ದೇವರನ್ನು ಪ್ರಾರ್ಥಿಸುವಾಗ ಕಣ್ಣೀರು ಬಂದೆರೆ ಶುಭವೋ?,ಅಶುಭವೋ? ; ಇಲ್ಲಿದೆ ಮಾಹಿತಿ.ಹಿರಿಯರು ಹಾಕಿ ಕೊಟ್ಚ ಸನ್ಮಾರ್ಗದಲ್ಲಿ ದೈವ ಪೂಜೆಯು ಒಂದು. ದೈವ ಪೂಜೆ ಅಂದಾಕ್ಷಣ ನಮ್ಮ ಮನಸ್ಸು ಆಧ್ಷಾತ್ಮಿಕತೆ ಕಡೆಗೆ ವಾಲುತ್ತದೆ. ಕೆಲವರು ಇದನ್ನು ಆಧ್ಯಾತ್ಮಿಕತೆ ಹಾಗೂ ಭಾವನಾತ್ಮಕದಂತೆ‌ ನೋಡುತ್ತಾರೆ. ಕೆಲವರು ಮೂಢನಂಬಿಕೆ ಎನ್ನುತ್ತಾರೆ. ನಮ್ಮ ಹಿರಿಯರು ಪಾಲಿಸುತ್ತಿದ್ದ ಎಲ್ಲ ಆಚರಣೆಗಳು ಆಧ್ಯಾತ್ಮಿಕತೆಯ ಜೊತೆಗೆ ವೈಜ್ಞಾನಿಕವಾಗಿಯೂ ನಮಗೆ ಸಹಕಾರಿ ಎಂದು ತಿಳಿದಿದೆ. ನೀವು ಪೂಜೆಗೆ ಕುಳಿತ ಸಂದರ್ಭದಲ್ಲಿ ಕೆಲವೊಮ್ಮೆ ನಿಮ್ಮಲ್ಲಿ ಬದಲಾವಣೆ ಕಾಣಬಹುದು. ಕೆಲವರಲ್ಲಿ ಆಕಳಿಕೆ ಕಣ್ಣೀರು, ದಿವ್ಯ ಕಳೆ, ಆಲಸ್ಯ ಇಂತಹ ಹಲವಾರು ಭಾವನೆಗಳು ಗೋಚರವಾಗುವುದು ಸಹಜ. ಅಥವಾ ಪೂಜೆ ಮಾಡುವಾಗ ನಿಮ್ಮ ಮನಸ್ಸಿನಲ್ಲಿ ಕೆಟ್ಟ ಕೆಟ್ಟ ಬಗೆಯ ಆಲೋಚನೆಗಳು ಬಂದು ಮನಸ್ಸುನ್ನು ಹಾಳು ಮಾಡಿ ಪೂಜೆ ವ್ಯರ್ಥವಾಗುವುದು ಉಂಟು. ನೀವು ಪೂಜೆಗೆ ಕುಳಿತಾದ ನಿಮ್ಮಲ್ಲಿ ಬರುವ ಎಲ್ಲಾ ರೀತಿಯ ಕೆಟ್ಟ ಆಲೋಚನೆಗಳಿಗೆ ಕಾರಣ ಆ ಸ್ಥಳದಲ್ಲಿರುವ ಋಣಾತ್ಮಕ ಹಾಗೂ ಧನಾತ್ಮಕ ಅಲೆಗಳು. ಈ ಅಲೆಗಳೇ ನಮ್ಮ ಪೂಜಾ ಭಾವಗಳ ಮೇಲೆ ಹಿಡಿತವನ್ನು ಸಾಧಿಸುತ್ತವೆ. ಪೂಜಾ ಸಂದರ್ಭದಲ್ಲಿ ಧನಾತ್ಮಕ ಅಲೆಗಳು ಹೆಚ್ಚು ಇದ್ದಾಗ ನಿಮ್ಮ ಮನಸ್ಸು ಪ್ರಫುಲ್ಲತೆ ಹಾಗೂ ನಿಮ್ಮ ಬೇಡಿಕೆಗೆ ಉತ್ತಮವಾದ ಪ್ರತಿಫಲವು ದೊರೆಯುತ್ತದೆ.

ಆದರೆ ಋಣಾತ್ಮಕ ಅಲೆಗಳು ನಿಮ್ಮ ಬಳಿ ಕಂಡುಬಂದಾಗ ಋಣಾತ್ಮಕ ಅಲೆಗಳ ಇದ್ದಾಗ ನಿಮ್ಮಲ್ಲಿ ಕೆಟ್ಟ ಭಾವನೆ ಮೂಡುವುದು ಸಹಜ ಕೆಲವೊಮ್ಮೆ ನಾವು ಪೂಜೆಗೆ ಕುಳಿತಾಗ ಕೆಟ್ಟ ಆಲೋಚನೆಗಳು ಸಹ ಮೂಡುತ್ತವೆ. ಪೂಜೆಗೆ ಕುಳಿತಾಗ ಕೆಲವೊಮ್ಮೆ ನಿಮ್ಮಲ್ಲಿಯ ಏಕಾಗ್ರತೆಯ ಕೊರತೆಯಿಂದ ಹಾಗೂ ಭಕ್ತಿ ಭಾವಗಳ ಅಲಕ್ಷತೆಯಿಂದ ನಮ್ಮಲ್ಲಿಯ ಸ್ವಭಾವ ಕೂಡ ನಮ್ಮ ಆಲೋಚನೆಗಳ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತವೆ. ದೈವವನ್ನು ಪೂಜಿಸುವಾಗ ಭಕ್ತಿಭಾವ ಬಹಳ ಮುಖ್ಯ ಇದು ಆಧ್ಯಾತ್ಮಿಕತೆಯ ಮುಖಾಂತರ ಶಕ್ತಿಯಾಗಿ ಪರಿಭ್ರಮಿಸುತ್ತದೆ. ಆದಷ್ಟು ಮಂತ್ರೋಚ್ಚಾರ ಸ್ಪಷ್ಟವಾಗಿ ಹಾಗೂ ಹಿಡಿತವಿತ್ತು ಪೂಜೆ ಮಾಡಬೇಕು ಮಂತ್ರಗಳಿಗೆ ತನ್ನದೇ ಆದ ಶಕ್ತಿ ಹಾಗೂ ಆಧ್ಯಾತ್ಮಿಕ ನೆಲೆಯಿದೆ‌. ಇವುಗಳು ನಿಮ್ಮ ಮನಸ್ಸನ್ನು ಏಕಾಗ್ರತೆಗೆ ಕೊಂಡೊಯ್ಯಲು ಸಹಾಯಮಾಡುತ್ತವೆ ಹಾಗೂ ನಿಮ್ಮ ಬೇಡಿಕೆಗಳು ವರ್ಷದಲ್ಲಿ ಈಡೇರುವಂತೆ ನೋಡಿಕೊಳ್ಳುತ್ತದೆ. ನಿಮ್ಮಲ್ಲಿಯ ಅನಗತ್ಯ ಮಾನಸಿಕ ವಿಕಲ್ಪಗಳನ್ನು ದೂರಮಾಡುತ್ತದೆ.

ಮಂತ್ರದಿಂದ ಪೂಜೆ ಮಾಡುವುದು ಮನಸ್ಸಿನ ಏಕಾಗ್ರತೆಗೆ ಬಹಳ ಮುಖ್ಯ.ಹಾಗಾಗಿ ಇದು ನಮ್ಮ ಹಿರಿಯರು ನಮಗೆ ವರ್ಗಾಯಿಸಿದ್ದಾರೆ. ನೀವು ಭಕ್ತಿ ಭಾವದಿಂದ ದೇವರ ಮುಂದೆ ಪೂಜೆಗೆ ಕುಳಿತಾಗ ನಿಮಗೆ ಕಣ್ಣೀರು ಬಂದರೆ ನಿಮ್ಮ ಸಂಪೂರ್ಣ ದಾರಿದ್ರ ದೂರವಾದಂತೆ. ದೇವರ ಪೂಜೆಗೆ ಕುಳಿತಾಗ ನಿಮಗೆ ಆಲಸ್ಯ ಬಂದರೆ ಅದು ನಿಮ್ಮಲ್ಲಿರುವ ಅಹಂಕಾರದ ನಿದರ್ಶನವಾಗಿ ಇರುತ್ತದೆ ಅದನ್ನು ಕಡಿಮೆ ಮಾಡಿಕೊಳ್ಳಬೇಕು ನಿಮ್ಮ ಮುಖದಲ್ಲಿ ಆಕರ್ಷಕ ಕಳೆದರೆ ಅದು ದೈವವೇ ಪ್ರಸನ್ನ ವಾದಂತೆ ಎಂಬ ಸೂಚನೆ ಪದೇಪದೇ ದೈವ ಸಾನಿಧ್ಯದಲ್ಲಿ ನಿಮಗೆ ಕೆಟ್ಟ ಕೆಟ್ಟ ಆಲೋಚನೆಗಳು ಬರುತ್ತಿದ್ದಾರೆ ದುಷ್ಟಶಕ್ತಿಗಳು ನಿಮಗೆ ತೊಂದರೆ ಮಾಡುತ್ತಿವೆ ಎಂಬ ಸೂಚನೆ ಇವುಗಳನ್ನು ಗಮನಿಸಿ ಆದಷ್ಟು ಜಾಗೃತಕತೆಯಿಂದ ಇರಬೇಕು.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/