ಕೇವಲ ಹೀರೋಗನ್ನೇ ಬೆಂಬಲಿಸೋ ನೀವು ಎಂದಾದ್ರೂ ಇವರ ಸಾಧನೆ ಬಗ್ಗೆ ಓದಿದ್ದೀರಾ?



ಸಿನಿಮಾ ಲೋಕವೇ ಹಾಗೆ. ಈ ಬಣ್ಣದ ಲೋಕ ನಿತ್ಯವೂ ತನ್ನತ್ತ ಸಾವಿರಾರು ಜನರನ್ನು ಕೈಬೀಸಿ ಕರೆಯುತ್ತದೆ. ಹಾಗೆ ಬಳಿ ಬಂದ ಎಲ್ಲರನ್ನೂ ಅದು ಸುಲಭವಾಗಿ ಸ್ವಾಗತಕೋರುವುದಿಲ್ಲ. ಅನೇಕರು ನಿರಾಶರಾಗುತ್ತಾರೆ. ಇಂಥ ನಿರಾಶಕರಲ್ಲಿ ಉತ್ತರ ಕರ್ನಾಟಕದ ಹುಡುಗನೊಬ್ಬ. ಓದಿದ್ದು ಮೂರನೇ ತರಗತಿ ಆದರೂ ಸಹ ಸಿನಿಮಾ ನಟನಾಗಬೇಕೆಂದು, ಅವರಿವರ ಕೈ ಕಾಲಿಡಿದು ಮದ್ರಾಸ್ ತಲುಪಿದ ಹುಡುಗ ಅಲ್ಲಿಂದ ಬೆಂಗಳೂರಿನ ಕಂಠೀರವ ಸ್ಟುಡಿಯೋಗೆ ಬಂದು ತಲುಪಿದ. ಅಲ್ಲಿ ಆತನಿಗೆ ಯಾರ ನೆರವು ಸಿಗಲಿಲ್ಲ. ತಿನ್ನಲು ಊಟವಿಲ್ಲ ತಂಗಲು ಮನೆ ಇಲ್ಲ. ಹೀಗಿರುವಾಗ ಒಂದು ನಾಟಕದ ತಂಡ ಆತನನ್ನು ತನ್ನ ತಂಡದಲ್ಲಿ ಇರುವುದಾಗಿ ಕೇಳಿಕೊಂಡಿತು. ಆತನಿಗೆ 20ರೂ ಗಳ ನಗದು ಹಣವನ್ನು ಸಹ ಆ ತಂಡ ನೀಡಿತು.

ಹೀಗೆ ಚಿತ್ರರಂಗದಲ್ಲಿ ಚಿಕ್ಕ-ಚಿಕ್ಕ ಪಾತ್ರಗಳನ್ನು ಅಭಿನಯಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಈ ಕಲಾವಿದನ ಹೆಸರು ಶ್ರೀ ವೈಜನಾಥ್ ಬಿರಾದಾರ್. ಹಲವು ಪೋಷಕ ಮತ್ತು ಕಾಮಿಡಿ ಪಾತ್ರಗಳನ್ನು ನಿರ್ವಹಿಸಿದ ಇವರು ವಿಶೇಷವಾಗಿ ಭಿಕ್ಷುಕ ಪಾತ್ರದಲ್ಲಿ ಸೈ ಎನಿಸಿಕೊಂಡವರು. ಇವರು ಮೂಲತಃ ಬೀದರ್ ಜಿಲ್ಲೆಯವರು. ಇವರು ನಾಗಮ್ಮ ಹಾಗೂ ಬಸಪ್ಪ ದಂಪತಿಗಳ ನಾಲ್ಕು ಮಕ್ಕಳಲ್ಲಿ ಹಿರಿಯವರಾಗಿ 1952 ರ ಜೂನ್ 20ರಂದು ತೆಗಂಪೂರ್ ಎಂಬ ಗ್ರಾಮದಲ್ಲಿ ಜನಿಸುತ್ತಾರೆ. ಇವರು ನಾಲ್ಕನೇ ತರಗತಿ ಓದುತ್ತಿರುವಾಗ ಅವರ ತಂದೆ ನಿಧನ ಹೊಂದಿದರು. ಹಾಗಾಗಿ ತಾಯಿ ಇವರನ್ನು ಕೆಲಸಕ್ಕೆ ಕಳಿಸುತ್ತಿದ್ದರು. ಊರಿನಲ್ಲಿ ನಡೆಯುವ ಮುಖ್ಯ ಕಾರ್ಯಗಳಲ್ಲಿ ಇವರು ಹಾಡುಗಳನ್ನು ಹಾಡುತ್ತಿದ್ದರು. ಊರಿನಲ್ಲಿ ನಡೆಯುವ ಜಾತ್ರೆಗಳಲ್ಲಿ ಕೋಲಾಟ, ನಾಟಕಗಳನ್ನು ಮಾಡುತ್ತಿದ್ದರು. ಅಲ್ಲಿನ ಊರಿನ ಸ್ಥಳೀಯರಾದ ರಘುನಾಥ್ ಎಂಬುವವರು ಇವರ ಕಲೆಯ ಬಗ್ಗೆ ತಿಳಿದು ನಾಟಕ ಮಂಡಳಿಗೆ ಸೇರಿ, ಅಲ್ಲಿಂದ ಸಿನಿಮಾರಂಗಕ್ಕೆ ಪ್ರವೇಶಿಸುವಂತೆ ಸಲಹೆ ನೀಡಿದರು.

ಇವರಿಗೆ ಕನ್ನಡ ಪುಸ್ತಕಗಳನ್ನು ಕೊಂಡು ಓದುವಂತಹ ಅಭ್ಯಾಸವಿತ್ತು. ಹೀಗೆ ಕನ್ನಡ ಸಿನಿಮಾದ ವಿವರವಿರುವ ಒಂದು ಪುಸ್ತಕವನ್ನು ಓದುವಾಗ ಡಾಕ್ಟರ್ ರಾಜಕುಮಾರ್ ಅವರ ಬಗ್ಗೆ ಸಣ್ಣ ಲೇಖನ ಪ್ರಕಟವಾಗಿತ್ತು. ಅದರ ಹೆಸರು ಕಥಾನಾಯಕನ ಕಥೆ. ಇದರಿಂದ ಪ್ರೇರೇಪಿತರಾದ ಇವರು ಅಚಲವಾದ ಗುರಿ, ಶ್ರಮ, ನಿಷ್ಠೆ ಹಾಗೂ ಛಲ ಇರೋ ವ್ಯಕ್ತಿಗೆ ಯಾವುದೂ ಅಸಾಧ್ಯವಲ್ಲ ಎಂಬುದು ತಿಳಿಯಿತು. ಹೀಗೆ ನಾಟಕ ಕಂಪನಿಗೆ ಸೇರಿ ಅನೇಕ ಹಾಸ್ಯಪಾತ್ರಗಳಲ್ಲಿ ನಟಿಸಿದರು. ನಂತರ ಇವರು ಬರ ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದರು. ನಂತರ ಡಾಕ್ಟರ್ ರಾಜಕುಮಾರ್ ಕಾಶಿನಾಥ್ ಹಾಗೂ ಉಪೇಂದ್ರ ಅವರ ಸಹಾಯ ಪಡೆದು ಕನ್ನಡದ ಅತ್ಯುತ್ತಮ ಪೋಷಕ ಹಾಗೂ ಹಾಸ್ಯನಟರಾಗಿ ಹೊರಹೊಮ್ಮಿದರು. 58 ವರ್ಷದ ಬಿರಾದರ್ ಇಂದು 500 ಸಿನಿಮಾಗಳ ಹೊಸ್ತಿಲಲ್ಲಿ ನಿಂತಿದ್ದಾರೆ. ಇವರಿಗೆ ಅಂತರಾಷ್ಟ್ರೀಯ ಪ್ರಶಸ್ತಿಗಳು ಹಾಗೂ ರಾಜ್ಯ ಪ್ರಶಸ್ತಿಗಳು ಮುಡಿಗೇರಿವೆ.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/