ಗರುಡ ಪುರಾಣ ಎಂದರೇನು?, ಇದನ್ನು ಓದ ಬಾರದ?, ಇಂತಹ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.ಗರುಡ ಪುರಾಣ. ಈ ಹೆಸರು ಕೇಳಿದ ಕೆಲವರು, ಈ ಪುಸ್ತಕದಲ್ಲಿ ನಾವು ಸತ್ತ ಮೇಲೆ ನರಕಕ್ಕೆ ಹೋಗ್ತೀವಾ..? ಸ್ವರ್ಗಕ್ಕೆ ಹೋಗ್ತೀವಾ ಅಂತಾ ಕೊಟ್ಟಿರ್ತಾರೆ ಅಲ್ವಾ..? ನರಕಕ್ಕೆ ಹೋದ್ರೆ ಅಲ್ಲಿ ಯಾವ ಯಾವ ಶಿಕ್ಷೆ ಕೊಡ್ತಾರೆ ಅನ್ನೋ ಬಗ್ಗೆ ಹೇಳಿದ್ದಾರೆ ಅಲ್ವಾ.? ಅಂತಾ ಪ್ರಶ್ನೆ ಕೇಳ್ತಾರೆ. ಹಾಗಾದ್ರೆ ಗರುಡ ಪುರಾಣದಲ್ಲಿ ಬರೀ ಶಿಕ್ಷೆ ಬಗ್ಗೆಯೇ ಕೊಟ್ಟಿದ್ದಾರಾ..? ಇದನ್ನ ಜನ ಸಾಮಾನ್ಯರು ಓದಬಾರ್ದಾ..? ಈ ಪುಸ್ತಕವನ್ನ ಮನೆಗೆ ತಂದಿಟ್ಟುಕೊಳ್ಳಬಹುದಾ..? ಅನ್ನೋ ಬಗ್ಗೆ ತಿಳಿಯೋಣ ಬನ್ನಿ. ಮೊದಲನೇಯದಾಗಿ ಗರುಡ ಪುರಾಣ ಅಂದ್ರೇನು ಅಂತಾ ನೋಡೋಣ. ಗರುಡ ಮತ್ತು ಶ್ರೀವಿಷ್ಣುವಿನ ಮಧ್ಯೆ ನಡೆದ ಸಂಭಾಷಣೆಯೇ ಗರುಡ ಪುರಾಣ. ಗರುಡ ಪುರಾಣದಲ್ಲಿ ನರಕದಲ್ಲಿ ಯಾವ ಶಿಕ್ಷೆ ಸಿಗುತ್ತದೆ ಅಂತಾ ಹೇಳಲಾಗಿದ್ದು, ಇದರ ಜೊತೆಗೆ, ಪುನರ್ಜನ್ಮ, ಬ್ರಹ್ಮಾಂಡ ಸೃಷ್ಟಿ, ವಿಷ್ಣುವಿನ ದಶಾವತಾರದ ಬಗ್ಗೆ ಸೇರಿ ಹಲವು ವಿಷಯಗಳ ಬಗ್ಗೆ ಗರುಡ ಪುರಾಣದಲ್ಲಿ ಹೇಳಲಾಗಿದೆ.

ಇನ್ನು ಗರುಡ ಪುರಾಣವನ್ನ ಓದಬಹುದಾ ಎಂಬ ಪ್ರಶ್ನೆಗೆ ಉತ್ತರ. ಖಂಡಿತಾ ಗರುಡ ಪುರಾಣವನ್ನ ಓದಬೇಕು ಮತ್ತು ಕೇಳಿಸಿಕೊಳ್ಳಬೇಕು. ಕೆಲವೆಡೆ ಮನೆಯಲ್ಲಿ ಸಾವಾದಾಗ, ಸಕಲ ಸಂಸ್ಕಾರ ಮುಗಿದ ಬಳಿಕ ಗರುಡ ಪುರಾಣವನ್ನ ಓದುವ ಪದ್ಧತಿ ಇದೆ. ಈ ವೇಳೆ ಗರುಡ ಪುರಾಣ ಓದಿದವರು ಮತ್ತು ಕೇಳಿಸಿಕೊಂಡವರಿಗೆ ಪುಣ್ಯಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಉತ್ತಮ ರೀತಿಯಿಂದ ಜೀವನ ನಡೆಸಲು ಭಗವದ್ಗೀತೆ ಹೇಗೆ ಸಹಕಾರಿಯೋ, ಅದೇ ರೀತಿ ಗರುಡ ಪುರಾಣ ಕೂಡ ಸಹಕಾರಿಯಾಗಿದೆ. ಹಾಗಾಗಿ ಪ್ರತಿಯೊಬ್ಬರು ಒಮ್ಮೆಯಾದರೂ ಗರುಡ ಪುರಾಣವನ್ನ ಓದಲೇಬೇಕು. ಇನ್ನು ಇದನ್ನ ಮನೆಯಲ್ಲಿ ತಂದಿರಿಸಿದರೆ ತಪ್ಪೇನಿಲ್ಲ. ಆದ್ರೆ ದೇವರ ಕೋಣೆಯಲ್ಲಿಡಿ. ಅದನ್ನ ಮೈಲಿಗೆ ಮಾಡಬಾರದು.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/