VIDEO: ಗಾಯಗೊಂಡ ಹಸುವಿಗೆ ಚಿಕಿತ್ಸೆ ಕೊಡಿಸಲು ಹೆಲಿಕಾಪ್ಟರ್ ಮೂಲಕ ಕೊಂಡೊಯ್ದ ರೈತ!

ಸ್ವಿಜರ್ಲೆಂಡ್ನಲ್ಲಿ ರೈತನೊಬ್ಬ ಗಾಯಾಳು ಹಸುವಿನ ಚಿಕಿತ್ಸೆ ನೀಡಲು ಹೆಲಿಕಾಪ್ಟರ್ ಕರೆಸಿ ಅದರ ಮೂಲಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಹಸುವಿನ ಮೇಲೆ ಆತನಿಗಿರುವ ಕಾಳಜಿ ನೋಡಿ ಅಲ್ಲಿನ ಜನರು ಭಾರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.ಹಸುವು ಗಾಯದಿಂದ ನರಳುತ್ತಿತ್ತು. ಅದಕ್ಕೆ ಚಿಕಿತ್ಸೆ ಕೊಡಿಸಲು ಹೆಲಿಕಾಪ್ಟರ್ ಕರೆಸಿದ್ದಾನೆ. ಆಲ್ಪ್ಸ್ ಪರ್ವತ ಪ್ರದೇಶದಲ್ಲಿದ್ದ ಹಸುವನ್ನು ಏರ್ಲಿಫ್ಟ್ ಮಾಡಿ ಸುರಕ್ಷಿತ ಪ್ರದೇಶಕ್ಕೆ ಇಳಿಸಿ ನಂತರ ಚಿಕಿತ್ಸೆ ನೀಡಲು ಕರೆದುಕೊಂಡು ಹೋಗಿದ್ದಾನೆ.

ಇದನ್ನೂ ಓದಿ :  ಸಾಮಾನ್ಯ ಉಪ್ಪಿನಿಂದ ನೀವು  ಶ್ರೀಮಂತರಾಗಬಹುದು! ; ಇಲ್ಲಿದೆ ವಿಶೇಷ ಮಾಹಿತಿ.

ಇನ್ನು ಹಸುವನ್ನು ಹೆಲಿಕಾಪ್ಟರ್ ಮೂಲಕ ಕೊಂಡೊಯ್ಯುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಅನೇಕರು ರೈತನ ಕಾಳಜಿಗೆ ಪ್ರಶಂಸೆಯ ಕಾಮೆಂಟ್ ಬರೆದಿದ್ದಾರೆ. ಗಾಯದ ಹಸುವಿನ ಜೀವವನ್ನು ರಕ್ಷಿಸಲು ರೈತನ ತೋರಿರುವ ಕಾಳಜಿಗೆ ಮೆಚ್ಚುಗೆ ಹರಿಸಿದ್ದಾರೆ.