ನೀವು ಕೊರೊನ ಸಂದರ್ಭದಲ್ಲಿ ಪ್ರಯಾಣ ಮಾಡಿತ್ತೀದ್ದಿರಾ? ಹಾಗಾದರೆ ಒಮ್ಮೆ ಇದನ್ನು ನೋಡಿ ಇಲ್ಲವಾದರೆ ಕಂಟಕ ಕಟ್ಟಿಟ್ಟ ಬುತ್ತಿ.!ಇಡೀ ದೇಶವನ್ನೇ ತನ್ನ ವಶಕ್ಕೆ ತೆಗೆದುಕೊಂಡ ಮಾರಕ ಕೊರೋನಾ ವೈರಸ್ ಹುಟ್ಟು ಪಡೆದು ಒಂದು ವರ್ಷ ಕಳೆದರೂ ಇನ್ನೂ ಇದರ ಪರಿಣಾಮ ಕಡಿಮೆಯಾಗಿಲ್ಲ. ಆದರೆ, ದೇಶದಲ್ಲಿ ಲಾಕ್ಡೌನ್ ತೆರವಾಗಿದ್ದು ಕಾರ್ಯಗಳು ಒಂದೊಂದಾಗಿ ಶುರುವಾಗಿದೆ. ಈಗಲೂ ಸರ್ಕಾರ ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಬನ್ನಿ ಎಂಬ ಸೂಚನೆ ನೀಡುತ್ತಲೆ ಇದೆ. ಅದರಲ್ಲೂ ಈ ಕೋವಿಡ್ ಸಮಯದಲ್ಲಿ ಬಸ್ನಲ್ಲಿ ಸಂಚರಿಸುವಾಗ ಸಾರ್ವಜನಿಕರು ಸಾಕಷ್ಟು ಎಚ್ಚರಿಕಯಿಂದ ಇರಬೇಕು. ನೀವು ಬಸ್ನಲ್ಲಿ ಹೋಗುವಾಗ ಪಾಲಿಸಬೇಕಾದ ಕೆಲ ನಿಯಮಗಳ ಬಗ್ಗೆ ಮಾಹಿತಿ ಇಲ್ಲಿದೆ.

*ನೀವು ದೂರದ ಊರಿಗೆ ಬಸ್ನಲ್ಲಿ ಸಂಚರಿಸಲು ಆನ್ಲೈನ್ನಲ್ಲಿ ಟಿಕೆಟ್ ಬುಕ್ ಮಾಡಿ.

*ನಿಮ್ಮದೆ ಆದ ಫೇಸ್ಮಾಸ್ಕ್ ಹಾಗೂ ಸ್ಯಾನಿಟೈಜರ್ ಬಳಸಿಕೊಳ್ಳಿ ಹಾಗೂ ಯಾರೊಂದಿಗೂ ಸುಖಾಸುಮ್ಮನೆ ಸಂಪರ್ಕ ಸಾಧಿಸಬೇಡಿ.

*ಪ್ರಯಾಣ ಬೆಳೆಸುವ ಮುನ್ನ ನಿಮ್ಮ ಟೆಂಪರೇಚರ್ ಅನ್ನು ಒಮ್ಮೆ ಪರೀಕ್ಷಿಸಿದರೆ ಉತ್ತಮ.

*ಬಸ್ ಹತ್ತಿ ಸೀಟ್ನಲ್ಲಿ ಕುಳಿತ ಬಳಿಕ ಯಾವುದೇ ಕಾರಣಕ್ಕೂ ಮಾಸ್ಕ್ ತೆಗೆಯಬೇಡಿ, ಜೊತೆಗೆ ಮೂಗು ಸಂಪೂರ್ಣ ಕವರ್ ಆಗುವಂತಹ ಮಾಸ್ಕ್ ಬಳಸಿ.

*ಬಸ್ ಏರುವ ಮುನ್ನ ಹಾಗೂ ಬಸ್ನಿಂದ ಇಳಿದ ತಕ್ಷಣ ಸ್ಯಾನಿಟೈಜರ್ ಉಪಯೋಗುಸುವುದನ್ನು ಯಾವುದೇ ಕಾರಣಕ್ಕೂ ಮರೆಯದಿರಿ.

*ಸೀನುವಾಗ ಮತ್ತು ಕೆಮ್ಮುವಾಗ ಕರವಸ್ತ್ರವನ್ನು ತಪ್ಪದೆ ಬಳಸಿ. ಆದಷ್ಟೂ ಸಾರ್ವಜನಿಕ ಅಂತರವಿರಲಿ.

*ಹೊರಡುವ ಮುನ್ನ ಮನೆಯಲ್ಲಿ ಬಿಸಿ ಮಾಡಿದ ನೀರನ್ನು ಬಾಟಲ್​ನಲ್ಲಿ ತೆಗೆದುಕೊಳ್ಳಿ ಹಾಗೂ ಅದನ್ನು ಮಾತ್ರ ಬಳಸಿ.

*ನೀವು ಯಾವ ಊರಿಗೆ ಪ್ರಯಾಣಿಸುತ್ತಿದ್ದಿರೋ ಆ ಊರಿನ ಕೋವಿಡ್ ಮಾರ್ಗಸೂಚಿ ಬಗ್ಗೆ ತಿಳಿದುಕೊಳ್ಳಿ ಮತ್ತು ಜಾಗೃತವಾಗಿರಿ

*ಇನ್ನೂ ಕೊರೋನಾ ವೈರಸ್ ಲಕ್ಷಣಗಳಲ್ಲಿ ನಿಮ್ಮಲ್ಲಿದ್ದರೆ ಪ್ರಯಾಣ ಮಾಡಲೇಬೇಡಿ.

*ಕೋವಿಡ್ ಲಕ್ಷಣಗಳಿದ್ದಾಗ ಮುಖ, ಮೂಗು ಹಾಗೂ ಬಾಯಿಯನ್ನು ಮುಟ್ಟಬೇಡಿ.

*ಅನಗತ್ಯವಾಗಿ ಮಾಸ್ಕ್ ಅನ್ನು ಬಸ್​ನಲ್ಲಿ ಪ್ರಯಾಣ ಮಾಡುವಾಗ ತೆಗೆಯಬೇಡಿ.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/