ರಾತ್ರೋರಾತ್ರಿ ಪ್ರಸಿದ್ಧಿ ಹೊಂದಿದ ‘ತೇರೀ ಮೇರೀ’ ರಾನು ಮಂಡಲ್ ಸ್ಥಿತಿ ಇದೀಗ ಹೇಗಿದೆ ನೋಡಿ!.ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಯಲ್ಲಿ ಕೊಡೆಹಿಡಿದಂತೆ ಎಂಬ ಒಂದು ಮಾತಿದೆ, ಅಂತೆಯೇ ಇಲ್ಲೊಬ್ಬ ವ್ಯಕ್ತಿಗೆ ಪವಾಡ ಸದೃಶ ಕೀರ್ತಿ ಮತ್ತು ಸಂಪಾದನೆ ಸಿಕ್ಕಿತ್ತು ಆದರೆ ಅದನ್ನು ನಿಭಾಯಿಸುವ ಶಕ್ತಿ ಇಲ್ಲದಿದ್ದರಿಂದ ಈಗ ಮತ್ತೆ ತಮ್ಮ ಹಳೆಯ ಜಾಗಕ್ಕೆ ಮರಳಿದ್ದಾಳೆ. ಅವಳ ಹೆಸರು ರಾನು ಮಂಡಲ್ ಗಂಡನನ್ನು ಕಳೆದುಕೊಂಡಿದ್ದ ಈಕೆ ಹಾಡು ಹೇಳಿಕೊಂಡು ಭಿಕ್ಷೆ ಬೇಡುತ್ತಿದ್ದಳು, ಇವಳ ಕಲೆಗೆ ಸಿಕ್ಕ ಬೆಲೆಯಿಂದಾಗಿ ಒಮ್ಮಿಂದೊಮ್ಮೆಲೇ ಬಹಳಷ್ಟು ಪ್ರಚಾರ ಸಿಕ್ಕಿತು. ಇದರಿಂದ ಅಹಂಕಾರ ನೆತ್ತಿಗೇರಿಸಿಕೊಂಡಿರುವ ಈಕೆ ಈಗ ಯಾವ ಪರಿಸ್ತಿತಿಯಲ್ಲಿದ್ದಾರೆ ಗೊತ್ತಾ? ರಾನು ಮಂಡೇಲ್ 1960 ನವೆಂಬರ್ 5 ರಂದು ವೆಸ್ಟ್ಬೆಂಗಾಲ್‌ನಲ್ಲಿ ಜನಿಸಿದ್ದರು, 20ನೇ ವಯಸ್ಸಿನಲ್ಲಿಯೇ ಬಾಬೂನ್ ಮಂಡಲ್ ಎಂಬುವವರಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಕ್ಲಬ್‌ಗಳಲ್ಲಿ ಹಾಡಿ ಜೀವಿಸುತ್ತಿದ್ದ ಇವರಿಗೆ ಒಂದು ಹೆಣ್ಣುಮಗು ಆಗಿತ್ತು, ಆಕೆ ದೊಡ್ಡವಳಾದ ಮೇಲೆ ಅವಳಿಗೆ ಮದುವೆ ಮಾಡಿ ಕಳುಹಿಸಿದ್ದರು.

ಕೆಲವು ವರ್ಷಗಳ ನಂತರ ರಾನು ಮಂಡೇಲ್ ಅವರ ಪತಿ ತೀರಿಹೋಗುತ್ತಾರೆ, ಇದರಿಂದ ರಾನು ಮಂಡೇಲ್ ಜೀವನ ಅಸ್ತವ್ಯಸ್ತಗೊಳ್ಳುತ್ತದೆ. ರಾನು ಮಂಡೇಲ್ ಹಾಡುವುದು ಅವರ ಮನೆಯವರಿಗೆ ಇಷ್ಟ ಇಲ್ಲದಿದ್ದ ಕಾರಣ ರಾನು ಆಕೆ ಮನೆಯಿಂದ ಹೊರಗೆ ಉಳಿಯಬೇಕಾಗುತ್ತದೆ. ಜೀವನೋಪಾಯಕ್ಕಾಗಿ ರೈಲ್ವೆಸ್ಟೇಷನ್‌ನಲ್ಲಿ ಹಾಡುತ್ತಾ ಭಿಕ್ಷೆಬೇಡುತ್ತಿದ್ದ ರಾನು ಮಂಡೇಲ್‌ನನ್ನು ಅತೀಂದ್ರ ಚಕ್ರವರ್ತಿಯೆಂಬುವವರು ನೋಡಿ ಇವರು ಹಾಡುವುದನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುತ್ತಾರೆ. ಅದಾದ ಮೇಲೆ ರಾನು ಮಂಡೇಲ್ ಬಹಳ ಫೇಮಸ್ ಆಗುತ್ತಾರೆ, ಈ ವೀಡಿಯೋ ನೋಡಿದ ಬಾಲೀವುಡ್‌ನ ಖ್ಯಾತ ಸಂಗೀತ ನಿರ್ದೇಶಕರು ರಾನು ಮಂಡೇಲ್‌ರನ್ನು ಕರೆಸಿ ಅವರಿಂದ ತೇರೀ ಮೇರೀ ಎಂಬ ಹಾಡು ಹೇಳಿಸಿದರು. ಇದು ಎಲ್ಲೆಡೆ ಬಹಳ ಸದ್ದುಮಾಡಿತ್ತು, ರಾನು ಮಂಡೇಲ್ ತನ್ನ ಕಂಠ ಸಿರಿಯಿಂದ ಜನರ ಮನಸನ್ನು ಕದ್ದಿದ್ದರು, ಇದರಿಂದ ಬಿಟ್ಟುಹೋಗಿದ್ದ ಮಗಳೂ ಕೂಡ ವಾಪಾಸಾಗಿದ್ದಳು. ಸಾಕಷ್ಟು ಹಣವನ್ನು ಕೂಡ ಗಳಿಸಿದ್ದಳು


ಜಾಹಿರಾತು: ನಿಮ್ಮ ಏನೇ ಸಮಸ್ಯೆ ಇದ್ದರೂ ಕೂಡಲೇ ಈ ಕೆಳಕಂಡ ಸಂಖ್ಯೆಗೆ ಕರೆ ಮಾಡಿ!

ಪಂಡಿತ್ ದಾಮೋದರ್ ಭಟ್
ದಕ್ಷಿಣ ಕರ್ನಾಟಕದ ಖ್ಯಾತ
ಜ್ಯೋತಿಷ್ಯರು ಮತ್ತು ಆಧ್ಯಾತ್ಮಿಕ ಚಿಂತಕರು
ನಿಮ್ಮ ಕುಟುಂಬದ ಯಾವುದೇ ಸಮಸ್ಯೆ ಹೇಳಿಕೊಳ್ಳಬಹುದಾದ
ಅಥವಾ ಅಲ್ಲದ, ವಿದ್ಯಾಭ್ಯಾಸ ವ್ಯವಹಾರದ ಕಷ್ಟ,
ಆರ್ಥಿಕ ಸಂಕಷ್ಟಕ್ಕೆ ಮೂಲಕಾರಣ ಮತ್ತು ಅದಕ್ಕೆ ಸೂಕ್ತ ಪರಿಹಾರ ಶತಸಿದ್ಧ!

ಈಗಲೇ ಕರೆಮಾಡಿ : 9008611444


ಆದರೆ ಈ ಪ್ರಖ್ಯಾತಿಯನ್ನು ರಾನು ಮಂಡೇಲ್‌ಗೆ ಜಾಸ್ತಿದಿನ ಉಳಿಸಿಕೊಳ್ಳಲಾಗಲಿಲ್ಲ, ಅಹಂಕಾರದ ಮದದಲ್ಲಿ ಪತ್ರಕರ್ತರು ಕೇಳುತ್ತಿದ್ದ ಪ್ರಶ್ನೆಗಳಿಗೆ ತಿನಿಸು ತಿನ್ನುತ್ತಾ ಉತ್ತರಿಸುತ್ತಿದ್ದಳು, ಯಾವುದೋ ಪ್ರಶ್ನೆಗೆ ಯಾವುದೋ ಉತ್ತರ ನೀಡುತ್ತಿದ್ದಳು ಜೊತೆಗೆ ಬಹಳ ಅತಿರೇಖದ ಮೇಕಪ್ ಬಳಿದುಕೊಂಡು ಒಂದೊಮ್ಮೆ ಸುದ್ದಿಯಾದಳು, ಹಾಗು ಒಂದು ಕಾರ್ಯಕ್ರಮದಲ್ಲಿ ಸಾಹಿತ್ಯವೇ ಮರೆತುಹೋಗಿ ಇರಿಸು ಮುರಿಸು ಮಾಡಿಕೊಂಡಿದ್ದೂ ಇದೆ, ಅದೇ ಕಾರ್ಯಕ್ರಮದಲ್ಲಿ ಇಂಗ್ಲೀಷ್ ಮಾತನಾಡಲು ಹೋಗಿ ಟ್ರೋಲ್ ಆಗಿದ್ದಳು. ಆದರೆ ಇವೆಲ್ಲಕ್ಕಿಂತ ಆಕೆ ಮಾಡಿದ ದೊಡ್ಡ ತಪ್ಪುಯೆಂದರೆ ಬಟ್ಟೆ ಅಂಗಡಿಯೊAದರಲ್ಲಿ ಅಭಿಮಾನಿಯೊಬ್ಬಳು ಪ್ರೀತಿಯಿಂದ ಮುಟ್ಟಿ ಮಾತನಾಡಿಸಲು ಬಂದಿದ್ದಕ್ಕೆ ಅವರೊಂದಿಗೆ ಅನುಚಿತ ವರ್ತನೆ ತೋರಿದ್ದಳು ಈ ಎಲ್ಲಾ ಕಾರಣದಿಂದ ಜನರ ಕೆಂಗಣ್ಣಿಗೆ ಗುರಿಯಾದ ರಾನು ಮಂಡೇಲ್‌ಗೆ ಈಗ ಯಾವುದೇ ಕಾರ್ಯಕ್ರಮಕ್ಕೆ ಆಹ್ವಾನ ಸಿಗುತ್ತಿಲ್ಲ, ಕೆಲಸ ಇಲ್ಲದೆ ಖಾಲಿ ಕುಳಿತಿರುವ ರಾನು ಮಂಡೇಲ್‌ಗೆ ಈಗ ಉಳಿದಿರುವುದು ಭಿಕ್ಷೆ ಬೇಡುವುದು ಮಾತ್ರ. ರಾನು ಮಂಡೇಲ್ ಈಗ ಮೊದಲಿದ್ದ ಸ್ಥಿತಿಗೇ ತಲುಪಿದ್ದಾಳೆ.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/