ಈ ಕುರಿಯ ಬೆಲೆ 6 ಲಕ್ಷಕ್ಕಿಂತಲೂ ಹೆಚ್ಚಂತೆ ಏನಿದರ ವೈಶಿಷ್ಟ್ಯತೆ?!

ನಮಗೆ ತಿಳಿಯದೇ ಜಗತ್ತಿನಾದ್ಯಂತ ಎಷ್ಟೊ ವಿಚಿತ್ರ,ವಿಸ್ಮಯ ಸಂಗತಿಗಳು ಕಾಣ ಸಿಗುತ್ತವೆ. ಎಷ್ಟೋ ಸಂಗತಿಗಳು ಮಿಥ್ಯವಾಗಿ ಊಹಾಪೋಹಗಳನ್ನು ಹೊಂದಿರುತ್ತವೆ. ಕೆಲವರು ತಮ್ಮ ಪ್ರಚಾರಕ್ಕೆ ಸುಳ್ಳು ಸುದ್ದಿ ಹಬ್ಬಿಸಿ ವಿಚಿತ್ರ ಘಟನೆಗಳನ್ನು ಹುಟ್ಟು ಹಾಕುತ್ತಾರೆ. ಆದರೆ ಕೆಲ ನಂಬಲಾಗದ ಸತ್ಯ ಘಟನೆಗಳು ನಮ್ಮ ಕಣ್ಣ್ಮುಂದೆ‌ ನಡೆಯುತ್ತವೆ. ಅದರಲ್ಲಿ ಈ ಕುರಿಯ ಘಟನೆಯು ಅತೀ ವಿಚಿತ್ರವಾಗಿದೆ. ನೂರಕ್ಕೆ ನೂರರಷ್ಟು ನೀವು ಈ ಹಿಂದೆ ಇಂತಹ ವಿಷಯ ಕೇಳಿರುವುದಿಲ್ಲ.

ನೀವು‌ ನೋಡುತ್ತಿರುವ ಈ ವಿಚಿತ್ರ ಘಟನೆ ಸಂಭವಿಸಿದ್ದು ಗಡಿನಾಡು ಎಂದೇ ಪ್ರಸಿದ್ಧಿ ಪಡೆದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿ ಎಂಬ ಗ್ರಾಮದಲ್ಲಿ, ಒಬ್ಬ ಕುರಿಗಾಹಿ ಹತ್ತಿರ ವೈಶಿಷ್ಟತೆ ಹೊಂದಿರುವ ಕುರಿಯನ್ನು ನೋಡಲು ಜನ ನೂಕುನುಗ್ಗುತ್ತಿದ್ದಾರೆ, ಈ ವಿಚಿತ್ರ ಕುರಿಯನ್ನು ನೋಡಲು ಮೂಲೆಮೂಲೆಯಿಂದ ಜನಸಾಗರ ಹರಿದುಬರುತ್ತಿದೆ. ಕುರಿಯ ಯಜಮಾನನಿಗೆ ಎಲ್ಲಿಲ್ಲದ ಹರ್ಷ,ಸಂಭ್ರಮ. ಇದನ್ನು ನೋಡಲು ಮಾತ್ರ ಜನ ಬರುತ್ತಿಲ್ಲ , ಇದನ್ನು ಕೊಂಡುಕೊಳ್ಳಲು ವ್ಯಾಪಾರಸ್ಥರು ತುದಿಗಾಲಿನಲ್ಲಿ ನಿಂತಿದ್ದಾರೆ. ಒಬ್ಬರಿಗಿಂತ ಒಬ್ಬರು ಹೆಚ್ಚು ಬೆಲೆ ಕೊಟ್ಟಾದರು ಸರಿ ಆ ಕುರಿಯನ್ನು ಖರೀದಿಸಲು ಪ್ರಯತ್ನಿಸಿತ್ತಿದ್ದಾರೆ.ಆದರೆ ವ್ಯಾಪಾರಸ್ಥರ ಬೆಲೆಗೆ ಯಜಮಾನ ಕ್ಯಾರೆ ಎನ್ನುತ್ತಿಲ್ಲ

ಈ ಕುರಿಗೆ ಈಗಾಗಲೇ ತುಂಬಾ ವ್ಯಾಪಾರಸ್ಥರು 3.5 ಲಕ್ಷಕ್ಕಿಂತ ಹೆಚ್ಚು ಬೆಲೆ ನೀಡುವುದಾಗಿ ಬೇಡಿಕೆ ಇಟ್ಟರು ಕುರಿಯ ಒಡೆಯ ಕುರಿ ನೀಡಲು ತಯಾರು ಇಲ್ಲ ಎಂಬುದು ಅಚ್ಛರಿಯ ಸಂಗತಿ. ಆತ ಮಾತ್ರ ಕುರಿಯನ್ನು 7 ಲಕ್ಷಕ್ಕಿಂತ ಅಧಿಕ ಬೆಲೆಗೆ ಮಾತ್ರ ಮಾರಾಟ ಮಾಡುತ್ತೇನೆ ಎಂದು ಹೇಳುತ್ತಾನೆ. ಇಷ್ಟೆಲ್ಲಾ ಚರ್ಚೆಗೆ ಗ್ರಾಸವಾಗುತ್ತಿರುವ ಕುರಿಯ ಬಗ್ಗೆ ನಿಮಗೂ ಕೂತುಹಲ ಇರಬಹುದು. ಈ ದುಬಾರಿ ಕುರಿಯ ವೈಶಿಷ್ಟತೆ ಏನು? ಈ ಕುರಿಯ ಹಣೆಯ ಮೇಲೆ ಚಂದ್ರನ ಗುರುತು ಇದೆ. ಒಂದು ಚಂದ್ರನ ಗುರುತು ಇರುವ ಕುರಿಗಳೇ ಸಿಗುವುದು ವಿರಳ ಆದರೆ ಈ ಕುರಿಯ ಮೇಲೆ ಬರೋಬ್ಬರಿ 2 ಚಂದ್ರನ ಚಿಹ್ನೆಯ ಮಚ್ಛೆ ಇವೆ. ಈ ಒಂದೇ ಕಾರಣಕ್ಕೆ ಈ ಕುರಿ ಎಲ್ಲರ ಕಣ್ಣು ಹುಬ್ಬಾಗಿಸುವಂತೆ ಮಾಡಿದೆ.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/