ಅಭಿಮಾನಿ ಕೇಳಿದ ಸಲಹೆಗೆ ಭಾವುಕರಾಗಿ ಉತ್ತರಿಸಿದ ನವರಸನಾಯಕ ಜಗ್ಗೇಶ್, ಟ್ವೀಟ್ ವೈರಲ್!ಸಿನಿಮಾವನ್ನು ನಂಬಿ ನಿಮ್ಮ ತಂದೆ ತಾಯಿಯವರ ಕನಸಿನ ಜೊತೆಗೆ ನಿಮ್ನ ಜೀವನವನ್ನು ನೀವೇ ಹಾಳು ಮಾಡಿಕೊಳ್ಳಬೇಡಿ ಎಂದು ನವರಸ ನಾಯಕ ಜಗ್ಗೇಶ್ ಅವರು ತಮ್ಮ ಅಭಿಮಾನಿಯೊಬ್ಬರಿಗೆ ಕಿವಿಮಾತು ಹೇಳಿದ್ದಾರೆ. ಎರಡನೇ ವರ್ಷದ ಡಿಪ್ಲೊಮೊ ಮಾಡುತ್ತಿದ್ದ ಅವರ ಅಭಿಮಾನಿಯೊಬ್ಬ ನಿರ್ದೇಶಕ ನಾಗಬೇಕೆಂಬ ಕನಸಿಟ್ಟುಕೊಂಡು ಅದರ ಬಗ್ಗೆ ಒಂದಷ್ಟು ಸಲಹೆ ಸೂಚನೆಗಳನ್ನು ಟ್ವಿಟರ್ ಮೂಲಕ ಕೇಳಿದ್ದ. ಇದಕ್ಕೆ ಉತ್ತರಿಸಿದ ಜಗ್ಗೇಶ್, “ನೀವು ದಯಮಾಡಿ ಓದಿ ಒಂದು ದಡ ಸೇರಿ ಇಂದಿನ ಸಿನಮಾ‌ಲೋಕ‌ ನಂಬಿ ತಂದೆ ತಾಯಿ ಹಾಗೂ ನಿಮ್ಮ ಸುಂದರ ಜೀವನವನ್ನು ಹಾಳು ಮಾಡಿಕೊಳ್ಳದಿರಿ, ನೀವು ಅಂದುಕೊಂಡಂತಿಲ್ಲ ಇಂದಿನ ಸಿನಿಮಾ ಜಗತ್ತು . ನಿಮಗೆ ಅಷ್ಟು ಆಸಕ್ತಿ ಇದ್ದರೆ ಸಂತೋಷಕ್ಜಾಗಿ ಅಥವಾ ಹವ್ಯಾಸವಾಗಿ ಆ ವೃತ್ತಿಯನ್ನು ಆರಿಸಿಕೊಳ್ಳಿ” ಎಂದು ಅವರು ತಿಳಿಸಿದ್ದಾರೆ. ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ ಸದ್ಯ ಯಶಸ್ಸನ್ನು ಪಡೆಯುತ್ತಿದ್ದು ಉಳಿದ ೯೮ ಶೇ. ಸಿನಿಮಾ ಮಂದಿ ಸಂಕಷ್ಟದಲ್ಲಿದ್ದಾರೆ ಎಂಬ ಬೇಸರವನ್ನೂ ಈ ಸಂದರ್ಭದಲ್ಲಿ ಹೊರಹಾಕಿದ್ದಾರೆ.

ಕರೋನಾ ವೈರಸ್ ಹಿನ್ನೆಲೆಯಲ್ಲಿ ಕೆಲಸವಿಲ್ಲದೆ ಖಾಲಿ ಕೂತಿದ್ದ ಕಲಾವಿದರಿಗೆ ಕೇಂದ್ರ ಸರ್ಕಾರ ಇತ್ತೀಚಿಗೆ ಶೂಟಿಂಗ್ ಗೆ ಅವಕಾಶವನ್ನು ನೀಡಿದ್ದು ಚಿತ್ರದ ಶೂಟಿಂಗ್ ಗಳನ್ನು ಆರಂಭಿಸಿದ್ದಾರೆ. ಈ ಮೊದಲು ೩ ತಿಂಗಳಿಂದ ನಿರ್ಮಾಪಕರು, ಕಲಾವಿದರು, ನಿರ್ದೇಶಕರು , ಚಿತ್ರ ಮಂದಿರ ಮಾಲಿಕರು ಆರ್ಥಿಕ ಸಂಕಷ್ಟದಲ್ಲಿದ್ದರು. ಈ ಬಗ್ಗೆ ಇತ್ತೀಚಿಗೆ ರಘು ದೀಕ್ಷಿತ್ ಕೂಡ ತಮ್ಮ ಬೇಸರವನ್ನು ಹೊರ ಹಾಕಿದ್ದರು.

ಜಾಹಿರಾತು : ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ಇವರು ವಶೀಕರಣ ಮಹಾ ಮಾಂತ್ರಿಕರು ಹಾಗೂ ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ ಹಾಗೂ ಪುರುಷ ವಶೀಕರಣ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಕೆಳಗೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ 9740202800 ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು.9740202800
ಇದನ್ನೂ ಓದಿ :  ಕ್ರಿಕೆಟ್ ಅಭಿಮಾನಿಗಳಿಗೆ ಯೂಸುಫ್ ಪವಾಣ್ ನೀಡಿದರು ಆಘಾತ!