ಮುಂಬರುವ ಗ್ರಹಣಗಳ ಬಗ್ಗೆ ಬೆಚ್ಚಿಬೀಳಿಸುವ ಭವಿಷ್ಯ ನುಡಿದ ಕೋಡಿಮಠ ಶ್ರೀ!ಕೋಲಾರ: ಭಾರತದಲ್ಲಿ ಕೊರೋನಾ ಅಟ್ಟಹಾಸ ಇನ್ನೂ ಮುಂದುವರೆಯಲಿದೆ ಎಂದು ಕೋಲಾರದಲ್ಲಿ ಕೋಡಿ ಮಠದ ಶ್ರೀಗಳಾದ ಶಿವಕುಮಾರ ಶಿವಾನಂದರು ಭವಿಷ್ಯ ನುಡಿದಿದ್ದಾರೆ. ಶ್ರೀನಿವಾಸಪುರ ತಾಲೂಕಿನ ದಳಸನೂರು ಗ್ರಾಮಕ್ಕೆ ಆಗಮಿಸಿದ್ದ ಶ್ರೀಗಳು, ಯುಗಾದಿ ಹಬ್ಬದ ನಂತರ ಸಾಕಷ್ಟು ಬದಲಾವಣೆಗಳು ಆಗುವ ಸಾಧ್ಯತೆ ಇದೆಯೆಂದು ತಿಳಿಸಿದ್ದಾರೆ. ಸಾಂಕ್ರಾಮಿಕ ರೋಗಗಳು ನಮ್ಮಲ್ಲಿ ಭೀತಿಯನ್ನು ಉಂಟುಮಾಡುತ್ತಿದೆ ಎಂದರೆ, ನಾವು ಸಾಕಷ್ಟು ದುರ್ಬಲರಾಗಿದ್ದೇವೆ ಎಂದು ಕೋಡಿ ಮಠದ ಶ್ರೀಗಳು ತಿಳಿಸಿದ್ದಾರೆ. ಇನ್ನು, ಮನೆಯಲ್ಲಿ ನಾವು ಮಾಡುವ ಕೆಲ ಚಟುವಟಿಕೆಗಳಿಂದ ನಮ್ಮ ಸಂಪ್ರದಾಯವನ್ನು ಮರೆಮಾಚುತ್ತಿದೆ. ಚಪ್ಪಲಿ ಹಾಕಿಕೊಂಡು ಅಡುಗೆ ಮನೆಯಲ್ಲಿ ಓಡಾಡಬಾರದು. ಕಾರ್ತಿಕದಲ್ಲಿ ದೀಪ ಹಚ್ಚುವುದು ಉತ್ತಮ ಸಂಪ್ರದಾಯ. ಒಳ್ಳೆಯ ಸಂಪ್ರದಾಯಗಳನ್ನು‌ ಕೈಬಿಟ್ಟಿರುವುದರಿಂದ ಕಾಯಿಲೆಗಳು ಹಿಂಬಾಲಿಸುತ್ತಿವೆ. ಹಾಗಾಗಿ ಸ್ವಚ್ಛತೆ ಬಹಳ ಮುಖ್ಯ. ಒಂದು ಗ್ರಾಂ ಕೊರೋನಾ ವೈರಸ್ ಜಗತ್ತಿನ 700 ಕೋಟಿ ಜನರನ್ನು ಹೆದರಿಸುತ್ತಿದೆ. ಸಣ್ಣ ವ್ಯಾಧಿ ಮನುಷ್ಯನನ್ನು ಹೆದರಿಸಲು, ಮನುಷ್ಯ ಅಜ್ಞಾನಿ ಆಗಿರುವುದೇ ಕಾರಣ ಎಂದಿದ್ದಾರೆ.

ಮುಂದೆ ಕೆಲ ಗ್ರಹಣಗಳ ನಂತರ ಜಗತ್ತಿನಲ್ಲಿ ಅಚ್ಚರಿಯ ಸಂಗತಿಗಳು ನಡೆಯಲಿವೆ. ಪ್ರಳಯ, ಕುಂಭದ್ರೋಣ ಮಳೆ ಹಾಗೂ ಭೂಕಂಪನ ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಇನ್ನು ಜಗತ್ತಿನಾದ್ಯಂತ ರಾಜಕೀಯ ವಿಪ್ಲವ ಆಗಲಿದೆ. ಈ ರೀತಿ ಹೇಳಿದರೆ ಯಡಿಯೂರಪ್ಪ ಬಿದ್ದು ಹೋಗುತ್ತಾರೆ ಎಂದು ಮಾಧ್ಯಮದವರು ಹೇಳಬೇಡಿ. ಸಿಎಂ ಯಡಿಯೂರಪ್ಪ ಅವರು ಕೂಡ ಇದಕ್ಕೆ ಹೊರತಾಗಿಲ್ಲ ಎಂದು ತಿಳಿಸಿದ್ದಾರೆ. ಇಂದಿನ‌ ದಿನಗಳ ರಾಜಕೀಯ, ವಿಪ್ಲವಕ್ಕೆ ಈ ಗ್ರಹಣಗಳೇ ಕಾರಣ. ಭಗವಂತನ‌ ಪ್ರಾರ್ಥನೆಯಿಂದ ಇದಕ್ಕೆಲ್ಲ‌ ಪರಿಹಾರವೂ ಇದೆ. ಯಾರೂ ಕೂಡ ಅದಕ್ಕೆ ಹೆದರಬೇಕಿಲ್ಲ. ಮುಂದಿನ ದಿನಗಳಲ್ಲಿ ದೇಶದಲ್ಲಿ ಒಳ್ಳೆಯ ದಿನಗಳಿಲ್ಲ ಎಂದ ಕೋಡಿ ಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.


ಜಾಹಿರಾತು: ನಿಮ್ಮ ಏನೇ ಸಮಸ್ಯೆ ಇದ್ದರೂ ಕೂಡಲೇ ಈ ಕೆಳಕಂಡ ಸಂಖ್ಯೆಗೆ ಕರೆ ಮಾಡಿ!

ಪಂಡಿತ್ ದಾಮೋದರ್ ಭಟ್
ದಕ್ಷಿಣ ಕರ್ನಾಟಕದ ಖ್ಯಾತ
ಜ್ಯೋತಿಷ್ಯರು ಮತ್ತು ಆಧ್ಯಾತ್ಮಿಕ ಚಿಂತಕರು
ನಿಮ್ಮ ಕುಟುಂಬದ ಯಾವುದೇ ಸಮಸ್ಯೆ ಹೇಳಿಕೊಳ್ಳಬಹುದಾದ
ಅಥವಾ ಅಲ್ಲದ, ವಿದ್ಯಾಭ್ಯಾಸ ವ್ಯವಹಾರದ ಕಷ್ಟ,
ಆರ್ಥಿಕ ಸಂಕಷ್ಟಕ್ಕೆ ಮೂಲಕಾರಣ ಮತ್ತು ಅದಕ್ಕೆ ಸೂಕ್ತ ಪರಿಹಾರ ಶತಸಿದ್ಧ!

ಈಗಲೇ ಕರೆಮಾಡಿ : 9008611444


ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/