ಭೂಮಿ ಮೇಲೆ ಚಲಿಸುವ ಅತಿ ಉದ್ದದ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾದ ಈ ಕಾರಿನ ಬಗ್ಗೆ ನಿಮಗೆ ತಿಳಿಯದ ಸಂಗತಿಗಳು ಇಲ್ಲಿವೆ.ಸಾಮಾನ್ಯವಾಗಿ ಎಲ್ಲರಿಗೂ ತಮ್ಮ ಬಳಿ ಒಂದು ಕಾರು ಇರಬೇಕಿತ್ತು ಅಥವಾ ನಾನು ಕೂಡ ಒಂದು ಕಾರು ತೆಗೆದುಕೊಳ್ಳಬೇಕು ಅಂತ ತುಂಬಾ ಜನರು ಅಂದುಕೊಂಡಿರುತ್ತಾರೆ. ಜಗತ್ತಿನಲ್ಲಿರುವ ವಿಚಿತ್ರ ಕಾರಿನ ನಿಗೂಢತೆಯನ್ನು ನಿಮಗೆ ತೋರಿಸ್ತೀವಿ ಈ ನ್ಯೂಸ್ ತುಂಬಾನೇ ಕುತೂಹಲಕಾರಿಯಾಗಿದೆ

ಕಾರು ಅಂದರೆ ಯಾರಿಗೇ ಇಷ್ಟಾ ಇಲ್ಲಾ ಹೇಳಿ. ಎಲ್ಲರಿಗೂ ಒಂದಲ್ಲ ಒಂದು ರೀತಿಯ ಶೋಕಿ ಇದ್ದೆ ಇರುತ್ತದೆ. ಅಂತಹ ಕೆಲ ವಿಚಿತ್ರ ಶೋಕಿಗಳು ನಮ್ಮ ಕಣ್ಣು ಮುಂದೆ ನೋಡಲು ಸಿಗುತ್ತವೆ. ಅಂತಹದ್ದೇ ವಿಚಿತ್ರ ಕಾರಿನ ಸತ್ಯವನ್ನು ನೀವಿಲ್ಲಿ ನೋಡಿ. ಕಾರಿನೊಳಗೆ ಇಡೀ ಮನೆಯೇ ಇದ್ದ ಹಾಗೇ ಇದೆ ಇದನ್ನು ನೋಡಿದ ತಕ್ಷಣ ನೀವು ನಿಬ್ಬೆರಗಾಗುವುದು ನೂರಕ್ಕೆ ನೂರರಷ್ಟು ನಿಜ ಈಗ ನಾವು ಹೇಳಹೊರಟಿರುವ ಕಾರಿನ ಹೆಸರು ದ್ ಅಮೇರಿಕನ್ ಡ್ರೀಂ. ನೋಡಿ ಹೆಸರಲ್ಲೇ ಇದೆ ಡ್ರೀಂ. ಕನಸ್ಸಿನಲ್ಲೇ ನಾವು ಸ್ವರ್ಗ ಕಾಣುವಂತೆ ಈ ದ್ ಅಮೇರಿಕನ್ ಡ್ರೀಂ ಕಾರಿನಲ್ಲೇ ನಾವು ಸ್ವರ್ಗವನ್ನೇ ಕಾಣಬಹುದು. ದ್ ಅಮೇರಿಕನ್ ಡ್ರೀಮ ಇದು ಜಗತ್ತಿನ ಅತಿ ಉದ್ದದ ಕಾರು. ಇನ್ನೂ ಬೇರೆ ಬೇರೆ ಕಾರುಗಳು ಉದ್ದದಲ್ಲಿ ಈ ಕಾರಿನೊಂದಿಗೆ ಪೈಪೋಟಿಯಲ್ಲಿ ಇವೆ.
ಆದರೆ ಇದನ್ನು ನೋಡುವುದು ಕಣ್ಣಿಗೆ ಮಾಹಾದಾನಂದವೇ ಸರಿ.

ಈ ಕಾರಿನ ಅಚ್ಚರಿಯ ಸಂಗತಿಗಳು:-
ದ್ ಅಮೇರಿಕನ್ ಡ್ರೀಂ ಕಾರಿನೊಳಗೆ ಒಂದು ಟಿ.ವಿ ಇದೆ ನಮಗೆ ಯಾವಗ ಬೇಕೊ ಆವಾಗ ನಾವು ಈ ಕಾರಿನೊಳಗೆ ಆರಾಮವಾಗಿ ಟಿ.ವಿ.ಕೂಡ ನೋಡಬಹುದು. ಇನ್ನೊಂದು ವಿಷಯವೆನಂದರೆ ಈ ಕಾರಿನೊಳಗೆ ಭಿನ್ನಭಿನ್ನವಾದ ಕಣ್ಣಿಗೆ ಆನಂದ ನೀಡುವ ಲೈಟಿಂಗ್ ಸಿಸ್ಟಮ್ಸ್ ಕೂಡ ಹೊಂದಿದೆ. ನಾವು ದೀಪಾವಳಿ ಸಮಯದಲ್ಲಿ ನಮ್ಮ-ನಮ್ಮ ಮನೆಗೆ ಯಾವ ರೀತಿಯ ಲೈಟಿಂಗ್ ಅಲಂಕಾರ ಮಾಡುತ್ತೇವೊ ಹಾಗೆಯೇ ಈ ಕಾರಿನೊಳಗೆ ಅಂತಹದ್ದೇ ಲೈಟಿಂಗ್ ಸಿಸ್ಟಮ್ ಇದೆ. ಕ್ಯಾಲಿಫೋರ್ನಿಯ ಕಸ್ಟಮರ್ ಗ್ರೂಪ್ ಎಂಬ ಕಾರು ತಯಾರಕರ ಕಂಪನಿ ಈ ವಿಶಿಷ್ಟ ದ್ ಅಮೇರಿಕನ್ ಡ್ರೀಂ ಕಾರನ್ನು ನಿರ್ಮಾಣಮಾಡಿದ್ದಾರೆ. ದ್ ಅಮೇರಿಕನ್ ಡ್ರೀಂ
ಕಾರಿನ ಉದ್ದ ಬರೋಬ್ಬರಿ 100 ಅಡಿ. ಊಹೆ ಮಾಡಿ ನೋಡಿ ಈ ಕಾರು ಎಷ್ಟು ಉದ್ದವಾಗಿ ಇರಬಹುದೆಂದು!ಸುಮಾರು 90ರ ದಶಕದಲ್ಲಿ ಈ ಕಾರು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಬುಕ್ ನಲ್ಲಿ ಸ್ಥಾನ ಪಡೆದು ಎಲ್ಲರೂ ಕಣ್ಣು ಹುಬ್ಬೆರುವಂತೆ ಮಾಡಿತ್ತು. ಇನ್ನೊಂದು ವಿಚಿತ್ರ ವೈಶಿಷ್ಟತೆ ಈ ಕಾರಿನಲ್ಲಿ ಒಂದು ಸ್ವಿಮಿಂಗ್ ಫೂಲ್ ಕೂಡ ಇದೆ. ನಾವು ವಿಶ್ರಾಂತಿಗಾಗಿ ಇಲ್ಲಿ ಸ್ವಿಮ್ ಕೂಡ ಮಾಡಬಹುದು ಎಂತಹ ಅದ್ಭುತ ಸಂಗತಿ. ನಾವು ಮನೆಯಲ್ಲಿ ಎನೆನೆಲ್ಲಾ ಮಾಡುತ್ತೇವೊ ಆ ಎಲ್ಲ ಚಟುವಟಿಕೆಗಳನ್ನು ಸಾರಾಗವಾಗಿ ದ್ ಅಮೇರಿಕನ್ ಡ್ರೀಂ ಕಾರಿನಲ್ಲೇ ಮಾಡಬಹುದು ಎಂಬುದು ಅಚ್ಚರಿಯ ಸಂಗತಿ. ಇನ್ನೊಂದು ಸಂಗತಿ ಈ ಕಾರು ಭೂಮಿ ಮೇಲೆ ಚಲಿಸುವ ಅತಿ ಉದ್ದದ ಕಾರು ಎಂಬ ಹೆಗ್ಗಳಿಕೆಗೆ ಕೂಡ ಪಾತ್ರವಾಗಿದೆ.

ಜಾಹಿರಾತು : ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/