ಬೆಟ್ಟಿಂಗ್ ದಂಧೆಯಲ್ಲಿ ಸಿಕ್ಕಿಬಿದ್ದವನ ಬಳಿ ಇದ್ದ ಹಣ ಎಷ್ಟು ಗೊತ್ತಾ? ಸಿಸಿಬಿ ಬಿಚ್ಚಿಟ್ಟ ಸ್ಫೋಟಕ ಸತ್ಯಮಂಗಳೂರು: ಕ್ರಿಕೆಟ್ ಬೆಟ್ಟಿಂಗ್ ದಂಧೆ ಹೆಸರಲ್ಲಿ ಉದ್ಯಮಿಗಳನ್ನು ಫಿಕ್ಸ್ ಮಾಡಿ ಲಕ್ಷ ಲಕ್ಷ ಡೀಲ್ ಮಾಡಿರುವ ಆರೋಪವನ್ನು ಸಿಸಿಬಿ ಪೊಲೀಸರು ಎದುರಿಸುತ್ತಿದ್ದಾರೆ.

ಮುಂಬೈ ಮತ್ತು ಮಂಗಳೂರು ಉದ್ಯಮಿಗಳಿಂದ ಲಕ್ಷ ಲಕ್ಷ ಹಣವನ್ನು ಪಡೆದ ಆರೋಪ ಕೇಳಿಬಂದಿದೆ. ಇದೀಗ ಈ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ. ಉದ್ಯಮಿ ಕರುಣಾಕರ ಭಂಡಾರಿ ಎಂಬವರ ಮೇಲೆ ಬೆಟ್ಟಿಂಗ್ ವಿಚಾರದಲ್ಲಿ ಸಿಸಿಬಿ ದಾಳಿ ಮಾಡಿದ್ದರು. ಆಗ ಸಿಸಿಬಿ ಪಿಎಸ್‍ಐ ಕಬ್ಬಾಳ್ ರಾಜ್ 55 ಲಕ್ಷ ರೂ. ಪಡೆದಿದ್ದಾರೆ ಎಂದು ಆರೋಪ ಕೇಳಿಬಂದಿದೆ.

ಉದ್ಯಮಿ ಕರುಣಾಕರ ಭಂಡಾರಿ ಮಾತ್ರವಲ್ಕದೇ ನನ್ನ ಮುಂಬೈ ಹೆಳೆಯರಿಬ್ಬರ ಮನೆಗೂ ಕ್ರಿಕೆಟ್ ಬೆಟ್ಟಿಂಗ್ ಹೆಸರಲ್ಲಿ ದಾಳಿ ಮಾಡಿದ್ದಾರೆ ಎಂದು ಉದ್ಯಮಿಗಳ ಆಪ್ತ ಲಕ್ಷ್ಮೀಶ್ ಹೇಳಿದ್ದಾರೆ. ಸುಳ್ಳು ಕೇಸ್ ಹಾಕಿ ಮಾನಮರ್ಯಾದೆ ತೆಗೆಯೋದಾಗಿ ಬೆದರಿಸಿದ್ದಾರೆ. ಒಬ್ಬರಿಂದ 35 ಲಕ್ಷ ಹಣ ಇನ್ನೊಬ್ಬರಿಂದ 25 ಲಕ್ಷ ಹಣವನ್ನು ಪಡೆದಿದ್ದಾರೆ. ಹರೀಶ್ ಮತ್ತು ವಿಶ್ವಾಸ್ ಎಂಬವರಿಗೆ ಬೆದರಿಸಿ ಲಕ್ಷ ಲಕ್ಷ ಹಣವನ್ನು ಪಡೆದಿದ್ದಾರೆ. ಎಲ್ಲರೂ ಪ್ರತಿಷ್ಠಿತ ವ್ಯಕ್ತಿಗಳಾಗಿದ್ದು, ಮರ್ಯಾದೆಗೆ ಹೆದರಿ ಹಣವನ್ನು ನೀಡಿದ್ದಾರೆ. ಇವರೆಲ್ಲ ಸಿಐಡಿ ಪೊಲೀಸರ ಎದುರು ಬಂದು ಮಾಹಿತಿ ಕೊಡಲು ಸಿದ್ಧರಿದ್ದಾರೆ ಎಂದು ಲಕ್ಷ್ಮೀಶ್ ಹೇಳಿದ್ದಾರೆ.