ಸದಲಗಾ (ಬೆಳಗಾವಿ): ಹಳ್ಳಿಗಳಲ್ಲಿ ಮುಖಂಡರ ಹುಟ್ಟುಹಬ್ಬದ ನಿಮಿತ್ತ ಕ್ರಿಕೆಟ್ ಪಂದ್ಯಗಳ ಆಯೋಜನೆ ಸರ್ವೆಸಾಮಾನ್ಯ. ಆದರೆ ಮಹಾರಾಷ್ಟ್ರದ ಕೊಲ್ಲಾಪುರ ಸಮೀಪದ ಗವಶಿ ಪಾಟೀಲವಾಡಿ ಗ್ರಾಮದಲ್ಲಿ ಈಚೆಗೆ ಮುಖಂಡನೊಬ್ಬ ತನ್ನ ಮಗನ ಹುಟ್ಟುಹಬ್ಬ ನಿಮಿತ್ತ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಚಿಯರ್ ಗರ್ಲ್ಸ್ ಕುಣಿಸಿ ಎಡವಟ್ಟು ಮಾಡಿಕೊಂಡಿದ್ದಾನೆ. ಕರೊನಾ ಬಿಕ್ಕಟ್ಟಿನ ಸಮಯದಲ್ಲೂ ಸರ್ಕಾರದಿಂದ ಅನುಮತಿ ಪಡೆಯದೆ ರಘುನಾಥ ಪಾಟೀಲ ಎಂಬಾತ ಚಿಯರ್ ಗರ್ಲ್ಸ್ ಕರೆಯಿಸಿದ್ದ. ಆಟ ಆಡಬೇಕಿದ್ದ ಆಟಗಾರರು ಹಾಗೂ ನೋಡಬೇಕಿದ್ದ ಪ್ರೇಕ್ಷಕರು ಎಲ್ಲ ಸೇರಿ ಚಿಯರ್ ಗರ್ಲ್ಸ್ ಜತೆ ಡಾನ್ಸ್ ಮಾಡತೊಡಗಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರನ್ನು ಕಂಡು ಕುಣಿತದಲ್ಲಿ ಮೈಮರೆತ ಪಡ್ಡೆಗಳು ಕಾಲ್ಕಿತ್ತಿದ್ದಾರೆ. ತಲೆಮರೆಸಿಕೊಂಡಿರುವ ಆಯೋಜಕರು ಹಾಗೂ ಚಿಯರ್ ಗರ್ಲ್ಸ್ ವಿರುದ್ಧ ರಾಧಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/