ಪ್ರವಾಸಿ ಸ್ಥಳದಲ್ಲಿ ಮೋಜು ಮಾಡುವವರಿಗೆ ರಾಮನಗರ ಜಿಲ್ಲಾ ಪಂಚಾಯಿತಿ ಅಧಿಕಾರಿ ಮಾಸ್ಟರ್ ಪ್ಲಾನ್!ರಾಮನಗರ: ಕೆಲವು ಜನರು ಪ್ರಕೃತಿ ಸೌಂದರ್ಯ ಸವಿಯುವ ನೆಪದಲ್ಲಿ ಬೆಟ್ಟಗುಡ್ಡಗಳಲ್ಲಿ ಮೋಜು, ಮಸ್ತಿ ಮಾಡಿ ತಾಜ್ಯವನ್ನು ಅಲ್ಲೇ ಬಿಟ್ಟು ಹೋಗುತ್ತಾರೆ. ಘನ ತ್ಯಾಜ್ಯವನ್ನು ಸ್ವಚ್ಚಗೊಳಿಸುವ ನಿಟ್ಟಿನಲ್ಲಿ ರಾಮನಗರ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಮ್ ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ.
ಘನ ತ್ಯಾಜ್ಯಗಳಿಂದ ಮಲಿನವಾಗಿರುವ ಬೆಟ್ಟ ಗುಡ್ಡಗಳಲ್ಲಿ ಟ್ರಾಕ್ಕಿಂಗ್ ಮಾಡುವ ಮೂಲಕ ಆ ಪ್ರದೇಶದ ಸುತ್ತ-ಮುತ್ತ ಇರುವ ಪ್ಲಾಸ್ಟಿಕ್ ಬಾಟಲಿ, ಪ್ಲಾಸ್ಟಿಕ್ ಪ್ಯಾಕೆಟ್ ಇನ್ನಿತರ ತ್ಯಾಜ್ಯ ವನ್ನು ಸಂಗ್ರಹಣೆ ಮಾಡುತ್ತಿದ್ದಾರೆ. ಕಸವನ್ನು ಆ ಪಂಚಾಯಿತಿ ವ್ಯಾಪ್ತಿಯ ಘನ ತ್ಯಾಜ್ಯ ನಿರ್ವಹಣೆ ಘಟಕಕ್ಕೆ ನೀಡುವ ವಿನೂತನ ಸ್ವಚ್ಛತ ಕಾರ್ಯಕ್ರಮಕ್ಕೆ ಸಿಇಓ ಇಕ್ರಂ ಚಾಲನೆ ನೀಡಿದರು.
ರಾಮನಗರ ತಾಲೂಕಿನ ಕೂಟಗಲ್ ಬೆಟ್ಟಕ್ಕೆ ಟ್ರಾಕ್ಕಿಂಗ್‌ ಹೋದ ಕಾರ್ಯನಿರ್ವಾಹಕ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಆ ಪ್ರದೇಶದ ಹಾಕಿರುವ ಪ್ಲಾಸ್ಟಿಕ್ ಬಾಟಲ್, ಪ್ಲಾಸ್ಟಿಕ್ ಪ್ಯಾಕೆಟ್ ಇನ್ನಿತರ ತ್ಯಾಜ್ಯವನ್ನು ಸಂಗ್ರಹಿಸಿ ಘನ ತ್ಯಾಜ್ಯ ನಿರ್ವಹಣೆ ಘಟಕಕ್ಕೆ ನೀಡಿದರು.
ರಾಮನಗರವನ್ನು ಕಸ ಮುಕ್ತ ಜಿಲ್ಲೆ ಮಾಡುವ ಭಾಗವಾಗಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಮ್ ಸ್ವಚ್ಛ ಶುಕ್ರವಾರ ಎಂಬ ಅಭಿಯಾನದ ನಂತರ ಪ್ರಕೃತಿ ಸೌಂದರ್ಯದ ಭಾಗವಾದ ಬೆಟ್ಟ ಗುಡ್ಡಗಳ ಸಂರಕ್ಷಣ ಅಭಿಯಾನಕ್ಕೆ ಮುನ್ನುಡಿ ಬರದಿರುವುದು ಜನರ ಪ್ರಶಂಸೆಗೆ ಪಾತ್ರವಾಗಿದೆ.