಣೆ ಮಾಡಿ ಇಂಥದೇ ಯತ್ನ ಕೈಗೊಂಡಿತ್ತು. ಆದರೆ, ಅಗ ಮಾದರಿ ಸಂಗ್ರಹಿಸಲು ಆಗಿರಲಿಲ್ಲ.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/