ಎಷ್ಟೋ ಜನರಿಗೆ ಗೊತ್ತಿರದ ಶ್ರೀಕೃಷ್ಣನ ತಲೆಯ ಮೆಲಿನ ನವಿಲು ಗರಿಯ ರಹಸ್ಯ!? ಒಮ್ಮೆ ಓದಿ.ಶ್ರೀಕೃಷ್ಣ ತನ್ನ ತಲೆಯ ಮೇಲೆ ಕಿರೀಟದ ಬಳಿ ನವಿಲು ಗರಿಯನ್ನ ಇಟ್ಟುಕೊಳ್ಳುತ್ತಾನೆ. ಅದು ಅವನ ಅಲಂಕಾರಗಳಲ್ಲೊಂದು. ಆದ್ರೆ ಯಾಕೆ ಅವನು ನವಿಲು ಗರಿಯನ್ನ ಇಟ್ಟುಕೊಳ್ಳುತ್ತಾನೆ ಎಂಬ ಸತ್ಯ ನಿಮಗೆ ಗೊತ್ತೆ..? ಆ ಬಗ್ಗೆ ತಿಳಿಯೋಣ ಬನ್ನಿ. ರಾಮ ಲಕ್ಷ್ಮಣ ಸೀತೆ ವನವಾಸಕ್ಕೆ ತೆರಳುವ ಸಂದರ್ಭದಲ್ಲಿ ಸೀತೆಗೆ ಬಾಯಾರಿಕೆಯಾಗುತ್ತದೆ. ಎಷ್ಟು ಹುಡುಕಿದರೂ ನೀರು ಸಿಗುವುದಿಲ್ಲ. ಸೀತೆ ಬಾಯಾರಿಕೆಯಿಂದ ಬಳಲುತ್ತಾಳೆ. ಆಕೆಯ ಕಷ್ಟ ನೋಡಲಾಗದ ರಾಮ, ವನದೇವಿಯಲ್ಲಿ ನೀರು ಸಿಗುವಂತೆ ಬೇಡುತ್ತಾನೆ. ಆಗ ಆ ಸ್ಥಳಕ್ಕೆ ನವಿಲು ಬರುತ್ತದೆ. ಲೋಕದ ಬಾಯಾರಿಕೆ ನೀಗಿಸುವ ಶ್ರೀರಾಮನ, ಸೀತಾಮಾತೆಯ ಬಾಯಾರಿಕೆ ನೀಗಿಸುವ ಭಾಗ್ಯ ನನಗೆ ಸಿಕ್ಕಿದೆ. ನಾನು ನಿಮಗೆ ಕುಡಿಯಲು ನೀರು ಎಲ್ಲಿ ಸಿಗುತ್ತದೆ ಎಂದು ಹೇಳುತ್ತೇನೆ. ನೀವು ನನ್ನನ್ನು ಹಿಂಬಾಲಿಸಿ. ಆದ್ರೆ ನೀವು ಈ ವೇಳೆ ದಾರಿ ತಪ್ಪುವ ಸಾಧ್ಯತೆ ಇದೆ.

ಆದ್ದರಿಂದ ನನ್ನ ಒಂದೊಂದು ಗರಿಯನ್ನು ನಾನು ಚೆಲ್ಲುತ್ತ ಬರುವೆ ಅದನ್ನು ನೀವು ಹಿಂಬಾಲಿಸಿ ಎಂದು, ತನ್ನ ಒಂದೊಂದೆ ಗರಿ ಕಿತ್ತು ಬಿಸಾಕುತ್ತ ನವಿಲು ಮುಂದೆ ಸಾಗುತ್ತದೆ. ನವಿಲಿನ ಗರಿ ತನ್ನಿಂದ ತಾನೇ ಬಿದ್ದರೆ ತೊಂದರೆ ಇಲ್ಲ. ಆದರೆ ಅದನ್ನ ಕಿತ್ತು ತೆಗೆದರೆ ಅದರ ಜೀವವೇ ಹೋಗುತ್ತದೆ. ಆದರೆ ಆ ನವಿಲು ರಾಮನಿಗಾಗಿ ತನ್ನ ಜೀವ ಹೋದರೂ ಚಿಂತೆಯಿಲ್ಲದೇ, ನೀರಿರುವ ದಾರಿ ತೋರಿಸುತ್ತದೆ. ಎಲ್ಲ ಗರಿ ಹೋದ ಬಳಿಕ ಇನ್ನೇನು ನವಿಲು ಸಾಯುವ ಸ್ಥಿತಿ ತಲುಪುತ್ತದೆ. ಆಗ ರಾಮ ನೀನು ಸೀತೆಯ ಬಾಯಾರಿಕೆ ನೀಗಿಸಲು ನಿನ್ನ ಪ್ರಾಣವನ್ನೇ ಬಲಿ ಕೊಡುತ್ತಿರುವೆ. ಮುಂದಿನ ಯುಗದಲ್ಲಿ ನಾನು ನೀನು ಕಿತ್ತಿಟ್ಟ ಈ ನವಿಲು ಗರಿಯನ್ನ ಸದಾ ನನ್ನ ಬಳಿಯೇ ಇಟ್ಟುಕೊಳ್ಳುವೆ ಎನ್ನುತ್ತಾನೆ. ಹಾಗಾಗಿ ದ್ವಾಪರಯುಗದಲ್ಲಿ ಕೃಷ್ಣನ ರೂಪದಲ್ಲಿ ಬರುವ ರಾಮ ಎಂದಿಗೂ ತಲೆಯ ಮೇಲೆ ನವಿಲುಗರಿ ಇಟ್ಟುಕೊಂಡಿರುತ್ತಾನೆ.


ಜಾಹಿರಾತು: ನಿಮ್ಮ ಏನೇ ಸಮಸ್ಯೆ ಇದ್ದರೂ ಕೂಡಲೇ ಈ ಕೆಳಕಂಡ ಸಂಖ್ಯೆಗೆ ಕರೆ ಮಾಡಿ!

ಪಂಡಿತ್ ದಾಮೋದರ್ ಭಟ್
ದಕ್ಷಿಣ ಕರ್ನಾಟಕದ ಖ್ಯಾತ
ಜ್ಯೋತಿಷ್ಯರು ಮತ್ತು ಆಧ್ಯಾತ್ಮಿಕ ಚಿಂತಕರು
ನಿಮ್ಮ ಕುಟುಂಬದ ಯಾವುದೇ ಸಮಸ್ಯೆ ಹೇಳಿಕೊಳ್ಳಬಹುದಾದ
ಅಥವಾ ಅಲ್ಲದ, ವಿದ್ಯಾಭ್ಯಾಸ ವ್ಯವಹಾರದ ಕಷ್ಟ,
ಆರ್ಥಿಕ ಸಂಕಷ್ಟಕ್ಕೆ ಮೂಲಕಾರಣ ಮತ್ತು ಅದಕ್ಕೆ ಸೂಕ್ತ ಪರಿಹಾರ ಶತಸಿದ್ಧ!

ಈಗಲೇ ಕರೆಮಾಡಿ : 9008611444


ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/