‘ಗಜಕೇಸರಿ ಯೋಗ’ ಎಂದರೇನು?!ಗಜಕೇಸರಿ ಯೋಗ ಬಂದರೆ ಹೇಗಿರುತ್ತದೆ ಗೊತ್ತಾ?! ; ಇಲ್ಲಿದೆ ಸಂಪೂರ್ಣ ಮಾಹಿತಿ.ಗಜಕೇಸರಿ ಯೋಗ ಎಂದರೆ ಬಹಳಷ್ಟು ಜನರಿಗೆ ಕುತೂಹಲ ಇರುತ್ತದೆ. ಗಜಕೇಸರಿ ಯೋಗ ಬಂದರೆ ಹೇಗಿರುತ್ತದೆ ಗೊತ್ತಾ? ಇದರಿಂದ ಏನೆಲ್ಲಾ ಲಭಗಳಿವೆ ಎಂದು ನಾವಿಂದು ತಿಳಿಯೋಣ. ಗಜಕೇಸರಿ ಯೋಗ ಎಂದರೆ ಜಾತಕದ ಕುಂಡಲಿಯಲ್ಲಿ ಗುರು ಮತ್ತು ಚಂದ್ರ ಒಂದೇ ಸ್ಥಾನದಲ್ಲಿರುವುದು, ಅಥವಾ ಚಂದ್ರನ ಕೇಂದ್ರಸ್ಥಾನದಲ್ಲಿ ಗುರು ಗ್ರಹವಿದ್ದರೆ ಅಂತಹ ಜಾತಕ ಹೊಂದಿರುವವರಿಗೆ ಗಜಕೇಸರಿಯೋಗವಿದೆ ಎನ್ನುತ್ತಾರೆ. ಕುಂಡಲಿಯ ಲಗ್ನ ಭಾಗದಿಂದ 1,4,7,10ನೇ ಸ್ಥಾನಗಳನ್ನು ಚಂದ್ರ ಕೇಂದ್ರಸ್ಥಾನ ಎಂದು ಹೇಳುತ್ತಾರೆ. ಗುರು ಗ್ರಹವು ಐಶ್ವರ್ಯ, ಜ್ಞಾನ, ಜನಪ್ರಿಯತೆ, ಅದೃಷ್ಟ ಮತ್ತು ಸಂತಾನಭಾಗ್ಯದ ಸಂಕೇತವಾಗಿದೆ. ಮತ್ತು ಚಂದ್ರ ಮನೋಕಾರಕ, ಮೃದುಭಾಷಿ ಸಂವಾಹಕ, ಸಂತೋಷ ಮತ್ತು ಅಭಿವೃದ್ಧಿಯ ಸಂಕೇತವಾಗಿದ್ದಾನೆ.

ಅದರಿಂದಾಗಿಯೇ ಚಂದ್ರನ ಕೇಂದ್ರಸ್ಥಾನಕ್ಕೆ ಗುರು ಬಂದಾಗ ಅದಕ್ಕೆ ವಿಷೇಶಗುಣವಿದೆ. ಜಾತಕದಲ್ಲಿ ಗಜಕೇಸರಿಯೋಗ ಶ್ರೇಯಸ್ಸು ಮತ್ತು ಅಭಿವೃದ್ದಿಯ ಸೂಚಕವಾಗಿದೆ. ಇದರಿಂದ ಉತ್ತಮ ಆದಾಯ ದೀರ್ಘಾಯಸ್ಸು, ಪ್ರತಿಷ್ಠೆ, ಗೌರವ ಎಲ್ಲವೂ ದೊರೆಯುತ್ತದೆ ಎಂಬ ನಂಬಿಕೆ ಇದೆ. ವೇದಿಕ್ ಅಸ್ಟಾçಲಜಿಯ ಪ್ರಕಾರ ಇದು ಬಹಳ ಶ್ರೇಷ್ಠ ಜಾತಕವಾಗಿರುತ್ತದೆ, ಗಜ ಎಂದರೆ ಆನೆ ಕೇಸರಿ ಎಂದರೆ ಸಿಂಹ ಎಂಬರ್ಥ ಹಾಗೆಯೇ ಈ ಯೋಗ ಇರುವವರೂ ಕೂಡ ತಮ್ಮ ನಡೆನುಡಿ ಇಂದ ಬೇರೆಯವರ ಮೇಲೆ ಪ್ರಭಾವಬೇರುತ್ತಾರೆ. ಪರಶರ ಮುನಿಯವರ ಪ್ರಕಾರ ಗಜಕೇಸರಿಯೋಗ ಇರುವ ವ್ಯಕ್ತಿಗಳು ಬಹಳ ಪ್ರಭಾವಶಾಲಿಗಳಾಗಿರುತ್ತಾರೆ ಜೊತೆಗೆ ಅವರೆಂದಿಗೂ ಅದಕ್ಕಾಗಿ ಅಹಂಕಾರ ಪಡುವುದಿಲ್ಲ. ಸಮರ್ಥ, ಐಷಾರಾಮಿ ಜೀವನ ಇವರದ್ದಾಗಿರುತ್ತದೆ.

ಸುಮಾರು 20 ರಿಂದ 33 ಶೇಖಡದಷ್ಟು ಜನರ ಕುಂಡಲಿಯಲ್ಲಿಗಜಕೇಸರಿ ಯೋಗ ಇರುತ್ತದೆ, ಆದರೆ ಇದರ ಗ್ರಹ ಸ್ಥಾನವನ್ನು ಆಧರಿಸಿ ಯೋಗದ ಅವಧಿ ನಿರ್ಧಾರ ಮಾಡುತ್ತಾರೆ. ಈ ಯೋಗವನ್ನು ಹೊಂದಿರುವ ಜನರು ಐಷಾರಾಮಿ ಜೀವನ ನಡೆಸುವುದರಲ್ಲಿ ಸಂದೇಹವಿಲ್ಲ. ಮೃಗರಾಜನಾದ ಸಿಂಹ ಮತ್ತು ವನರಾಜನಾದ ಆನೆ ಇರುವುದರಿಂದ ರಾಜನಾಗಿ ಬಾಳುವ ಯೋಗ ಈ ಜಾತಕದವರಿಗೆ ಇರುತ್ತದೆ. ಇದರಿಂದ ಉನ್ನತ ಸ್ಥಾನದ ಹುದ್ಧೆ, ಜನಪ್ರಿಯತೆ ಇವರಿಗೆ ಇರುತ್ತದೆ. ಶ್ರದ್ಧಾಭಕ್ತಿಯಿಂದ ಇವರು ಜೀವನ ನಡೆಸುತ್ತಿರುತ್ತಾರೆ. ಇದಿಷ್ಟು ಗಜಕೇಸರಿ ಯೋಗದ ಮಹತ್ವವಾಗಿದೆ.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/