ವೆರಿಕೋಸ್ ವೇಯ್ನ್ ಗೆ ಯಾವುದೇ ಆಪರೇಷನ್ ಇಲ್ಲದೇ ಗುಣಪಡಿಸೋದು ಹೇಗೆ ಗೊತ್ತಾ? ಇಲ್ಲಿದೆ ಮಾಹಿತಿ.



ವೆರಿಕೋಸ್ ವೇಯ್ನ್ ಗೆ ಸಾಧ್ಯವಾದಷ್ಟು ಆಪರೇಷನ್ ರಹಿತ ಚಿಕಿತ್ಸೆ-DR. URALS AYURVEDDA CURE
ವೆರಿಕೋಸ್‌ ವೇನ್ಸ್ ಎಂಬುದು ಅಶುದ್ಧ ರಕ್ತವನ್ನು ಸಾಗಿಸುವ ರಕ್ತನಾಳಗಳಾದ ಅಪಧಮನಿಗಳಿಗೆ ಸಂಬಂಧಪಟ್ಟ ಕಾಯಿಲೆ. ನಮ್ಮ ದೇಹದಲ್ಲಿ ಎರಡು ರೀತಿಯ ರಕ್ತನಾಳಗಳಿವೆ. ಹೃದಯದಿಂದ ದೇಹದ ಎಲ್ಲ ಭಾಗಗಳಿಗೆ ಶುದ್ಧ ರಕ್ತವನ್ನು ಒಯ್ಯುವ ರಕ್ತನಾಳಗಳನ್ನು ಧಮನಿ/ ಶುದ್ಧ ರಕ್ತವಾಹಿನಿಯೆನ್ನುತ್ತಾರೆ. ಇದಕ್ಕೆ ವಿರುದ್ಧವಾಗಿ ದೇಹದ ವಿವಿಧ ಭಾಗಗಳಿಂದ ಅಶುದ್ಧ ರಕ್ತವನ್ನು ಹೃದಯಕ್ಕೆ ತರುವ ರಕ್ತನಾಳಗಳನ್ನು ಅಪಧಮನಿ/ ಮಲಿನ ರಕ್ತನಾಳವೆಂದು ಕರೆಯಲಾಗುತ್ತದೆ. ಚರ್ಮಕ್ಕೆ ಅಂಟಿಕೊಂಡಂತೆ ಕಾಣುವ ಅಪಧಮನಿಗಳನ್ನು ಬಾಹ್ಯ ಅಪಧಮನಿಗಳೆಂದೂ ಇನ್ನೂ ದೇಹದ ಕೊಂಚ ಆಳದಲ್ಲಿರುವ ಅಪಧಮನಿಗಳನ್ನು ಆಳದಲ್ಲಿರುವ ಅಪಧಮನಿಗಳೆಂದೂ ಕರೆಯುತ್ತಾರೆ. ಸಾಮಾನ್ಯವಾಗಿ ಯಾವುದೇ ತೊಂದರೆಗಳಿಲ್ಲದ ಒಬ್ಬ ಮನುಷ್ಯನಲ್ಲಿ ಅಶುದ್ಧರಕ್ತ ಬಾಹ್ಯ ನಾಳಗಳಿಂದ ಆಳದಲ್ಲಿರುವ ನಾಳಗಳಿಗೆ ಹೋಗಿ ಅಲ್ಲಿಂದ ಹೃದಯಕ್ಕೆ ರವಾನಿಸಲ್ಪಡುತ್ತದೆ.

ಈ ಎರಡನ್ನೂ ಜೋಡಿಸುವ ಅಪಧಮನಿಗಳನ್ನು ಸಂಪರ್ಕ ಅಪಧಮನಿಗಳೆನ್ನುತ್ತಾರೆ.  ಹೀಗೆ ಅಶುದ್ಧ ರಕ್ತ ಬಾಹ್ಯ ನಾಳಗಳಿಂದ ಆಳದ ನಾಳಗಳಿಗೆ ಒಂದು ದಿಕ್ಕಿನಲ್ಲಿ ಮಾತ್ರ ಸಂಚರಿಸುವಂತೆ ಮಾಡಲು ಅಲ್ಲಲ್ಲಿ ಕವಾಟಗಳಿರುತ್ತವೆ. ಈ ಕವಾಟಗಳು ರಕ್ತ ವಿರುದ್ಧ ದಿಕ್ಕಿನಲ್ಲಿ, ಅಂದರೆ ಆಳದ ಅಪಧಮನಿಗಳಿಂದ ಬಾಹ್ಯ ನಾಳಗಳಿಗೆ ಹೋಗುವುದನ್ನು ತಡೆಗಟ್ಟುತ್ತವೆ. ಪಾದ, ಕಾಲು, ತೊಡೆ ಭಾಗಗಳಿಂದ ಅಶುದ್ಧ ರಕ್ತವನ್ನು ಹೃದಯಕ್ಕೆ ಒಯ್ಯುವ ಅಪಧಮನಿಗಳು ಗುರುತ್ವಾಕಾಂಕ್ಷೆಯ ವಿರುದ್ಧವಾಗಿ ಕಾರ್ಯ ನಿರ್ವಹಿಸಬೇಕಾದ್ದರಿಂದ ಹೆಚ್ಚು ಕಾರ್‍ಯಕ್ಷಮತೆ ಹೊಂದಿರುತ್ತವೆ. ಅಲ್ಲದೆ ಈ ನಾಳಗಳಲ್ಲಿನ ಕವಾಟಗಳು ರಕ್ತವು ಕಾಲುಗಳ ಕಡೆಗೆ ಜಾರಿಹೋಗದಂತೆ ತಡೆಯಲು ಹೆಚ್ಚು ಬಲಿಷ್ಠವಾಗಿರಬೇಕಾಗುತ್ತದೆ. ಹೀಗೆ ಹೆಚ್ಚಿನ ಕಾರ್ಯಕ್ಷಮತೆಯಿರಬೇಕಾದ ಕವಾಟಗಳು ಕೆಲವು ಕಾರಣಗಳಿಂದ ತಮ್ಮ ರಕ್ತ ಕಳೆದುಕೊಂಡಾಗ, ಹೃದಯದ ಕಡೆಗೆ ಹೋಗಬೇಕಾದ ರಕ್ತ ವಿರುದ್ಧ ದಿಕ್ಕಿನಲ್ಲಿ ಜಾರುತ್ತದೆ. ಹೀಗಾದಾಗ ಕಾಲುಗಳಲ್ಲಿನ ಅಪಧಮನಿಗಳು ವಕ್ರವಾಗಿ, ಊದಿಕೊಂಡಂತೆ ಕಾಣಿಸುತ್ತವೆ. ಈ ಸ್ಥಿತಿಗೆ ‘ವೆರಿಕೋಸ್‌ ವೇನ್‌ ’ಎಂದು ಕರೆಯುತ್ತಾರೆ. ಆಳದಲ್ಲಿರುವ ಮತ್ತು ಸಂಪರ್ಕ ಅಪಧಮನಿಗಳಲ್ಲಿರುವ ಕವಾಟಗಳ ಕಾರ್ಯಕ್ಷಮತೆ ತಗ್ಗಿದಾಗ ರಕ್ತ ಆಳದ ಅಪಧಮನಿಗಳಿಂದ ಸಂಪರ್ಕ ಅಪಧಮನಿಗಳ ಮೂಲಕ ಬಾಹ್ಯ ಅಪಧಮನಿಗಳಿಗೆ ವಿರುದ್ಧ ದಿಕ್ಕಿನಲ್ಲಿ  ನುಗ್ಗುತ್ತದೆ. ಸಾಮಾನ್ಯವಾಗಿ ನೇರವಾಗಿ ಕಂಡೂ ಕಾಣದಂತಿರುವ ಈ ಬಾಹ್ಯ ಅಪಧಮನಿಗಳು, ಈ ಬದಲಾದ ಪ್ರಕ್ರಿಯೆಯಿಂದಾಗಿ ವಕ್ರವಾಗಿ, ದಪ್ಪನಾಗಿ, ಮೀನಖಂಡಗಳ ಸುತ್ತಮುತ್ತ ನೀಲಿ ಬಣ್ಣವಾಗಿ ಕಾಣಿಸುತ್ತವೆ.

ವೆರಿಕೋಸ್‌ ವೇನ್ಸ್ ಈ ಗುಂಪಿನ ಜನರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಮಹಿಳೆಯರು (ಪುರುಷರಿಗಿಂತ ಎರಡು ಮೂರು ಪಟ್ಟು ಹೆಚ್ಚು), ಗರ್ಭಿಣಿಯರು, ಗರ್ಭನಿರೋಧಕ ಮಾತ್ರೆ ತೆಗೆದುಕೊಳ್ಳುವರು, ಮುಟ್ಟುನಿಂತ ಮಹಿಳೆಯರಲ್ಲಿ ಸಾಮಾನ್ಯ ಮಹಿಳೆಯರಿಗಿಂತ ಹೆಚ್ಚಾಗಿ ಕಂಡು ಬರುತ್ತದೆ. ಹೆಚ್ಚು ಹೊತ್ತು ನಿಂತು/ ಕುಳಿತು ಕೆಲಸ ಮಾಡುವವರಲ್ಲಿ. ಸ್ಥೂಲಕಾಯದವರಲ್ಲಿ ವೃದ್ಧಾಪ್ಯ ಆನುವಂಶಿಕವಾಗಿ (ಕುಟುಂಬದಲ್ಲಿ ಯಾರಿಗಾದರೂ ಈ ಸಮಸ್ಯೆ ಇದ್ದಲ್ಲಿ) ಹುಟ್ಟಿನಿಂದಲೇ ಕವಾಟಗಳ ನ್ಯೂನತೆಯಿಂದ ನರಳುವವರಲ್ಲಿ ವೆರಿಕೋಸ್‌ ವೇನ್‌ನಿಂದ ನರಳುವ ರೋಗಿಗಳಲ್ಲಿ ಈ ಲಕ್ಷಣಗಳು ಕಂಡುಬರುತ್ತವೆ. ಕಾಲುಗಳಲ್ಲಿ ಅದರಲ್ಲೂ ಹೆಚ್ಚಾಗಿ ಹಿಮ್ಮಡಿಯ ಮೇಲ್ಭಾಗದಲ್ಲಿ ಮೀನಖಂಡಗಳ ಸುತ್ತಮುತ್ತ ಮಂದವಾದ ನೋವು/ ಒತ್ತಡಗಳಿಂದ  ನರಳುತ್ತಾರೆ. ರೋಗಿಗಳು ಸಾಮಾನ್ಯವಾಗಿ ಹೆಚ್ಚು ಹೊತ್ತು ನಿಂತು ಕೆಲಸ ಮಾಡಿದಾಗ ಈ ಚಿಹ್ನೆಗಳಿಂದ ನರಳುತ್ತಾರೆ. ಮತ್ತು ಕೆಲ ಹೊತ್ತು ಕುಳಿತು ವಿಶ್ರಾಂತಿ ತೆಗೆದುಕೊಂಡರೆ ನೋವಿನಿಂದ ನಿರಾಳವಾಗುತ್ತಾರೆ. ಕಾಲುಗಳು ಭಾರವಾದಂತೆನಿಸುತ್ತವೆ. ಕೆಲವೊಮ್ಮೆ ಪಾದದ ಕೀಲಿನ ಸುತ್ತ ಮೇಲ್ಭಾಗದಲ್ಲಿ ಊದಿಕೊಂಡಂತೆ ಅನಿಸುವುದೂ ಉಂಟು. ಮೀನ ಕಂಡದ ಮಾಂಸ ಹಿಡಿದಂತಾಗುವುದು (calf muscle cramp)ವೆರಿಕೋಸ್ ವೇಯ್ನ್ ನ ಪ್ರಮುಖ ಲಕ್ಷಣ ವಾಗಿದೆ. ಈ ಪರಿಸ್ಥಿತಿ ಬಹಳ ಕಾಲದವರೆಗೆ ಮುಂದುವರಿದರೆ ಮೇಲೆ ಹೇಳಿದ ಭಾಗಗಳಲ್ಲಿ ವಾಸಿಯಾಗದ ಹುಣ್ಣುಗಳಾಗಬಹುದು. ರಕ್ತ ಹೃದಯಕ್ಕೆ ವಾಪಸಾಗದೆ ಕಾಲು/ ಪಾದಗಳ ಸುತ್ತ ಉಳಿಯುವುದರಿಂದ ಈ ಪರಿಸ್ಥಿತಿ ಉಂಟಾಗುತ್ತದೆ. ಈ ಎಲ್ಲ ಕಾರಣಗಳಿಂದ ಆ ಭಾಗದ ಚರ್ಮ ಒಣಗಿದಂತೆ, ಬಿರಿದಂತೆ ಕಂಡುಬರುತ್ತದೆ, ಮತ್ತು ರೋಗಿಗಳು ತುರಿಕೆಯಿಂದ ನರಳುತ್ತಾರೆ.

ಇದೂ ಹುಣ್ಣುಗಳಾಗಲು ಕಾರಣವಾಗಬಹುದು. ಅಪಧಮನಿಗಳು ಈ ಭಾಗದಲ್ಲಿ ನೀಲಿ ಬಣ್ಣದ, ದಪ್ಪವಾದ, ಓರೆಕೋರೆಯಾಗಿ ಹಗ್ಗಗಳಂತೆ ಕಾಣುತ್ತವೆ. ಚಿಕಿತ್ಸೆ: ಮೇಲೆ ಹೇಳಿದ ಯಾವುದೇ ಲಕ್ಷಣ ಕಾಣಿಸಿಕೊಂಡಾಗ, ದಿನಚರಿಯಲ್ಲಿ ಕೆಲವೊಂದು ಬದಲಾವಣೆಗಳಿಂದ ಈ ತೊಂದರೆಯನ್ನು ಹತೋಟಿಯಲ್ಲಿಡಬಹುದು. ಹೆಚ್ಚು ಸಮಯ ನಿಂತು ಕೆಲಸ ಮಾಡುವುದನ್ನು ಕಡಿಮೆ ಮಾಡಬೇಕು. ಕೂತಾಗ ಇಲ್ಲವೆ ಮಲಗಿದಾಗ ಕಾಲು/ ಪಾದಗಳನ್ನು ಮೇಲಿನ ಮಟ್ಟಕ್ಕಿಡುವುದರಿಂದ ಕೆಲಮಟ್ಟಿಗೆ ಪರಿಸ್ಥಿತಿ ಸುಧಾರಿಸಬಹುದು. (ಕಾಲಿನ ಕೆಳಗೆ ದಿಂಬು ಇಡುವುದು). ಮಾರುಕಟ್ಟೆಯಲ್ಲಿ ಲಭ್ಯವಿರುವ ಒತ್ತಡದ ಸಾಕ್ಸ್‌ಗಳನ್ನು ಧರಿಸುವುದರಿಂದಲೂ ಸಮಸ್ಯೆ ಹತೋಟಿಯಲ್ಲಿಡಬಹುದು. ಈ ಸಾಕ್ಸ್ ಹಾಕಿದಾಗ, ರಕ್ತನಾಳಗಳ ಮೇಲೆ ಒತ್ತಡ ಬಿದ್ದು, ರಕ್ತ ಸರಿಯಾದ ಮಾರ್ಗದಲ್ಲಿ ಸಂಚರಿಸಲು ಅನುಕೂಲವಾಗುತ್ತದೆ. ಅಲ್ಲದೆ ರಕ್ತ ಆಳದಲ್ಲಿರುವ ನಾಳಗಳಿಂದ ಮೇಲ್ಮೈಯ ನಾಳಗಳಿಗೆ ಬರುವುದನ್ನು ತಡೆಗಟ್ಟಿ, ಬಾಹ್ಯ ನಾಳಗಳಿಂದ ಆಳದ ನಾಳಗಳಿಗೆ ಮಾತ್ರ ಹೋಗುವಂತೆ ಮಾಡುತ್ತದೆ. ರೋಗಿಗೆ ಕೇವಲ ಮಂದ ನೋವಿದ್ದರೆ, ಈ ಮೇಲಿನವುಗಳನ್ನು ಪಾಲಿಸುವುದರಿಂದ ಕಡಿಮೆಯಾಗುತ್ತದೆ. ಹೀಗಾದರೆ ನೋವು ದಿನದಿಂದ ದಿನಕ್ಕೆ ಹೆಚ್ಚಾದರೆ, ವಾತ ಹೆಚ್ಚಾದರೆ, ಚರ್ಮ ಕೆಂಪಾಗಿ ಹುಣ್ಣಾಗುವಂತಿದ್ದರೆ, ಜ್ವರ ಕಾಣಿಸಿಕೊಂಡರೆ ತಕ್ಷಣ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳಬೇಕು.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/