ಅಂದುಕೊಂಡ ಕೆಲಸ ಕಾರ್ಯ ಸಿದ್ದಿಯಾಗಬೇಕೇ? ಈ ಒಂದು ಸಣ್ಣ ಉಪಾಯ ಮಾಡಿ ಬದಲಾವಣೆ ನೋಡಿ!ನೀವು ಅಂದುಕೊಂಡ ಕೆಲಸಗಳು ಆಗಬೇಕೆಂದರೆ, ಸರಿಯಾಗಿ ಮುಗಿಯ ಬೇಕೆಂದರೆ, ವ್ಯಾಪಾರ-ವ್ಯವಹಾರಗಳಲ್ಲಿ ಮನಸ್ಸಿಗೆ ನೆಮ್ಮದಿ ಸಿಗಬೇಕೆಂದರೆ, ಅಖಂಡ ಜಯವನ್ನು ಸಾಧಿಸಬೇಕೆಂದರೆ ನೀವು ಮನೆಯಿಂದ ಹೊರಡುವ ಮುನ್ನ ಈ ಒಂದು ದಾರವನ್ನು ಜೇಬಿನಲ್ಲಿಟ್ಟುಕೊಂಡು ಹೋಗಿ. ಈ ಚಿಕ್ಕ ತಂತ್ರವನ್ನು ಮಾಡಿನೋಡಿ ಬದಲಾವಣೆಗಳು ನಿಮ್ಮ ಜೀವನದಲ್ಲಿ ಉಂಟಾಗುತ್ತವೆ. ಈ ತಂತ್ರವನ್ನು ಮಾಡಬೇಕಾದರೆ ಯಾವುದೇ ಕಾರಣಕ್ಕೂ ಮಾಂಸಹಾರವನ್ನು ಸೇವಿಸಬಾರದು ಮತ್ತು ಮದ್ಯಪಾನ ಮಾಡಬಾರದು. ಮನೆಯಲ್ಲಿ ಯಾರಾದರೂ ಮಹಿಳೆಯರಿದ್ದರೆ ಅವರ ಕೈಯಲ್ಲಿ ಈ ತಂತ್ರವನ್ನು ಸಿದ್ಧಿ ಮಾಡಿಸಿಕೊಂಡು ಇಟ್ಟುಕೊಳ್ಳಬೇಕು.

ಮುಖ್ಯವಾಗಿ ಗುರುವಾರದ ದಿನ ಸ್ನಾನವಾದ ನಂತರ ಈ ಸಿದ್ದಿಯನ್ನು ಮಾಡಿಕೊಳ್ಳಬೇಕು. ಬಿಳಿ ಬಣ್ಣದ ದಾರವನ್ನು ತೆಗೆದುಕೊಂಡು ಅದನ್ನು ನೀವು ಅರಿಶಿನ ಬಣ್ಣದ ದಾರವನ್ನಾಗಿ ಮಾರ್ಪಾಡು ಮಾಡಿಕೊಳ್ಳಬೇಕು. ಒಂದು ಲೋಟದಲ್ಲಿ ನೀರನ್ನು ತೆಗೆದುಕೊಂಡು ಲೋಟಕ್ಕೆ ಬಿಳಿ ದಾರವನ್ನು ಅದ್ದಬೇಕು. ನಂತರ ದೇವರಕೋಣೆಯಲ್ಲಿ ಪೂಜೆಗೆ ಬಳಸುವ ಅರಿಶಿಣವನ್ನು ತೆಗೆದುಕೊಂಡು ಅದಕ್ಕೆ ಲೇಪನ ಮಾಡಬೇಕು. ತದನಂತರ ಇದು ಅರಿಶಿಣ ದಾರವಾಗುತ್ತದೆ. ನಂತರ ಕರ್ಪೂರದ ಬಿಲ್ಲೆಯನ್ನು ತೆಗೆದುಕೊಂಡು ಅರಿಶಿಣದ ದಾರಕ್ಕೆ ಉಜ್ಜಬೇಕು.

ಈ ದಾರವನ್ನು ಮನೆದೇವರ ಮುಂದಿಟ್ಟು ಸಂಕಲ್ಪ ಮಾಡಿಕೊಳ್ಳಬೇಕು. ಭಕ್ತಿಯಿಂದ ನಂಬಿಕೆಯಿಂದ ಸಂಕಲ್ಪವನ್ನು ಮಾಡಿಕೊಂಡು ಈ ದಾರವನ್ನು ನಮ್ಮ ಜೇಬಿನಲ್ಲಿಟ್ಟುಕೊಂಡು ಮನೆಯಿಂದ ಹೊರಟರೆ ಯಶಸ್ಸು ಸಿಗುತ್ತದೆ. ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುತ್ತದೆ. ಜೀವನದಲ್ಲಿ ಹೊಸ ಬೆಳಕು ಮೂಡುತ್ತದೆ. ಈ ದಾರವನ್ನು ತೆಗೆದುಕೊಳ್ಳುವುದಕ್ಕಿಂತ ಮುಂಚೆ ಸ್ನಾನವನ್ನು ಮಾಡಿರಬೇಕು. ಇದನ್ನು ಆರು ತಿಂಗಳಿಗೊಮ್ಮೆ ಮತ್ತು ವರ್ಷಕ್ಕೊಮ್ಮೆ ಚೇಂಜ್ ಮಾಡಬೇಕು. ಈ ರೀತಿ ತಂತ್ರವನ್ನು ಮಾಡುವುದರಿಂದ ಗುರುವಿನ ಅನುಗ್ರಹ ಸಿಗುತ್ತದೆ. ಇದರಿಂದಾಗಿ ಗುರುವಿನ ಮತ್ತು ಮನೆದೇವರ ಸಂಕಲ್ಪ ದೊರೆಯುತ್ತದೆ.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/