ಯಾವಾಗಲೂ ಇಂಟರ್ನೆಟ್ ಬಳಸುತ್ತಿರುತ್ತೀರಾ?! ಹಾಗಾದರೆ ಅಪ್ಪಿತಪ್ಪಿಯೂ ಈ ಜಾಲದ ಬಲೆಗೆ ಸಿಲುಕದಿರಿ!

ಬೆಂಗಳೂರು: ನಾವು ಎಷ್ಟೇ ಎಚ್ಚರಿಕೆ ವಹಿಸಿದ್ರೂ.. ಕೆಲವೊಮ್ಮೆ ನಮ್ಮ ನಂಬರ್ ಗಳು ಆನ್ ಲೈನ್ ವಂಚಕರಿಗೆ ಸಿಕ್ಕಿಬಿಡ್ತಾವೆ. ಇವರಿಗೆ ಹೇಗೆ ಸಿಕ್ತು ನನ್ನ ನಂಬರ್ ಅಂತ ಅನೇಕರು ಯೋಚಿಸ್ತಾ ಇರುತ್ತೀರಿ. ನಿಮಗೆ ಗೊತ್ತಾ, ನೀವು ಮೊಬೈಲ್ ಅಂಗಡಿಗಳಲ್ಲಿ ರೀಚಾರ್ಚ್ ಮಾಡೋದಕ್ಕೆ, ಶಾಪಿಂಗ್ ಮಾಲ್ ನಲ್ಲಿ ಖರೀದಿಸಿದಾಗ, ಫೇಸ್ ಬುಕ್, ಆನ್ ಲೈನ್ ಶಾಪಿಂಗ್ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ನೀಡುವಂತ ನಿಮ್ಮ ಮೊಬೈಲ್ ಸಂಖ್ಯೆ, ಆನ್ ಲೈನ್ ವಂಚಕರಿಗೆ ಮಾರಾಟವಾಗುತ್ತಿದ್ದಾವಂತೆ. ಹೀಗೆ ಮಾರಾಟವಾಗುವ ಸಂಖ್ಯೆಗಳನ್ನು ಪಡೆಯುವ ವಂಚಕರು, ಸಾರ್ವಜನಿಕರನ್ನು ಗುರಿಯಾಗಿಟ್ಟುಕೊಂಡು ವಂಚನೆಗೆ ತೊಡಗಿದ್ದಾರೆ ಎಂಬ ವಿಷಯ ಬೆಳಕಿಗೆ ಬಂದಿದೆ. ಈ ಕುರಿತಂತೆ ಬೆಂಗಳೂರು ನಗರ ಪೊಲೀಸ್ ಮೂಲಗಳಿಂದ ಮಾಹಿತಿ ತಿಳಿದು ಬಂದಿದ್ದು, ರಾಜ್ಯ ರಾಜಧಾನಿಯ ಉತ್ತರ, ಪಶ್ಚಿಮ ಮತ್ತು ರಾಜ್ಯದ ಗ್ರಾಮಾಂತರ ಪ್ರದೇಶಗಳಲ್ಲಿ ಕೆಲ ಮೊಬೈಲ್ ಮಾರಾಟದ ಅಂಗಡಿ, ಶಾಪಿಂಗ್ ಮಾಲ್, ಕರೆನ್ಸಿ ರಿಚಾರ್ಜ್ ಅಂಗಡಿ, ಆನ್ ಲೈನ್ ಜಾಹೀರಾತು ಸೇರಿದಂತೆ ವಿವಿಧ ಸ್ಥಳಗಳಲ್ಲಿ ನೀಡುವ ನಿಮ್ಮ ಮೊಬೈಲ್ ಸಂಖ್ಯೆಗಳನ್ನೇ ಆನ್ ಲೈನ್ ವಂಚಕರಿಗೆ ಮಾರಾಟ ಮಾಡಲಾಗುತ್ತದೆ ಎನ್ನಲಾಗಿದೆ.

ಮಹಿಳಾ ಸಹಾಯವಾಣಿ ಸಂಖ್ಯೆಗೆ ಕರೆ ಮಾಡುತ್ತಿರುವಂತ ಶೇ.80ರಷ್ಟು ಮಹಿಳೆಯರು, ತಮ್ಮ ಮೊಬೈಲ್ ಸಂಖ್ಯೆಗೆ ಹೊರರಾಜ್ಯಗಳಿಂದ ಅನಾಮಿಕರು ಕರೆ ಮಾಡಿ, ಕಿರುಕುಳ ನೀಡುತ್ತಿರುವಂತ ದೂರುಗಳನ್ನು ನೀಡಿದ್ದಾರೆ. ಇದರಿಂದಾಗಿ ಮಹಿಳಾ ಸಹಾಯವಾಣಿ ಕೇಂದ್ರದಿಂದ ಹೀಗೆ ಕರೆ ಮಾಡುತ್ತಿರುವಂತ ಅನಾಮಿಕರಿಗೆ ಎಚ್ಚರಿಕೆ ಕೂಡ ನೀಡಲಾಗುತ್ತಿದೆಯಂತೆ. ಅಂದಹಾಗೇ ನೀವು ರಿಚಾರ್ಜ್ ಮಾಡಿಸೋದಕ್ಕೆ, ಶಾಪಿಂಗ್ ಮಾಲ್ ನಲ್ಲಿ ಖರೀದಿಸಿದಾಗ, ಇಂಟರ್ನೆಟ್ ಕಫೆಗಳಲ್ಲಿ ಸೇರಿದಂತೆ ಅನೇಕ ಸಂದರ್ಭಗಳಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ನೀಡಿರುತ್ತೀರಿ. ಹೀಗೆ ನೀಡುವ ನಿಮ್ಮ ಸಂಖ್ಯೆಗಳನನ್ನು 50 ರೂಪಾಯಿಯಿಂದ 100 ರೂಪಾಯಿಗಳವರೆಗೆ ದಂಧೆಕೋರರಿಗೆ ಮಾರಾಟ ಮಾಡಲಾಗುತ್ತಿದೆ. ಅದರಲ್ಲೂ ಸುಂದರ ಯುವತಿಯರ ಮೊಬೈಲ್ ಸಂಖ್ಯೆಯನ್ನೇ ಪ್ರತ್ಯೇಕವಾಗಿ ಸಂಗ್ರಹಿಸಿ, ಹೆಚ್ಚು ಹೆಚ್ಚು ಹಣಕ್ಕೆ ಡಿಮ್ಯಾಂಡ್ ಮಾಡಿ ಆನ್ ಲೈನ್ ವಂಚಕರಿಗೆ ನೀಡಲಾಗುತ್ತಿದೆಯಂತೆ. ಹೀಗಾಗಿ ನೀವು ಎಚ್ಚರಿಕೆ ವಹಿಸಬೇಕಿದೆ. ಇಲ್ಲವಾದಲ್ಲಿ ಸ್ವಲ್ಪ ಯಾಮಾರಿದ್ರೂ.. ನಿಮ್ಮನ್ನು ಯಾಮಾರಿಸೋದು ಗ್ಯಾರಂಟಿ.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/