ಲಕ್ಷಾಂತರ ಸಂಬಳದ ಕೆಲಸ ಬಿಟ್ಟು ವ್ಯವಸಾಯಕ್ಕಿಳಿದ ಈ ಯವತಿಯ ಈಗಿನ ಸಂಪಾದನೆ ಎಷ್ಟು ಗೊತ್ತಾ?ರೈತನೇ ದೇಶದ ಬೆನ್ನೆಲುಬು ಎಂಬ ಮಾತಿದೆ. ಆದರೆ ಈಗೀಗ ಕಾಲ ಬದಲಾಗುತ್ತಿದೆ, ಕಾಲದ ಜೊತೆ ಬದಲಾಗುತ್ತಿರುವ ಜನರು ವ್ಯವಸಾಯದಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಕಾರಣ ವ್ಯವಸಾಯದಿಂದ ನಷ್ಟ ಅನುಭವಿಸುವ ಭಯ ರೈತರು ಹಾಕಿದ ಶ್ರಮಕ್ಕೆ ತಕ್ಕ ಇಳುವರಿ ಸಿಗುತ್ತಿಲ್ಲಾ ಎಂಬುದು ಕೂಡ ಸತ್ಯದ ವಿಷಯವಾಗಿದೆ. ಇದು ನಮ್ಮ ದೇಶದಲ್ಲಿಯೇ ಹೆಚ್ಚಾಗಿ ಕಂಡುಬರುತ್ತಿದೆ, ಇದಕ್ಕೆ ಕಾರಣ ಹುಡುಕುತ್ತಾ ಹೊರಟರೆ ಆಧುನಿಕ ತಂತ್ರಜ್ಞಾನಗಳನ್ನು ಸಮರ್ಪಕವಾಗಿ ಬಳಸದೇ ಇರುವುದು ಕೂಡ ಒಂದು ಎನ್ನಬಹುದಾಗಿದೆ. ಭಾರತವನ್ನು ಹೊರತು ಪಡಿಸಿದರೆ ಬೇರೆ ದೇಶಗಳಲ್ಲಿ ಅಂದರೆ ಇಸ್ರೇಲ್ ತಾಯ್‌ಲಾಂಡ್‌ನAತಹ ದೇಶಗಳಲ್ಲಿ ಆಧುನಿಕ ವ್ಯವಸಾಯ ತಂತ್ರಜ್ಞಾನಗಳ ಬಳಕೆಯಿಂದ ಬಹಳ ಲಾಭವನ್ನು ಪಡೆಯುತ್ತಿದ್ದಾರೆ, ಭಾರತದಲ್ಲಿ ಮಾತ್ರವೇ ಹಳೆಯ ವ್ಯವಸಾಯ ಪದ್ಧತಿಯನ್ನೇ ಇನ್ನೂ ಕೂಡ ಅನುಸರಿಸುತ್ತಿದೆ. ಆದರೆ ಇಲ್ಲೊಬ್ಬ ಹೆಣ್ಣುಮಗಳು ಲಕ್ಷಾಂತರ ರೂಪಾಯಿ ಸಂಬಳ ನೀಡುವ ನೌಕರಿಯನ್ನು ಬಿಟ್ಟು ಮಣ್ಣಿನಮಗಳಾಗಿ ವ್ಯವಸಾಯ ಮಾಡುವ ಮೂಲಕ ಇಡೀ ಭಾರತ ದೇಶದ ಜನರಿಗೆ ಉತ್ತಮ ಮಾದರಿಯಾಗಿ ನಿಂತಿದ್ದಾಳೆ.

ಈಕೆಯ ಹೆಸರು ವಲ್ಲಾರಿ ಚಂದ್ರಕಾರ್ ಇವರು ಛತ್ತೀಸ್‌ಘಡ ರಾಜ್ಯದವಳು. ಕಂಪ್ಯೂಟರ್ ಸೈನ್ಸ್ನಲ್ಲಿ ಎಂ.ಟೆಕ್ ಮಾಡಿರುವ ಇವರಿಗೆ ಲಕ್ಷಾಂತರ ರೂಪಾಯಿ ಸಂಬಳ ನೀಡುವ ಕೆಲಸ ಸಿಕ್ಕಿತ್ತು, ಇದರಿಂದ ನೆಮ್ಮದಿ ಸಿಗದೆ ಒಂದಷ್ಟು ತಿಂಗಳುಗಳ ಕಾಲ ಕಾಲೇಜಿನಲ್ಲಿ ಪ್ರೊಫೆಸರ್ ಆಗಿ ಸೇವೆಸಲ್ಲಿಸಿದರು, ಆಗಾಗ ರಾಯಪುರ್‌ನಿಂದ ತನ್ನ ಹಳ್ಳಿಗೆ ಬರುತ್ತಿದ್ದ ವಲ್ಲಾರಿ ಚಂದ್ರಕಾರ್‌ಗೆ ಹಳ್ಳಿಯಲ್ಲಿಯೇ ಇದ್ದು ವ್ಯವಸಾಯ ಮಾಡುವ ಹಂಬಲವಾಯಿತು, ಅವರು ತಮ್ಮ ತಂದೆಯಲ್ಲಿ ೧೫ ಎಕರೆ ಜಮೀನು ಕೊಡಿಸಿ ಎಂದು ಕೇಳಿದರು, ಅವರ ತಂದೆಯು ಮಗಳ ಇಚ್ಛೆಯಂತೆ ೧೫ ಎಕರೆ ಜಮೀನನ್ನು ಕೊಡಿಸಿದರು. ಆ ಬಳಿಕ ವಲ್ಲಾರಿ ಚಂದ್ರಕಾರ್‌ರವರು ರೈತರು ಸಮಾನ್ಯವಾಗಿ ಎದುರಿಸುವ ಸಮಸ್ಯೆಗಳ ಬಗ್ಗೆ ತಿಳಿದುಕೊಂಡರು ಹಾಗು ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಆಧುನಿಕ ವ್ಯವಸಾಯ ಪದ್ಧತಿಯ ಬಗ್ಗೆ ಇಂಟರ್‌ನೆಟ್‌ನಲ್ಲಿ ರಿಸರ್ಚ್ ಮಾಡಿದರು, ಇದರಿಂದ ಇಸ್ರೇಲ್ ತಾಯ್‌ಲಂಡ್ ನಂತಹ ದೇಶಗಳಲ್ಲಿ ಅನುಸರಿಸುತ್ತಿರುವ ಆಧುನಿಕ ಕೃಷಿ ಪದ್ಧತಿಯ ಬಗ್ಗೆ ತಿಳಿದುಕೊಂಡರು ಹಾಗು ಇದನ್ನು ತಮ್ಮ ಜಮೀನಿನಲ್ಲಿ ಅಳವಡಿಸಿಕೊಂಡ ವಲ್ಲಾರಿ ಚಂದ್ರಕಾರ್‌ರವರು ಬೀನ್ಸ್, ಟೊಮ್ಯಾಟೋ, ಕ್ಯಾಪ್ಸಿಕಮ್, ಹಾಗಲಕಾಯಿ ಮತ್ತು ಮೆಣಸಿನಕಾಯಿಗಳನ್ನು ಬೆಳೆದು ಅದರಲ್ಲಿ ಯಶಸ್ಸು ಕೂಡ ಕಂಡರು ಒಳ್ಳೆಯ ಇಳುವರಿಗಳನ್ನು ತೆಗೆದ ವಲ್ಲಾರಿ ಚಂದ್ರಕಾರ್‌ರು ಈಗ ಡೆಲ್ಲಿ, ಬೆಂಗಳೂರು, ನಾಗ್‌ಪುರ್ ಮತ್ತು ಭೂಪಾಲ್ ನಗರಗಳಲ್ಲಿ ಮಾರಾಟಮಾಡುತ್ತಿದ್ದಾರೆ. ಉತ್ತಮ ನೋಟ ಹಾಗು ಗುಣಮಟ್ಟ ಹೊಂದಿರುವ ಈ ಬೆಳೆಗಳಿಗೆ ಈಗ ದುಬೈ, ಇಸ್ರೇಲ್ನಿಂದಲೂ ಬೇಡಿಕೆ ಬರುತ್ತಿದೆ, ಅಲ್ಲಿಗೂ ರಫ್ತುಮಾಡಿ ಈಗ ಲಕ್ಷ ಲಕ್ಷ ಹಣ ಗಳಿಸುತ್ತಿದ್ದಾರೆ.


ಜಾಹಿರಾತು: ನಿಮ್ಮ ಏನೇ ಸಮಸ್ಯೆ ಇದ್ದರೂ ಕೂಡಲೇ ಈ ಕೆಳಕಂಡ ಸಂಖ್ಯೆಗೆ ಕರೆ ಮಾಡಿ!

ಪಂಡಿತ್ ದಾಮೋದರ್ ಭಟ್
ದಕ್ಷಿಣ ಕರ್ನಾಟಕದ ಖ್ಯಾತ
ಜ್ಯೋತಿಷ್ಯರು ಮತ್ತು ಆಧ್ಯಾತ್ಮಿಕ ಚಿಂತಕರು
ನಿಮ್ಮ ಕುಟುಂಬದ ಯಾವುದೇ ಸಮಸ್ಯೆ ಹೇಳಿಕೊಳ್ಳಬಹುದಾದ
ಅಥವಾ ಅಲ್ಲದ, ವಿದ್ಯಾಭ್ಯಾಸ ವ್ಯವಹಾರದ ಕಷ್ಟ,
ಆರ್ಥಿಕ ಸಂಕಷ್ಟಕ್ಕೆ ಮೂಲಕಾರಣ ಮತ್ತು ಅದಕ್ಕೆ ಸೂಕ್ತ ಪರಿಹಾರ ಶತಸಿದ್ಧ!

ಈಗಲೇ ಕರೆಮಾಡಿ : 9008611444


ADVERTISEMENT

ಹಣ ಗಳಿಸುವುದಷ್ಟೇ ಮುಖ್ಯವಲ್ಲ ಬದಲಿಗೆ ನಮ್ಮ ಆಸಕ್ತಿಯ ದಾರಿಯಲ್ಲಿಯೇ ದುಡಿದು ಸಂಪಾದಿಸುತ್ತಿರುವುದು ಹೆಚ್ಚಿನ ಸಂತೋಷವನ್ನು ನೀಡುತ್ತದೆ. ವ್ಯವಸಾಯ ಬರಿಯ ಉದ್ಯೋಗವಲ್ಲ ಅದು ಜನರ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವ ಒಂದು ಪರಂಪರೆಯಾಗಿದೆ, ವ್ಯವಸಾಯದ ಮೇಲೆ ಇಡೀ ದೇಶವೇ ಅವಲಂಬಿತವಾಗಿದೆ, ಜನರು ನಷ್ಟಕ್ಕೆ ಹೆದರಿ ವ್ಯವಸಾಯ ಮಾಡುವುದನ್ನೇ ಬಿಡುವ ಬದಲು ವ್ಯವಸಾಯದಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿ ಇದನ್ನು ಉತ್ತಮ ಪಡಿಸಿಕೊಳ್ಳುವುದು ಒಳ್ಳೆಯದು. ಹೌದು ವ್ಯವಸಾಯವೊಂದು ಪುರಾತನ ವೃತ್ತಿ ಹಾಗಂದ ಮಾತ್ರಕ್ಕೆ ಅದಕ್ಕೆ ಹಿಂದಿನ ಕಾಲದ ರೀತಿಯೇ ಅನುಸರಿಸಬೇಕೆಂಬ ನಿಯಮವಿಲ್ಲ ಕಷ್ಟ ಪಟ್ಟು ಕೆಲಸ ಮಾಡಿದರೆ ಭೂಮಿ ಎಂದಿಗೂ ಕೈ ಬಿಡುವುದಿಲ್ಲ ಎಂಬುದಕ್ಕೆ ವಲ್ಲಾರಿ ಚಂದ್ರಕಾರ್‌ರವರು ಉತ್ತಮ ಉದಾಹರಣೆಯಾಗಿ ನಮ್ಮೆದುರು ನಿಂತಿದ್ದಾರೆ.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/