ಸೋಮವಾರದಿಂದ ರಾಜ್ಯದ ಜನರಿಗೆ ಕೊರೋನಾದಿಂದ ಮುಕ್ತಿ!ಬೆಂಗಳೂರು: ಸೋಮವಾರದಿಂದ ಸಾಮಾನ್ಯ ಜನರು ಸಹ ಕೊರೊನಾ ಲಸಿಕೆ ಪಡೆಯಬಹುದಾಗಿದೆ. ನಾಳೆಯಿಂದ ರಾಜ್ಯದ 200 ಆಸ್ಪತ್ರೆಗಳಲ್ಲಿ ಕೊರೊನಾ ವ್ಯಾಕ್ಸಿನ್ ಸಿಗಲಿದ್ದು, ಲಸಿಕಾ ವಿತರಣೆ ಕೇಂದ್ರ ಸರ್ಕಾರ ಮಾರ್ಗಸೂಚಿ ಸಹ ಬಿಡುಗಡೆ ಮಾಡಿದೆ. ಲಸಿಕೆ ಪಡೆಯಲು ಮುಂದಾಗುವವರು ದಾಖಲಾತಿಗಳೊಂದಿಗೆ ಮಾರ್ಗಸೂಚಿ ಪಾಲಿಸಬೇಕು. ಸರ್ಕಾರಿ, ಖಾಸಗಿ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜುಗಳಲ್ಲಿ ಲಸಿಕೆ ವಿತರಣೆ ನಡೆಯಲಿದೆ.

ಯಾರಿಗೆ ವ್ಯಾಕ್ಸಿನ್?: 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಪಡೆಯಬಹುದಾಗಿದೆ. 45 ವರ್ಷ ಮೇಲ್ಪಟ್ಟ ಅನಾರೋಗ್ಯ ಪೀಡಿತರು ಅಂದರೆ ಡಯಾಬಿಟಿಸ್, ಹಾರ್ಟ್ ಪ್ರಾಬ್ಲಂ, ಹೈಪರ್ ಟೆನ್ಶನ್, ಕ್ಯಾನ್ಸರ್, ಕಿಡ್ನಿ ಪ್ರಾಬ್ಲಂ, ಪಾಶ್ರ್ವವಾಯು ಇರೋವವರು ಲಸಿಕೆ ಪಡೆಯಲಬಹುದಾಗಿದೆ. ಗಂಭೀರ ಖಾಯಿಲೆ ಇದ್ದವರಿಗೆ ವ್ಯಾಕ್ಸಿನ್ ನೀಡಲು ಸಮಂಜಸವಲ್ಲ.

ಎಷ್ಟು ಬೆಲೆ?: ಸರ್ಕಾರಿ ಆಸ್ಪತ್ರೆಯಲ್ಲಿ ಲಸಿಕೆ ಉಚಿತವಾಗಿ ಸಿಗಲಿದು, ಖಾಸಗಿ ಆಸ್ಪತ್ರೆಯಲ್ಲಿ 250 ರೂ. ಪಾವತಿಸಬೇಕು. ಈ ಪೈಕಿ 150 ರೂ. ವ್ಯಾಕ್ಸಿನ್, 100 ರೂ. ಸೇವಾ ಶುಲ್ಕ ಒಳಗೊಂಡಿದೆ. ಕೊ-ವಿನ್ 2.0 ಆ್ಯಪ್, ಆರೋಗ್ಯ ಸೇತು ಆ್ಯಪ್‍ಗಳಲ್ಲಿ ಸ್ವಯಂ ನೋಂದಣಿ ಮಾಡಿಕೊಳ್ಳಬಹುದು ಅಥವಾ ಆನ್‍ಲೈನ್ ನೋಂದಣಿ ಮಾಡದವರು ಲಸಿಕಾ ಕೇಂದ್ರಗಳಲ್ಲಿ ರಿಜಿಸ್ಟರ್ ಮಾಡಿಕೊಳ್ಳಬಹುದಾಗಿದೆ.

ಲಸಿಕೆ ಪಡೆಯುವವರು ರೇಷನ್ ಕಾರ್ಡ್, ಆಧಾರ್ ಕಾರ್ಡ್, ವೋಟರ್ ಐಡಿ ದಾಖಲೆಗಳನ್ನ ನೀಡಬೇಕು. 45-59 ವರ್ಷದವರಿಗೆ ಮೆಡಿಕಲ್ ಸರ್ಟಿಫಿಕೇಟ್ ಕಡ್ಡಾಯ ಮಾಡಲಾಗಿದೆ. ಇನ್ನು ಆರೋಗ್ಯ ಕಾರ್ಯಕರ್ತರು ಎಂಪ್ಲಾಯಿಮೆಂಟ್ ಕಾರ್ಡ್ ಒದಗಿಸಬೇಕು.

ಖಾಸಗಿ ಆಸ್ಪತ್ರೆಗಳಿಗೆ ಮಾರ್ಗಸೂಚಿ: ಒಬ್ಬ ವ್ಯಕ್ತಿಗೆ 1 ಡೋಸ್‍ಗೆ 250 ರೂಪಾಯಿ ಮಾತ್ರ ಬೆಲೆಯನ್ನ ಸರ್ಕಾರ ನಿಗದಿ ಮಾಡಿದೆ. ಫಲಾನುಭವಿಗಳ ರಿಜಿಸ್ಟ್ರೇಶನ್ ವಿವರ ಆನ್‍ಲೈನ್ ಆ್ಯಪ್‍ನಲ್ಲಿ ಅಪ್ಲೋಡ್ ಮಾಡಿಕೊಳ್ಳಬೇಕು. ಕೋಲ್ಡ್ ಚೈನ್ ಲಿಂಕ್ ಫಾಲೋ ಮಾಡಬೇಕು. ವ್ಯಾಕ್ಸಿನ್ ಸೈಟ್ಸ್ ವಿವರ ಕಡ್ಡಾಯವಾಗಿ ಹಾಕಲೇಬೇಕು. ಬೇರೆ ಖಾಯಿಲೆಯಿಂದ ಬಳಲುತಿದ್ದರೆ ಮೆಡಿಕಲ್ ಸರ್ಟಿಫಿಕೇಟ್ ಅಪ್ಲೋಡ್ ಮಾಡಲೇಬೇಕು.

ಬೆಂಗಳೂರಿನಲ್ಲಿ ಬೃಹತ್ ಪ್ಲಾನ್: ಸಿಲಿಕಾನ್ ಸಿಟಿಯಲ್ಲಿ ಲಸಿಕೆ ನೀಡಲು ಬಿಬಿಎಂಪಿ ಬೃಹತ್ ಪ್ಲಾನ್ ಮಾಡಿಕೊಂಡಿದೆ. 198 ವಾರ್ಡ್, ಒಂದೊಂದು ವಾರ್ಡ್ ಗೆ 3 ಟೀಂನಂತೆ ಸರ್ವೇ ಮಾಡಲಾಗುತ್ತಿದ್ದು, ಪ್ರತಿ ತಂಡದಿಂದ ಸ್ಲಂ ನಿವಾಸಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಮುಂದಿನ 10 ದಿನಗಳಲ್ಲಿ ಸರ್ವೆ ಮುಗಿಸಲು ಬಿಬಿಎಂಪಿ ಪ್ಲ್ಯಾನ್ ಮಾಡಲಾಗಿದ್ದು, ಮುಂದಿನ 10 ದಿನಗಳಲ್ಲಿ ಸರ್ವೆ ಮುಗಿಸಲು ಸಿದ್ಧತೆ ನಡೆದಿದೆ. 1 ಕೋಟಿ 30 ಲಕ್ಷ ಜನರ ಆರೋಗ್ಯ ಕಾರ್ಡ್ ರೆಡಿ ಮಾಡಲು ಸಿದ್ಧತೆ ನಡೆದಿದ್ದು, ಖಾಸಗಿ ಆಸ್ಪತ್ರೆಗಳಿಗೆ 1 ದಿನದ ಆನ್‍ಲೈನ್ ತರಬೇತಿ ಲಿಂಕ್ ಮೂಲಕ ಸಲಹೆಗಳನ್ನ ನೀಡಲಾಗುತ್ತದೆ. ಸದ್ಯ 141 ಪ್ರಾಥಮಿಕ ಆರೋಗ್ಯ ಕೇಂದ್ರಗಳು ವ್ಯಾಕ್ಸಿನ್ ಹಂಚಿಕೆಗೆ ಸಿದ್ಧಗೊಂಡಿವೆ.