ಪ್ರಿಯಾಂಕಾ ವಾದ್ರ ಆಗ್ತಾರಾ ; ಉತ್ತರ ಪ್ರದೇಶದ ಮುಖ್ಯಮಂತ್ರಿ!ಉತ್ತರ ಪ್ರದೇಶ: ಮುಂದಿನ 2022ರಲ್ಲಿ ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು ಕಾಂಗ್ರೆಸ್ ನ ಸಿ.ಎಂ ಅಭ್ಯರ್ಥಿಯಾಗಿ ರಾಬರ್ಟ್ ವಾದ್ರಾ ಪತ್ನಿ ಪ್ರಿಯಾಂಕಾ ವಾದ್ರ ಅವರನ್ನು ಆಯ್ಕೆ ಮಾಡಬೇಕೆಂಬ ಗುಸುಗುಸು ಕಾಂಗ್ರೆಸ್ ನ ಕೌಟುಂಬಿಕ ವಲಯದಲ್ಲಿ ನಡೆದಿದಿದ್ದು ಇದಕ್ಕೆ ಪ್ರಿಯಾಂಕ ವಾದ್ರ ಕೂಡ ಒಪ್ಪಿದ್ದಾರೆ ಎನ್ನಲಾಗಿದೆ. ಕಳೆದ ಲೋಕಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಎಂಬ ಹೆಸರಿನಲ್ಲಿ ಭಾರತದ ಜನರಿಗೆ ಪರಿಚಿತವಾಗಿದ್ದ ಪ್ರಿಯಾಂಕ ವಾದ್ರ‌ ಕಾಂಗ್ರೆಸ್ ನ ಹೀನಾಮಾನವಾದ ಸೋಲಿನ ನಂತರ ನಾಪತ್ತೆಯಾಗಿದ್ದರು. ಇಷ್ಟು ದಿನಗಳವರೆಗೆ ನಿರುದ್ಯೋಗಿಯಂತೆ ಇದ್ದ ಪ್ರಿಯಾಂಕಾ ವಾದ್ರ ಈಗ ಮತ್ತೆ ವೀಲ್ ಕಟ್ಟಿಕೊಂಡು ಫೀಲ್ಡಿಗೆ ಬಂದಿದ್ದಾರೆ. ಇನ್ನು ಎರಡು ವಾರಗಳಲ್ಲಿ ಚುನಾವಣಾ ಅಭಿಯನವನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸಲಾಗುವುದು ಎಂಬುದಾಗಿ ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿ ವಕ್ತಾರ ಸುರೇಂದ್ರ ರಜಪೂತ್ ತಿಳಿಸಿದ್ದಾರೆ. ಯೋಗಿಯವರನ್ನು ಕೆಳಗಿಳಿಸುವ ಪಣ ತೊಟ್ಟಿರುವ ಕಾಂಗ್ರೆಸ್ ಅದಾಗಲೇ ಎಷ್ಟೋ ಸುಳ್ಳು ಆರೋಪಗಳನ್ನು ಮಾಡಲು ಆರಂಭಿಸಿದ್ದು ಇದರಲ್ಲಿ ಮುಖ್ಯವಾಗಿ ದಲಿತ ಹುಡುಗಿ ಹತ್ರಾಸ್ ಪ್ರಕರಣವು ಒಂದಾಗಿದೆ ಎಂದೂ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.

ಹೀಗೆ ಉತ್ತರ ಪ್ರದೇಶ ಪೂರ್ತಿ ಬರಗೆಟ್ಟು ಹೋಗಿದೆ, ಇಲ್ಲಿ ಶಾಂತಿ, ನೆಮ್ಮದಿ ಇಲ್ಲ, ಬ್ರಹ್ಮಚಾರಿಯಿಂದ ಉತ್ತರ ಪ್ರದೇಶ ಉಧ್ದಾರವಾಗಲ್ಲ, ಉತ್ತರ ಪ್ರದೇಶಕ್ಕೆ ಒಬ್ಬ ಹೀರೋಯಿನ್ ಅವಶ್ಯಕತೆಯಿದೆ ಎಂದು ಈಗಾಗಲೇ ಬಿಂಬಿಸಿರುವ ಕಾಂಗ್ರೆಸ್ ಅಂತಿಮ ಹಂತದಲ್ಲಿ , ನೀವು ಪುರಾತನ ಕಾಲದಿಂದ ತಪಸ್ಸು ಮಾಡಿ ಕಾದ ಹೀರೋಯಿನ್ ಇವರೇ ಎಂದು ವಾದ್ರಾ ಅವರನ್ನು ಹೊಸ ವೇಶದಲ್ಲಿ ಬಿಂಬಿಸುವ ಕಾರ್ಯವನ್ನು ಕಾಂಗ್ರೆಸ್ ಮಾಡುತ್ತದೆ ಎಂದು ಹೇಳಲಾಗುತ್ತಿದೆ. ಇದೆಲ್ಲದರ ನಡುವೆ ಅಪಪ್ರಚಾರಗಳನ್ನು ತಡೆಯುವಲ್ಲಿ ಯೋಗಿ ಯಶಸ್ವಿಯಾಗಿ ಮತ್ತೆ ಉತ್ತರ ಪ್ರದೇಶದ ಗಾದಿ ಹಿಡಿಯುತ್ತಾರಾ ಎಂಬುದನ್ನು ಕಾದು‌ನೋಡಬೇಕಿದೆ.

ಜಾಹಿರಾತು : ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ಇವರು ವಶೀಕರಣ ಮಹಾ ಮಾಂತ್ರಿಕರು ಹಾಗೂ ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ ಹಾಗೂ ಪುರುಷ ವಶೀಕರಣ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಕೆಳಗೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ 9740202800 ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು.9740202800