ಕಲ್ಕಿಯಾಗಿ ಅವತರಿಸಲಿದ್ದರೆ ಮಹಾವಿಷ್ಣು! ಈಗಾಗಲೇ ಶುರುವಾಗಿದೆ ಕಲಿಯುಗ ಅಂತ್ಯದ ಆ 6 ಲಕ್ಷಣಗಳು.?!ವಿಷ್ಣು ಕಲ್ಕಿ ಅವತಾರ ಎತ್ತುವುದು ಯಾವಾಗ ಗೊತ್ತ? ಕಲಿಯುಗದ ಅಂತ್ಯದ ಬಗ್ಗೆ ಶ್ರೀಮದ್ಭಗವದ್ಗೀತಾ ಪುರಾಣದಲ್ಲಿ ಏನಿದೆ? ಕಲಿಯುಗ ಅಂತ್ಯದ ಆ 6 ಲಕ್ಷಣಗಳೇನು? ಕಲಿಯುಗದ ಅಂತ್ಯದಲ್ಲಿ ವಿಷ್ಣು ಕಲ್ಕಿಯ ಅವತಾರವನ್ನು ಎತ್ತಿ ಬರುತ್ತಾನೆ. ಬೆಳ್ಳಿ ಕುದುರೆಯಲ್ಲಿ ಬಂದು ಅಧರ್ಮದ ನಾಶಮಾಡುತ್ತಾನೆ ಎಂದು ನೀವೆಲ್ಲಾ ಕೇಳಿರುತ್ತೀರಿ. ಹಿಂದೂ ಧರ್ಮದ ಗ್ರಂಥಗಳ ಪ್ರಕಾರ ವಿಷ್ಣುವಿನ ಕಲ್ಕಿ ಅವತಾರ ಕಲಿಯುಗದ ಕೊನೆಯ ಅವತಾರವಾಗಿದೆ. ಭೂಮಿ ಮೇಲೆ ಪಾಪ ಅಂತಿಮ ಹಂತವನ್ನು ತಲುಪಿದಾಗ ಎಲ್ಲೆಲ್ಲೂ ಅತ್ಯಾಚಾರ, ಅಧರ್ಮ, ಅನಾಚಾರಗಳೇ ತುಂಬಿಹೋಗುತ್ತದೆ.

ಆಗ ಸೃಷ್ಟಿಯ ಉದ್ಧಾರಕ್ಕಾಗಿ ವಿಷ್ಣು ಕಲ್ಕಿ ಅವತಾರವನ್ನು ಎತ್ತಿ ಬಂದು, ಮೂರೆ ಮೂರು ದಿನಗಳಲ್ಲಿ ಕಲಿಯುಗದ ಅಂತ್ಯ ಮಾಡಿ ಧರ್ಮವನ್ನು ಸ್ಥಾಪಿಸಿ ಸತ್ಯಯುಗಕ್ಕೆ ನಾಂದಿ ಹಾಡುತ್ತಾರೆ. ಶ್ರೀಮದ್ಭಗವದ್ಗೀತಾದಲ್ಲಿ ತಿಳಿಸಿರುವಂತೆ ಕಲಿಯುಗದ ಅಂತ್ಯದಲ್ಲಿ ಆರು ಲಕ್ಷಣಗಳು ಕಂಡುಬರುತ್ತವೆ. ಮೊದಲನೆಯ ಲಕ್ಷಣ ಹಸಿವು ಮತ್ತು ರೋಗ. ಕಲಿಯುಗದ ಅಂತ್ಯದಲ್ಲಿ ಜನ ಹಸಿವು ಮತ್ತು ಬಾಯಾರಿಕೆ ಎಂದು ವಿವಿಧ ರೀತಿಯಲ್ಲಿ ಬದುಕುತ್ತಾರೆ. ಬಗೆ ಬಗೆಯ ರೋಗಗಳು ಕಾಣಿಸಿಕೊಳ್ಳುತ್ತವೆ. ಮನುಷ್ಯನ ಸರಾಸರಿ ವಯಸ್ಸು ಕಡಿಮೆಯಾಗುತ್ತದೆ. ಕಲಿಯುಗದ ಅಂತ್ಯದಲ್ಲಿ ಮನುಷ್ಯನ ಆಯಸ್ಸು ಕೇವಲ 20 ರಿಂದ 30 ವರ್ಷಕ್ಕೆ ಬಂದು ನಿಂತಿರುತ್ತದೆ. ಎರಡನೆಯ ಲಕ್ಷಣ ನೀರಿನ ಮೂಲ ಒಣಗಿ ಹೋಗುತ್ತದೆ. ನದಿ ಸರೋವರಗಳು ಬತ್ತಿಹೋಗುತ್ತವೆ. ನೀರಿಲ್ಲದೆ ಇಡೀ ಸೃಷ್ಟಿಯಲ್ಲಿ ಆಹಾಕಾರ ಉಂಟಾಗುತ್ತದೆ. ಮೂರನೆಯದು ಕಲಿಯುಗದ ಅಂತ್ಯದಲ್ಲಿ ಪತಿ-ಪತ್ನಿಯರ ಸಂಬಂಧ ಕೆಟ್ಟ ಹಂತಕ್ಕೆ ತಲುಪುತ್ತದೆ. ಅವರು ಒಬ್ಬರನ್ನೊಬ್ಬರನ್ನು ಬಿಟ್ಟು ಬೇರೆ ಸ್ತ್ರೀ ಅಥವಾ ಪುರುಷರೊಂದಿಗೆ ಅನೈತಿಕ ಸಂಬಂಧವನ್ನು ಬೆಳೆಸುತ್ತಾರೆ.

ಧರ್ಮ ಸ್ಥಾನದಲ್ಲಿ ಅಧರ್ಮ. ದೇವಾಲಯಗಳಲ್ಲಿ ಧರ್ಮ ಮತ್ತು ಪವಿತ್ರತೆಯ ಬದಲಾಗಿ ಅಧರ್ಮ ಮತ್ತು ಅಪವಿತ್ರತೆ ಗಳ ಬಗ್ಗೆ ಚರ್ಚೆ ನಡೆಯುತ್ತದೆ. ದೇವಸ್ಥಾನಗಳು ಹಣ ಸಂಪಾದಿಸುವ ಮಾರ್ಗಗಳಾಗಿ ಬದಲಾಗುತ್ತವೆ. ಐದನೆಯ ಲಕ್ಷಣ ಸ್ವಾರ್ಥದ ಜೀವನ. ತಮ್ಮ ಸ್ವಾರ್ಥ ಗಳನ್ನು ಈಡೇರಿಸಿಕೊಳ್ಳಲು ಹತ್ಯೆ ಹಾಗೂ ಬೆನ್ನು ಹೆಚ್ಚುವರಿ ಹಾಕುವಂತಹ ಕೆಟ್ಟ ಕೆಲಸಗಳನ್ನು ಮಾಡುತ್ತಾರೆ. ಆರನೆಯದು ಅಧರ್ಮದ ಪೂಜೆ. ಧರ್ಮವನ್ನು ನಂಬುವವರು, ದೇವರನ್ನು ಪೂಜಿಸುವವರು ಯಾರು ಇರುವುದಿಲ್ಲ. ಎಲ್ಲರೂ ನಾಸ್ತಿಕರಾಗಿ ಬದಲಾಗುತ್ತಾರೆ. ಧರ್ಮ ಅಧರ್ಮಗಳ ವ್ಯತ್ಯಾಸ ತಿಳಿಯದೇ ಜನರು ಜಾನುವಾರುಗಳಂತೆ ಬದುಕುತ್ತಾರೆ.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/