ಮೊಬೈಲ್ ಗಳಲ್ಲಿ ಇಂಟರ್ನೆಟ್ ಬಳಸುವಾಗ ಈ ಎರಡು ತಪ್ಪುಗಳನ್ನು ಅಪ್ಪಿತಪ್ಪಿಯೂ ಈ ಮಾಡಬೇಡಿ!

ಸ್ನೇಹಿತರೆ, ನಾವು ಪ್ರತಿದಿನ ಮೊಬೈಲ್ ಫೋನ್ ಗಳಲ್ಲಿ ಇಂಟರ್ನೆಟ್ ಗಳನ್ನು ಬಳಸುತ್ತಿರುತ್ತೀವಿ ಒಂದುವೇಳೆ ಇಂಟರ್ನೆಟ್ ಪ್ಯಾಕ್ ಕಾಲಿ ಆದ ಸಂದರ್ಭದಲ್ಲಿ ನಮ್ಮ ಪೋನ್ ಖಾಲಿ ಡಬ್ಬ ಎಂದು ಭಾಸವಾಗುತ್ತದೆ. ಇಂಟರ್ನೆಟ್ ಅಲ್ಲಿ ನಾವು ಬ್ಯಾಂಕಿಂಗ್ ಸೇವೆಗಳನ್ನು ಬಳಸುತ್ತಿರುತ್ತೇವೆ, ಹಣವನ್ನು ವರ್ಗಾಯಿಸುತ್ತಿರಯತ್ತೇವೆ, ಹಾಗೇ ಹಲವು ಅರ್ಜಿಗಳನ್ನು ಸಲ್ಲಿಸುತ್ತಿರುತ್ತೇವೆ. ಈ ಸಂದರ್ಭಗಳಲ್ಲಿ ನಾವು ಕೆಲವು ತಪ್ಪುಗಳನ್ನು ಮಾಡುತ್ತಿರುತ್ತೇವೆ. ಈ ಸಣ್ಣ ಪುಟ್ಟ ತಪ್ಪುಗಳು ಕೆಲವೊಮ್ಮೆ ನಮ್ಮ ಮೊಬೈಲ್ ಗಳಲ್ಲಿ ದೊಡ್ಡದಾದ ಅನಾಹುತಗಳನ್ನು ಸೃಷ್ಟಿಸುತ್ತವೆ. ಹಾಗದರೆ ಆ ತಪ್ಪುಗಳು ಯಾವುದು? ಹಾಗು ಅದನ್ನು ಹೇಗೆ ಸರಿಪಡಿಸುವುದು ಬನ್ನಿ ತಿಳಿಯೋಣ.

ಮೊದಲನೆಯದಾಗಿ ಆನ್ಲೈನ್ ಅಲ್ಲಿ ನಾವು ಫಾರ್ಮ್ ಭರ್ತಿ ಮಾಡುವಾಗ ಹಾಗು ಅರ್ಜಿ ಸಲ್ಲಿಸುವಾಗ ನಮಗೆ ಎರಡು ವಿಧದ ವೆಬ್ಸೈಟ್ ಕಾಣಸಿಗುತ್ತದೆ ಒಂದು http// ಹಾಗು ಎರಡನೇಯದು https//. ಇವೆರಡಕ್ಕೆ ಇರುವ ವ್ಯತ್ಯಾಸವನ್ನು ನೋಡೋದಾದರೆ, HTTP : Hypertext Transfer Protocol ಹಾಗು HTTPS : Hypertext Transfer Protocol Secure ಎಂದು. ಹಾಗಾಗಿ ನೀವು ಆನ್ಲೈನ್ ಅಲ್ಲಿ ಫಾರ್ಮ್ ಭರ್ತಿ ಮಾಡುವಾಗ ಹಾಗು ಹಣ ವರ್ಗಾವಣೆ ಮಾಡುವಾಗ ಏನಾದರೂ HTTP ಎಂಬ ವೆಬ್ ಕಂಡುಬಂದಲ್ಲಿ ಆ ಕೆಲಸವನ್ನು ಅಲ್ಲಿಗೇ ನಿಲ್ಲಿಸಿಬಿಡಿ. HTTPS ಎಂಬ ವೆಬ್ ಗಳಲ್ಲಿ ಮಾತ್ರ ಬ್ಯಾಂಕ್ ಹಾಗು ಇತರೆ ಹಣಕಾಸಿಗೆ ಸಂಬಂಧಿಸಿದ ವ್ಯವಹಾರಗಳನ್ನು ಮಾಡಿ. HTTP ಅಲ್ಲಿ ನೀವು ಬಳಸುವ data ಗಳು ವೆಬ್ ಡೆವಲಪರ್ ಗಳಲ್ಲಿ ಸೇವ್ ಆಗುತ್ತದೆ ಹಾಗೆಯೇ ಅವರು ನಿಮ್ಮ data ಗಳನ್ನು ವೀಕ್ಷಿಸಲು ಸಾದ್ಯವಿದೆ.

ಇನ್ನೂ ಮುಂದಿನ ವಿಷಯಕ್ಕೆ ಬರುವುದಾದರೆ, ಸ್ಮಾರ್ಟ ಮೊಬೈಲ್ ಬಳಸುವವರು ಫೇಸ್‌ಬುಕ್‌ ಅನ್ನು ಖಂಡಿತವಾಗಿ ಬಳಸುತ್ತಾರೆ. ಇದರಲ್ಲಿ ನಿಮ್ಮ ಸ್ನೇಹಿತರು, ಸಂಬಂಧಿಕರು, ಬಂಧುಗಳು ಕೆಲವು ಲಿಂಕ್ ಗಳನ್ನು ಕಳಿಸುತ್ತಿರುತ್ತಾರೆ. ಉದಾಹರಣೆಗೆ, valentine’s day ಹತ್ತಿರವಾಗುತ್ತಿದ್ದಂತೆ ನಿಮ್ಮನ್ನು ಎಸ್ಟು ಜನ ಲವ್ ಮಾಡುತ್ತಿದ್ದಾರೆ?, ನಿಮ್ಮ ಮೇಲೆ ಎಸ್ಟು ಜನರಿಗೆ crush ಆಗಿದೆ?, ಮುಂದಿನ ಐದು ವರ್ಷಗಳಲ್ಲಿ ನೀವು ಹಣಗಳಿಸುತ್ತೀರ?, ಇದನ್ನು ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಕ್ ಮಾಡಿ ಎಂದು ಒಂದು ಲಿಂಕ್ ಅನ್ನು ಕಳಿಸಿರುತ್ತಾರೆ. ಇದನ್ನು ನಿಮಗೆ ಶೇರ್ ಮಾಡಿರುವವರು ಮೊದಲೇ ಅದನ್ನು ಪ್ರಯತ್ನಿಸಿರುತ್ತಾರೆ, ಅವರಿಗೆ ಒಂದು ಫಲಿತಾಂಶ ಬಂದಿರುತ್ತದೆ ಅದಕ್ಕೆ ಅವರು ಖುಷಿಯಿಂದ ನಿಮಗೂ ಕೂಡ ಶೇರ್ ಮಾಡಿರುತ್ತಾರೆ. ನೀವು ಉತ್ಸುಕತೆಯಿಂದ ಆ ಒಂದು ಲಿಂಕ್ ಅನ್ನ ಕ್ಲಿಕ್ ಮಾಡುತ್ತೀರ , ಕ್ಲಿಕ್ ಮಾಡಿದ ನಂತರ ಆ ಒಂದು ಲಿಂಕ್ ಬೇರೆ ಒಂದು ವೆಬ್ಸೈಟ್ ಗೆ re direct ಆಗುತ್ತದೆ. ಅಲ್ಲಿ ಅವರು ಫೇಸ್ಬುಕ್ authentication permission ಕೇಳುತ್ತಾರೆ ಒಂದು ವೇಳೆ ನೀವು ಅದನ್ನು Allow ಮಾಡಿದ್ದೇ ಆಗಿದ್ದಲ್ಲಿ, ನಿಮ್ಮ ಒಂದು ಫೇಸ್ಬುಕ್ ಖಾತೆಯ ಎಲ್ಲಾ data ಗಳನ್ನು ಅವರು ತಿಳಿದುಕೊಳ್ಳುತ್ತಾರೆ.

ನೀವು ನಿಮ್ಮ ಖಾತೆಯನ್ನು private ಮಾಡಿದ್ದರೂ ಸಹ ಅದನ್ನು ಅವರು read ಮಾಡುತ್ತಾರೆ. ಹಾಗೇ developer ನಲ್ಲಿ ನಿಮ್ಮ data ಸೇವ್ ಕೂಡ ಆಗುತ್ತದೆ. ಆ ನಿಮ್ಮ data ವನ್ನು ಪರಿಶೀಲಿಸಿದ ಮೇಲೆ ನಿಮಗೆ ಒಂದು ಫಲಿತಾಂಶವನ್ನು ಕೊಡುತ್ತಾರೆ. ಆ ಫಲಿತಾಂಶವನ್ನು ಕಂಡು ನೀವು ಪುಲ್ ಖುಷಿಯಾಗುತ್ತೀರ, ಹೌದು ಸರಿಯಾಗಿದೆ ಎಂದು ಭಾವಿಸಿ ನೀವೂ ಕೂಡ ಅದನ್ನು ಇನ್ನಸ್ಟು ಜನಕ್ಕೆ ಶೇರ್ ಮಾಡುತ್ತೀರ. ಇದೇ ರೀತಿಯಲ್ಲಿ ಈ ಒಂದು chain_ ಬೆಳೆಯುತ್ತಾ ಹೋಗುತ್ತದೆ. ಆದರೆ ನೀವು Facebook Authentication Allow ಮಾಡಿದ್ದರಿಂದ ನಿಮ್ಮ data ನ ಓದಿ ನಿಮಗೆ ಫಲಿತಾಂಶ ಬಂದಿದೆ ಎಂದು ಯಾರು ಕೂಡ ಚಿಂತಿಸುವುದಿಲ್ಲ. ಹಾಗಾಗಿ ನಾವು ಹೇಳುವುದೇನೆಂದರೆ Facebook ನಲ್ಲಿ ಬರುವಂತಹ ಯಾವುದೇ ಲಿಂಕ್ ಮೇಲೆ ಕ್ಲಿಕ್ ಮಾಡಿ ಓಪನ್ ಮಾಡಲು ಹೋಗಬೇಡಿ ಇದರಿಂದಾಗಿ ಮುಂದೆ ಹಲವು ತೊಂದರೆಗಳು ಬೆಳೆಯುವ ಸಾಧ್ಯತೆ ಬಹಳಾ ಇರುತ್ತದೆ.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/