ನೀವು ಗೂಗಲ್‌ ಕ್ರೋಮ್‌ ಬಳಕೆದಾರರ?!  ಹಾಗಾದರೆ ಎಚ್ಚರ ಈ ಸುದ್ದಿಯನ್ನೊಮ್ಮೆ ಓದಿ!ಮುಂಬೈ: ಜನಪ್ರಿಯ ಬ್ರೌಸರ್‌ಗಳಾದ ಗೂಗಲ್‌ ಕ್ರೋಮ್‌ ಹಾಗೂ ಮೈಕ್ರೋಸಾಫ್ಟ್‌ ಎಡ್ಜ್‌ ಬಳಕೆದಾರರೇ ಎಚ್ಚರ. ಯಾಕಂದ್ರೆ, ಈ ಸಾಫ್ಟವೇರ್‌ʼಗಳನ್ನ ಬಳಸುವ ಕನಿಷ್ಠ 30 ಲಕ್ಷ ಮಂದಿಯ ಕಂಪ್ಯೂಟರ್‌ ಅಥವಾ ಲ್ಯಾಪ್‌ಟಾಪ್‌ಗಳು ರಹಸ್ಯ ವೈರಸ್‌ ದಾಳಿಗೆ ತುತ್ತಾಗಿವೆ. ಪ್ರಸಿದ್ಧ ಆಯಂಟಿವೈರಸ್‌ ಕಂಪನಿ ಅವಾಸ್ಟ್‌ ಬೆಚ್ಚಿ ಬೀಳಿಸುವ ಈ ಅಂಶವನ್ನ ಬಿಡುಗಡೆ ಮಾಡಿದ್ದು, ಜಗತ್ತಿನಾದ್ಯಂತ ಈ ಬ್ರೌಸರ್‌ಗಳನ್ನು ಬಳಸುವವರು ಡೌನ್‌ಲೋಡ್‌ ಮಾಡಿದ ಕೆಲ ಎಕ್ಸ್‌ಟೆನ್ಷನ್‌ಗಳಿಂದ ಅವ್ರ ಕಂಪ್ಯೂಟರ್‌ಗೆ ವೈರಸ್‌ ಸೇರಿಕೊಂಡಿದೆ ಎಂದಿದೆ. ಅವಾಸ್ಟ್‌ ಹೇಳುವಂತೆ, ಈ ವೈರಸ್‌ ಹರಿಬಿಡುತ್ತಿರುವುದು ಯಾಕೆ ಗೊತ್ತಾ? ಬಳಕೆದಾರರ ಜನ್ಮದಿನಾಂಕ, ಇ-ಮೇಲ್‌ ವಿಳಾಸ, ಕಂಪ್ಯೂಟರ್‌ನ ಮಾಹಿತಿ, ಅವರ ಆಸಕ್ತಿಗಳು, ಐಪಿ ಅಡ್ರೆಸ್‌ ಮುಂತಾದ ಮಾಹಿತಿಗಳನ್ನ ಕದ್ದು ಮಾರಾಟ ಮಾಡುವುದಕ್ಕಂತೆ.

ಇನ್ನು ಈ ವೈರಸ್‌ ಅದೆಷ್ಟು ವರ್ಷಗಳಿಂದ ದಾಳಿ ಮಾಡ್ತಿದ್ಯೋ ಗೊತ್ತಿಲ್ಲ. ಆದ್ರೆ, ಗಮನಕ್ಕೆ ಬಂದಿದ್ದು ಮಾತ್ರ ಈ ವರ್ಷದ ನವೆಂಬರ್‌ನಲ್ಲಿ ಎಂದಿದೆ. ಇಷ್ಟಕ್ಕೂ ಗೂಗಲ್‌ ಕ್ರೋಮ್‌ ಹಾಗೂ ಮೈಕ್ರೋಸಾಫ್ಟ್‌ ಎಡ್ಜ್‌ ಬ್ರೌಸರ್‌ ಮೂಲಕ ನಮ್ಮ ಕಂಪ್ಯೂಟರ್‌ ಪ್ರವೇಶಿಸೋದು ಹೇಗೆ? ಇದಕ್ಕೂ ಉತ್ತರ ನೀಡಿರುವ ಅವಾಸ್ಟ್‌, ‘ಗೂಗಲ್‌ ಕ್ರೋಮ್‌ ಹಾಗೂ ಮೈಕ್ರೋಸಾಫ್ಟ್‌ ಎಡ್ಜ್‌ ಬ್ರೌಸರ್‌ ಬಳಕೆದಾರರು ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ ಮುಂತಾದ ಸೋಷಿಯಲ್‌ ಮೀಡಿಯಾಗಳಿಂದ ಫೋಟೋ, ವಿಡಿಯೋ ಅಥವಾ ಇನ್ನಿತರ ಕಂಟೆಂಟ್‌ಗಳನ್ನ ಡೌನ್‌ಲೋಡ್‌ ಮಾಡುವ ಎಕ್ಸ್‌ಟೆನ್ಷನ್‌ಗಳನ್ನ ಅಳವಡಿಸಿಕೊಂಡಿರುತ್ತಾರೆ. ಅದರ ಜೊತೆಗೆ ಅವರು ಮಾಲ್‌ವೇರ್‌ಗಳನ್ನೂ ಡೌನ್‌ಲೋಡ್‌ ಮಾಡಿಕೊಂಡಿದ್ದು, ಈ ವೈರಸ್‌ಗಳು ಬಳಕೆದಾರರ ಖಾಸಗಿ ಮಾಹಿತಿಯನ್ನ ಕದ್ದು ವೈರಸ್‌ನ ಮಾರಾಟ ಮಾಡ್ತಿವೆ. ಯಾವುದೋ ವೆಬ್‌ಸೈಟ್‌ ಕ್ಲಿಕ್‌ ಮಾಡಿದರೆ ಇನ್ನಾವುದೋ ವೆಬ್‌ಸೈಟಿಗೆ ಕರೆದುಕೊಂಡು ಹೋಗುತ್ತಿದ್ದು, ಈ ಎಕ್ಸ್‌ಟೆನ್ಷನ್‌ಗಳಿಂದ ವೈರಸ್ ಬರುತ್ತೆ. ಆದ್ರೆ‌ ಈ ಸಂಗತಿ ಬಳಕೆದಾರರಿಗೆ ತಿಳಿಯುತ್ತಿಲ್ಲ ಎಂದು ಹೇಳಿದೆ.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/