Fact Check ; ಮಸೀದಿ ಧ್ವನಿವರ್ದಕ ತೆರವುಗೊಳಿಸಲು ಹೇಳಿದ್ರಾ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್?ಬೆಂಗಳೂರು : ರಾಜ್ಯದ್ಯಂತ ಮಸೀದಿಗಳಲ್ಲಿ ಇರುವ ಧ್ವನಿವರ್ಧಕಗಳನ್ನು ತೆರವುಗೊಳಿಸುವಂತೆ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸುತ್ತೋಲೆ ಹೊರಡಿಸಿದ್ದಾರೆ! ಹೀಗೊಂದು ಸುದ್ದಿ ಕೆಳೆದೆರೆಡು ದಿನದಿಂದ ಫೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಬಾರೀ ವೈರಲ್ ಆಗುತ್ತಿದೆ. ಈ ಸುದ್ದಿಯ ಹಿಂದಿನ ಅಸಲಿ ಸತ್ಯ ನೋಡಿದಾಗ ಇದೊಂದು ಫೇಕ್ ನ್ಯೂಸ್ ಎಂದು ತಿಳಿದುಬಂದಿದೆ.

ಮಸೀದಿಗಳಲ್ಲಿ ಮುಸ್ಲಿಂ ಬಾಂಧವರು ಸಲ್ಲಿಸುವ ಪ್ರಾರ್ಥನೆಯಿಂದ ಅತಿ ಹೆಚ್ಚು ಶಬ್ದ ಉಂಟಾಗುತ್ತದೆ. ಇದರಿಂದಾಗಿ ಸಾರ್ವಜನಿಕರಿಗೆ ಬಹಳ ತೊಂದರೆ ಆಗುತ್ತದೆ. ಮಸೀದಿಗೆ ಅಳವಡಿಸಿರುವ ಧ್ವನಿವರ್ಧಕ ಮತ್ತು ಮೈಕ್ರೊಫೋನ್ ಬೆಳಕೆ ಮಾಡಬಾರದೆಂದು ನ್ಯಾಯಾಲಯ ಆದೇಶ ನೀಡಿದರೂ ಸಹ ಇದನ್ನು ಪಾಲಿಸುತ್ತಿಲ್ಲ ಎಂದು ಆರೋಪಿಸಿದ ವಕೀಲರಾದ ಹರ್ಷ ಮುತಾಲಿಕ್ ಡಿಜಿ, ಐಜಿಪಿ ಪ್ರವೀಣ್ ಸೂದ್ ಗೆ ಪತ್ರ ಬರೆದಿದ್ದರು. ಧ್ವನಿವರ್ಧಕಗಳನ್ನು ನಿಷೇಧಿಸಬೇಕೆಂದು ಆ ಪತ್ರದಲ್ಲಿ ಆಗ್ರಹಿಸಿದ್ದರು, ಆದರೆ ಅಸಲಿಗೆ ಆ ಲೆಟರ್ ಹೆಡ್ ಕೂಡ ಫೇಕ್ ಎಂದು ಕರ್ನಾಟಕ ಪೊಲೀಸ್ ಫ್ಯಾಕ್ಟ್ ಚೆಕ್ಕಿಂಗ್ ತಂಡ ಸ್ಪಷ್ಟನೆ ನೀಡಿದೆ.

ಹರ್ಷ ಮುತಾಲಿಕ್ ಡಿಜಿ ನೀಡಿದ ದೂರಿನನ್ವಯ ಪ್ರವೀಣ್ ಸೂದ್ ಸುತ್ತೋಲೆ ಹೊರಡಿಸಿದ್ದು, ಧ್ವನಿವರ್ಧಕಗಳನ್ನು ತೆರವು ಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಪೊಲೀಸ್ ಆಯುಕ್ತರಿಗೆ ಹಾಗೂ ಎಲ್ಲಾ ಪೊಲೀಸ್ ವಸಿಸ್ಟಾಧಿಕಾರಿಗಳಿಗೆ ತಿಳಿಸಿದ್ದಾರೆಂದೆಲ್ಲಾ ಬಾರೀ ವೈರಲ್ ಆಗಿತ್ತು, ಈ ಕುರಿತು ರಾಜ್ಯದ ಪ್ರತಿಷ್ಠಿತ ಮಾಧ್ಯಮಗಳು ಕೂಡ ವರದಿ ಮಾಡಿದ್ದವು.