ಅದೃಷ್ಟ ಎಂದರೆ ಹೀಗಿರಬೇಕು! ; ಖರೀದಿಸಿದ್ದ 160 ಲಾಟರಿಯಲ್ಲಿ ಈತ ಗೆದ್ದ ಲಾಟರಿಗಳ ಸಂಖ್ಯೆ ಕೇಳಿದರೆ ತಲೆ ತಿರುಗುತ್ತದೆ?!.ವರ್ಜೀನಿಯಾ: ಲಾಟರಿ ಸಂಪೂರ್ಣವಾಗಿ ಅದೃಷ್ಟ ಮೇಲೆ ನಿಂತಿರುತ್ತದೆ. ನೀವು ಅದೆಷ್ಟೇ ಟಿಕೆಟ್ ಖರೀದಿಸಿದರೂ ಅದೃಷ್ಟ ಚೆನ್ನಾಗಿದ್ದರೆ ಮಾತ್ರವೇ ಲಾಟರಿ ನಿಮ್ಮ ಕೈ ಹಿಡಿಯುತ್ತದೆ. ಇಲ್ಲೊಬ್ಬ ಮನುಷ್ಯ ತನ್ನ ಅದೃಷ್ಟ ಪರೀಕ್ಷೆಗೆಂದು 160 ಲಾಟರಿ ಟಿಕೆಟ್ ಖರೀದಿಸಿದ್ದ. ಆತನ ಅದೃಷ್ಟ ಎಷ್ಟರ ಮಟ್ಟಿಗೆ ಚೆನ್ನಾಗಿತ್ತೆಂದರೆ ಕೊಂಡಿದ್ದ ಅಷ್ಟೂ ಟಿಕೆಟ್ಗೆ ಲಾಟರಿ ಹಾರಿದೆ. ವರ್ಜೀನಿಯಾದ ಕ್ವಾಮೆ ಕ್ರಾಸ್ ಆ ಅದೃಷ್ಟವಂತ. ಈತ ಡಿಸೆಂಬರ್ 5ರಂದು ಟಿವಿ ನೋಡುತ್ತಾ ಕುಳಿತಿದ್ದನಂತೆ. ಆಗ ಟಿವಿಯಲ್ಲಿ ಕಂಡ ಒಂದು ಸಂಖ್ಯೆಯ ಈತನಿಗೆ ಆಕರ್ಷಿತವೆನಿಸಿದೆ. 7314 ಸಂಖ್ಯೆಯ ಮೇಲೆ ಬರೋಬ್ಬರಿ 160 ಲಾಟರಿ ಟಿಕೆಟ್ ಖರೀದಿಸಿದ್ದಾನೆ. ಅದಾದ ಮೇಲೆ ಆತ ಅದರ ಯೋಚನೆ ಬಿಟ್ಟು ತನ್ನ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾನೆ.

ಇತ್ತೀಚೆಗೆ ಲಾಟರಿ ವಿಜೇತರ ಪಟ್ಟಿ ಬಿಡುಗಡೆ ಮಾಡಲಾಗಿದೆ. ಆ ಸಮಯದಲ್ಲಿ ಕ್ವಾಮೆ ರೆಸ್ಟೋರೆಂಟ್​ ಒಂದರಲ್ಲಿ ಫಾಸ್ಟ್​ ಫುಡ್​ ಆರ್ಡರ್​ ಮಾಡಿ, ಅದು ಬರುವುದನ್ನು ಕಾಯುತ್ತಾ ಕುಳಿತಿದ್ದನಂತೆ. ಆಗ ಈತನಿಗೆ ಕರೆ ಬಂದಿದ್ದು, ಈತನ 160 ಟಿಕೆಟ್​ಗಳು ಲಾಟರಿ ಗೆದ್ದಿರುವುದಾಗಿ ತಿಳಿಸಲಾಗಿದೆ. ಬರೋಬ್ಬರಿ 8 ಲಕ್ಷ ಡಾಲರ್​ (ಸರಿಸುಮಾರು 5.89 ಕೋಟಿ ರೂಪಾಯಿ)ನ್ನು ಈತ ಗೆದ್ದಿರುವುದಾಗಿ ಹೇಳಲಾಗಿದೆ. ತಕ್ಷಕ್ಕೆ ರೋಸ್ಲಿನ್​ಗೆ ಈ ಮಾತನ್ನು ನಂಬಲಾಗಿಲ್ಲ. ಹತ್ತಾರು ಬಾರಿ ತನ್ನ ಲಾಟರಿ ಟಿಕೆಟ್​ನ್ನು ನೋಡಿದ ಮೇಲೆ ಆತನಿಗೆ ತಾನು ಗೆದ್ದಿರುವುದರ ಬಗ್ಗೆ ನಂಬಿಕೆ ಹುಟ್ಟಿದೆ. ಇದೀಗ ಕೋಟ್ಯಧಿಪತಿಯಾಗಿರುವ ಕ್ವಾಮೆ, ಗೆದ್ದ ಹಣವನ್ನು ಏನು ಮಾಡಬೇಕು ಎನ್ನುವುದರ ಬಗ್ಗೆ ಇನ್ನೂ ಯೋಚಿಸಿಲ್ಲವಂತೆ. ಇದೇ ರೀತಿ ರೇಮಂಡ್ ಹ್ಯಾರಿಂಗ್ಟನ್ಗ ಹೆಸರಿನ ವ್ಯಕ್ತಿ ಒಂದೇ ಸಂಖ್ಯೆಯ 25 ಲಾಟರಿ ಟಿಕೆಟ್​ ಖರೀದಿಸಿದ್ದು, ಅಷ್ಟೂ ಟಿಕೆಟ್​ಗಳು ವಿಜೇತವಾಗಿವೆ. ಆತನಿಗೆ 1.25 ಲಕ್ಷ ಡಾಲರ್​ನ್ನು ಬಹುಮಾನವಾಗಿ ನೀಡಲಾಗಿದೆ.

ಇದನ್ನೂ ಓದಿ :  ಸಿಎಂ ಬದಲಾವಣೆ : ಕೇವಲ ಹಾಸ್ಯದ ತುಣುಕು! ಇನ್ನೂ ಎರಡು ವರ್ಷಗಳ ಕಾಲ ರಾಜಾಹುಲಿಯೇ ಸಿಎಂ?

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/