ಪಬ್ಲಿಕ್ ಟಿವಿ ರಂಗಣ್ಣನನ್ನು ಟ್ರೋಲ್ ಮಾಡುವವರು ಇದನ್ನೊಮ್ಮೆ ಓದಿ!ಮೈಸೂರಿನ ಒಬ್ಬ ಸಾಮಾನ್ಯ ಹುಡುಗ ಪಬ್ಲಿಕ್ ಟಿವಿ ಕಟ್ಟಿದ್ದು ಹೇಗೆ ಗೊತ್ತಾ? ಮೇ 12, 1966 ರೈಲ್ವೆ ಹಾಸ್ಪಿಟಲ್ ನಲ್ಲಿ ಜನಿಸಿದ ಹುಡುಗ, ಚಿಕ್ಕವನಿರುವಾಗಲೇ ತುಂಬಾ ಚೂಟಿ, ಅತ್ಯಂತ ಸ್ವಾಭಿಮಾನಿ, ಹಠವಾದಿ. ತನಗೆ ಏನು ಬೇಕೋ ಅದನ್ನು ಸಾಧಿಸಬೇಕು ಮತ್ತು ಪಡೆಯಬೇಕು ಎಂಬ ಹಂಬಲವಿರುವ ಹುಡುಗ. ಕೆಲವೇ ಕೆಲವು ಸ್ನೇಹಿತರನ್ನು ಇಟ್ಕೊಂಡು ಶಾಲೆಗೆ ಹೋಗುತ್ತಿರುತ್ತಾನೆ. 8ನೇ ತರಗತಿಯಲ್ಲಿ ಇರುವಾಗ ವೃಂದ ತರಂಗ ಎಂಬ ಆರ್ಕೆಸ್ಟ್ರ ವನ್ನು ಕಟ್ಟಿ, ಭಾವಗೀತೆಗಳನ್ನು ಹಾಡುವುದಕ್ಕೆ ಮುಂದಾಗುತ್ತಾನೆ. ಅಲ್ಲಿಂದ ಆತನ ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳುತ್ತಾನೆ.

ಮೈಸೂರಿನಲ್ಲಿ ತನ್ನ ಶಾಲಾ ಕಾಲೇಜುಗಳನ್ನು ಮುಗಿಸಿದ ರಂಗನಾಥ್, ಜರ್ನಲಿಸಂ ಆದ ಬಳಿಕ ಬೆಂಗಳೂರಿಗೆ ಪಾದಾರ್ಪಣೆ ಮಾಡುತ್ತಾರೆ. ಕನ್ನಡಪ್ರಭ ದಿನಪತ್ರಿಕೆಯಲ್ಲಿ ರಿಪೋರ್ಟರ್ ಆಗಿ ಸೇರುತ್ತಾರೆ. ಹತ್ತು ವರ್ಷಗಳ ಕಾಲ ರಿಪೋರ್ಟರ್ ಆಗಿ ಕೆಲಸ ಮಾಡಿ, ಅನೇಕ ಸುದ್ದಿಗಳನ್ನು ಸಂಗ್ರಹಿಸಿ ಮನೆ ಮಾತಾಡುತ್ತಾರೆ. ನಂತರ ಇವರು ಸುವರ್ಣನ್ಯೂಸ್’ನ ಸಂಪಾದಕರಾಗಿ ಸೇರಿಕೊಳ್ಳುತ್ತಾರೆ. ಅಲ್ಲಿ ಇವರು ಕೊಟ್ಟಿರುವಂತಹ ವರದಿಗಳಿಗೆ ಅತ್ಯುತ್ತಮವಾದ ರೆಸ್ಪಾನ್ಸ್ ಸಿಗುತ್ತಿರುತ್ತದೆ. ಅಲ್ಲಿ ಅವರಿಗೆ ಆತ್ಮಸಾಕ್ಷಿ ವಿರುದ್ಧವಾಗಿ ಕೆಲವು ಕೆಲಸಗಳನ್ನು ಮಾಡಬೇಕೆಂಬ ಪ್ರೇರಣೆ ಸಿಗುತ್ತದೆ. ಇದನ್ನು ತಿರಸ್ಕರಿಸಿ, ರಾಜೀನಾಮೆ ನೀಡುತ್ತಾರೆ.ಅಲ್ಲಿಂದ ಅವರು ಹೊರಬಂದು ಒಂದು ಟಿವಿ ಚಾನಲ್ ಕಟ್ಟುವುದಾಗಿ ತೀರ್ಮಾನಿಸುತ್ತಾರೆ.

ರಂಗನಾಥ್ ಅವರು ಟಿವಿ ಚಾನಲ್ ಕಟ್ಟುವ ವಿಷಯವಾಗಿ ಸಂಬಂಧಿಕರು, ಸ್ನೇಹಿತರು ಹಾಗೂ ನೆರೆಹೊರೆಯವರ ಬಳಿ ಚರ್ಚಿಸುತ್ತಾರೆ. ಅವರಿಂದ ಎಲ್ಲಾ ನಕಾರಾತ್ಮಕ ಪ್ರತಿಕ್ರಿಯೆಗಳು ಹೊರಬರುತ್ತವೆ. ಇವುಗಳಿಂದ ಎದೆಗುಂದದೆ, ಧೈರ್ಯವಾಗಿ ಮುನ್ನಡೆಯುತ್ತಾರೆ. ಈ ಸಮಯದಲ್ಲಿ ಅವರ ಆತ್ಮೀಯ ಸ್ನೇಹಿತರೊಬ್ಬರು ರಂಗನಾಥ್ ಗೆ ಸಪೋರ್ಟ್ ನೀಡುತ್ತಾರೆ. ಒಂದು ದಿನ ಇವರಿಬ್ಬರು ಕಾರಿನಲ್ಲಿ ಸಂಚರಿಸುತ್ತಿರುವಾಗ ಅವರ ಎದುರಿನಲ್ಲಿ ಒಂದು ಪಬ್ಲಿಕ್ ಟ್ರಾನ್ಸ್ಪೋರ್ಟ್ ಎಂದು ಬರೆದಿರುವ ಲಾರಿ ಎದುರಾಗುತ್ತದೆ. ಅದನ್ನು ನೋಡಿದ ರಂಗನಾಥ ತಮ್ಮ ಚಾನಲ್ಲಿಗೆ ಪಬ್ಲಿಕ್ ಟಿವಿಯಲ್ಲಿ ಎಂದು ಹೆಸರು ಇಡುತ್ತಾರೆ.

ಟಿವಿ ಚಾನಲ್ ನಡೆಸುವುದಕ್ಕೆ ಬೇಕಾಗಿರುವಂತಹ ಉಪಕರಣಗಳನ್ನು ಇಡೀ ದೇಶದಾದ್ಯಂತ ಸಂಚರಿಸಿ, ಸೆಕೆಂಡ್ ಹ್ಯಾಂಡ್ ಕ್ಯಾಮೆರಾ ಹಾಗೂ ಸ್ಟುಡಿಯೋ ಸೆಟಪ್ ಗಳನ್ನು ಖರೀದಿ ಮಾಡುತ್ತಾರೆ. ಜನವರಿ 26, 2012 ರಂದು ಪಬ್ಲಿಕ್ ಟಿವಿ ಲೋಕರ್ಪಣೆ ಯಾಗುತ್ತದೆ. ತನ್ನ ಸಹದ್ಯೋಗಿಗಳ ಸಹಾಯದಿಂದ ಅದ್ಭುತವಾದಂತಹ ಟೀಮ್ ಒಂದನ್ನು ರಚನೆ ಮಾಡುತ್ತಾರೆ. ನಂತರ ಕೇವಲ ಒಂದೇ ವರ್ಷದಲ್ಲಿ ಪಬ್ಲಿಕ್ ಟಿವಿ ಅತ್ಯುತ್ತಮ ಸುದ್ದಿ ವಾಹಿನಿಯಾಗಿ ಹೊರಹೊಮ್ಮುತ್ತದೆ.