ಎರಡು ವಾರ ನಿಮ್ಮ ಕಾಲಿಗೆ ಚಲನೆ ನೀಡದಿದ್ದರೆ ಏನಾಗುತ್ತದೆ ಗೊತ್ತಾ? ನೀವು ಅತೀ ದೊಡ್ಡ ಅಪಾಯದಲ್ಲಿದ್ದೀರಿ..ಕಾಲುಗಳನ್ನು ಬಲಪಡಿಸಿ ಅರೋಗ್ಯವಂತರಾಗೋಣ. ವೆರಿಕೋಸ್ ವೇಯ್ನ್ ತಡೆಯೋಣ ಡಾ. ಎಂ. ವಿ. ಉರಾಳ್. ಶೃಂಗೇರಿ. ನಾವು ವಯಸ್ಸಾದಾಗಲೂ ಸಹ , ನಮ್ಮ ಕಾಲುಗಳು  ಸದೃಡವಾಗಿದ್ದರೆ  ಮುಪ್ಪದರೂ ಆರೋಗ್ಯಕರ ಜೀವನ ನಡೆಸಲು ಸಾಧ್ಯವಾಗುವುದು. ನಮ್ಮ ಆಯುರ್ವೇದ ದಲ್ಲಿ  ದೀರ್ಘಾಯುಷ್ಯದ ಚಿಹ್ನೆಗಳ ಪೈಕಿ  ಬಲವಾದ ಕಾಲು ಸ್ನಾಯುಗಳನ್ನು ವಿಶೇಷವಾಗಿ ಹೇಳಲಾಗಿದೆ ಹಾಗೂ ಅತ್ಯಂತ ಪ್ರಮುಖ ಮತ್ತು ಅವಶ್ಯಕವಾಗಿದೆ. ಅದಕ್ಕೆ ವಾರಕ್ಕೊಮ್ಮೆ ಅಭ್ಯಂಗ ಸ್ನಾನ ಮಾಡಲು ತಿಳಿಸಿರುತ್ತಾರೆ. ಎರಡು ವಾರಗಳವರೆಗೆ ನಿಮ್ಮ ಕಾಲುಗಳಿಗೆ ಚಲನೆಯನ್ನು ನೀಡದಿದ್ದರೆ ನಿಮ್ಮ ಕಾಲಿನ ಶಕ್ತಿಯು 10 ವರ್ಷಗಳಸ್ಟು ಕಡಿಮೆಯಾಗುತ್ತದೆ. ನಮ್ಮ ಕಾಲಿನ ಸ್ನಾಯುಗಳು ಮೊದಲೇ  ದುರ್ಬಲಗೊಂಡಿದ್ದರೆ ಯಾವುದೇ ವ್ಯಾಯಾಮಗಳನ್ನು ಮಾಡಿದರೂ, ನಂತರದಲ್ಲಿ ಚೇತರಿಸಿಕೊಳ್ಳಲು ಬಹಳ ಸಮಯ ತೆಗೆದುಕೊಳ್ಳುತ್ತದೆ.

ಆದ್ದರಿಂದ ಯೋಗಾಭ್ಯಾಸ, ಈಜುವಿಕೆ, ವಾಕಿಂಗ್‌ನಂತಹ ನಿಯಮಿತ ವ್ಯಾಯಾಮ ಬಹಳ ಮುಖ್ಯ. ಇಡೀ ದೇಹದ ತೂಕ / ಹೊರೆ ಕಾಲುಗಳ ಮೇಲೆ ಬೀಳುವುದು. ಕಾಲು ಒಂದು ರೀತಿಯ ಕಂಬಗಳು ಇದ್ದಂತೆ. ಇದು ಮಾನವ ದೇಹದ ತೂಕವನ್ನು ಹೊರುತ್ತದೆ. ನಮ್ಮ ದೇಹದ 50% ಮೂಳೆ ಹಾಗೂ ಮಾಂಸವು ಕಾಲಿನಲ್ಲಿವೆ. ಮಾನವ ದೇಹದ ಅತಿದೊಡ್ಡ ಮತ್ತು ಬಲವಾದ ಕೀಲುಗಳು ಸಹ ಕಾಲುಗಳಲ್ಲಿವೆ. ಒಬ್ಬರ ಜೀವನದಲ್ಲಿ 70% ಮಾನವ ಚಟುವಟಿಕೆ (human activity )ಮತ್ತು ಶಕ್ತಿಯನ್ನು ಸುಡುವುದನ್ನು(calorie burning ) ಎರಡು ಕಾಲುಗಳು ಮಾಡುವುದು. ಎರಡೂ ಕಾಲುಗಳು ಒಟ್ಟಿಗೆ ಮಾನವ ದೇಹದ 50% ನರ 50% ರಕ್ತನಾಳವು  ಮತ್ತು 50% ರಕ್ತವು  ಕಾಲಿನ  ಮೂಲಕ ಹರಿಯುತ್ತವೆ. ಪಾದಗಳು ಆರೋಗ್ಯಕರವಾಗಿದ್ದಾಗ ಮಾತ್ರ ರಕ್ತ ದೇಹದಲ್ಲಿ ಸರಾಗವಾಗಿ ಹರಿಯುತ್ತದೆ, ಆದ್ದರಿಂದ ಬಲವಾದ ಕಾಲು ಸ್ನಾಯುಗಳನ್ನು ಹೊಂದಿರುವ ಜನರು ಖಂಡಿತವಾಗಿಯೂ ಬಲವಾದ ಹೃದಯವನ್ನು ಹೊಂದಿರುತ್ತಾರೆ.

ಅದಕ್ಕಾಗಿಯೇ ಕಾಲನ್ನು ಎರಡನೇ ಅಥವಾ periferal ಹೃದಯ ಎಂದು ಕರೆಯುತ್ತಾರೆ ಕಾಲು ಗಳು ದುರ್ಬಲ ವಾಗಿದ್ದರೆ ವ್ಯಕ್ತಿಯು ವಯಸ್ಸಾದಂತೆ, ಮೆದುಳು ಮತ್ತು ಕಾಲು ಗಳ  ನಡುವಿನ ಸೂಚನೆಗಳ ಪ್ರಸರಣದ ನಿಖರತೆ ಮತ್ತು ವೇಗವು ಕಡಿಮೆಯಾಗುತ್ತದೆ, ಕಾಲುಗಳ ವ್ಯಾಯಾಮ ಮಾಡುವುದು, 60 ವರ್ಷ ವಯಸ್ಸಿನ ನಂತರವೂ ಶುರು ಹಚ್ಚಿಕೊಂಡರೂ ತಡವಾಗುವುದಿಲ್ಲ. ಕಾಲುಗಳನ್ನು ಬಲಪಡಿಸುವ ಮೂಲಕವೆ ಮಾತ್ರ, ಒಬ್ಬರು ಮತ್ತಷ್ಟು ವಯಸ್ಸಾಗುವುದನ್ನು ತಡೆಯಬಹುದು. ನಿಮ್ಮ ಕಾಲುಗಳು ಸಾಕಷ್ಟು ವ್ಯಾಯಾಮ ಖಚಿತಪಡಿಸಿಕೊಳ್ಳಲು ಮತ್ತು ನಿಮ್ಮ ಕಾಲಿನ ಸ್ನಾಯುಗಳು ಆರೋಗ್ಯವಾಗಿರಲು ದಯವಿಟ್ಟು ಕನಿಷ್ಠ 30-40 ನಿಮಿಷಗಳ ಕಾಲ ನಡೆಯಿರಿ. ವೆರಿಕೋಸ್ ವೇಯ್ನ್ ಗೆ ಮುಖ್ಯವಾದ ಕಾರಣವೆ ಕಾಲುಗಳ ಅಚಲತೆ.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/