ಏನೋ ಬ್ರಾಹ್ಮಣ ಪುಳಿಚಾರು ಎಂದವರು ಮುಸ್ಲಿಮರ ಗಡ್ಡದ ಬಗ್ಗೆ, ತುಂಡರೆಸಿದ ಅಂಗದ ಬಗ್ಗೆಯೇಕೆ ಮಾತನಾಡುವುದಿಲ್ಲ – ರವಿ ಬೆಳೆಗರೆ ಲೇಖನ ಓದಿಜಾತಿ-ಧರ್ಮ ಮತ್ತು ಸಾಹಿತಿಗಳು ಬ್ರಾಹ್ಮಣರನ್ನು ಹಿಗ್ಗಾಮಗ್ಗಾ ಬೈಯುವ ಮಂದಿಗೆ ಕೆಲವು ಪ್ರಶ್ನೆಗಳು!
ಒಬ್ಬ ಬ್ರಾಹ್ಮಣ ಮತ್ತು ಒಂದು ನಾಗರಹಾವು ಏಕಕಾಲಕ್ಕೆ ಎದುರಿಗೆ ಬಂದರೆ ಮೊದಲು ಬ್ರಾಹ್ಮಣನನ್ನು ಕೊಲ್ಲು ಅಂದರು ಮಹಾನ್‌ ನಾಸ್ತಿಕ ಹೋರಾಟಗಾರ ಪೆರಿಯಾರ್‌!’ ಅಂತ ಬರೆದ ಕನ್ನಡ ಲೇಖಕನ ಹೆಗಲ ಮೇಲೆ ಕೈಹಾಕಿ ಮುಗುಳ್ನಗುತ್ತಾ, ‘ಎಂಥ ಬ್ರೆೃಟ್‌ ರೈಟಿಂಗ್‌ ಕಣಯ್ಯಾ ನಿಂದೂ.. ! ಎಷ್ಟೊಂದು ಓದಿಕೊಂಡಿದೀಯಾ.. ’ ಅಂದರು. ಹಾಗಂದವರು ಬ್ರಾಹ್ಮಣರೂ ಆಗಿದ್ದರು!

‘ಪುರೋಹಿತಶಾಹಿ ಮನಸ್ಥಿತಿ ನಿರ್ನಾಮವಾಗಬೇಕು! ಇವತ್ತಿನ ಸಮಾಜದ ಎಲ್ಲ ದುಷ್ಟತನ, ದೌರ್ಜನ್ಯ, ಶ್ರೇಣೀಕೃತ ವ್ಯವಸ್ಥೆಗೆ ಬ್ರಾಹ್ಮಣರೇ ಕಾರಣ! ಶತಶತಮಾನಗಳಿಂದ ಬ್ರಾಹ್ಮಣರು ನಮ್ಮನ್ನು ಶೋಷಿಸುತ್ತ ಬಂದಿದ್ದಾರೆ.. ’ ಅಂದರು. ಕೇಳಿಸಿಕೊಂಡವರು ಚಪ್ಪಾಳೆ ಹೊಡೆದರು.


ಜಾಹಿರಾತು: ನಿಮ್ಮ ಏನೇ ಸಮಸ್ಯೆ ಇದ್ದರೂ ಕೂಡಲೇ ಈ ಕೆಳಕಂಡ ಸಂಖ್ಯೆಗೆ ಕರೆ ಮಾಡಿ!

ಪಂಡಿತ್ ದಾಮೋದರ್ ಭಟ್
ದಕ್ಷಿಣ ಕರ್ನಾಟಕದ ಖ್ಯಾತ
ಜ್ಯೋತಿಷ್ಯರು ಮತ್ತು ಆಧ್ಯಾತ್ಮಿಕ ಚಿಂತಕರು
ನಿಮ್ಮ ಕುಟುಂಬದ ಯಾವುದೇ ಸಮಸ್ಯೆ ಹೇಳಿಕೊಳ್ಳಬಹುದಾದ
ಅಥವಾ ಅಲ್ಲದ, ವಿದ್ಯಾಭ್ಯಾಸ ವ್ಯವಹಾರದ ಕಷ್ಟ,
ಆರ್ಥಿಕ ಸಂಕಷ್ಟಕ್ಕೆ ಮೂಲಕಾರಣ ಮತ್ತು ಅದಕ್ಕೆ ಸೂಕ್ತ ಪರಿಹಾರ ಶತಸಿದ್ಧ!

ಈಗಲೇ ಕರೆಮಾಡಿ : 9008611444


‘ಬ್ರಾಹ್ಮಣರು ಮಾಂಸ ತಿನ್ನೋಕೆ ಶುರುವಾದಾಗಿನಿಂದಲೇ ಮಾಂಸದ ರೇಟು ಜಾಸ್ತಿಯಾಯಿತು’ ಅಂದರು. ಬ್ರಾಹ್ಮಣರನ್ನು ಹೀಯಾಳಿಸಿ ನಾಟಕ ಬರೆದರು. ಸಿನಿಮಾ ತೆಗೆದರು. ಉತ್ತರ ದೇಶದಲ್ಲಿ ತಿಥಿ ಮಾಡಿಸುವ ಬ್ರಾಹ್ಮಣರನ್ನು ‘ಪಂಡ’ ಎನ್ನುತ್ತಾರೆ. ಹಾಗನ್ನುವುದಕ್ಕೆ ಮೂಲ ಕಾರಣ ‘ಷಂಡ’ ಎಂಬುದು ಅಂದರು. ಬ್ರಾಹ್ಮಣನ ಬುದ್ಧಿವಂತಿಕೆ ಅಂದರೆ, ಅದು ಕುತಂತ್ರ ಅಂದರು. ಆಚಾರಿ, ಪೂಜಾರಿ, ಭಟ್ಟ, ಶಾಸ್ತ್ರೀ, ಅಯ್ಯಂಗಾರಿ, ಪುಳಿಚಾರು -ಇವೆಲ್ಲವೂ ಲೇವಡಿಯ ,ಗೇಲಿಯ, ಅಪಹಾಸ್ಯದ ಶಬ್ದಗಳಾದವು.

‘ಈ ನಾಡಿನ ದಲಿತ, ಹಿಂದುಳಿದ, ಅಲ್ಪಸಂಖ್ಯಾತರೆಲ್ಲ ಒಂದಾಗಬೇಕು’ ಅಂದರು. (ಜಾಹಿರಾತಿನ ನಂತರದಲ್ಲಿ ಮುಂದುವರೆದಿದೆ)

ಬ್ರಾಹ್ಮಣರಲ್ಲಿರುವ ಸ್ಮಾರ್ತ, ವೈಷ್ಣವ, ಶ್ರೀವೈಷ್ಣವರು ಒಂದು ಕಡೆ ಸೇರಿ ‘ಬ್ರಾಹ್ಮಣ ಸಭಾ’ ಕಾರ್ಯಕ್ರಮ ಮಾಡುತ್ತೇವೆ ಅಂದರೆ -‘ದುಷ್ಟರೆಲ್ಲ ಒಂದಾಗಿ ಬಿಟ್ಟಿರಿ’ ಅಂದರು. ಬ್ರಾಹ್ಮಣ ಮತ್ತು ಬ್ರಾಹ್ಮಣ್ಯಗಳೆರಡೂ ನಮ್ಮ ಕ್ರಾಂತಿಕಾರಿಗಳ ಕಣ್ಣಿಗೆ ಎಲ್ಲ ಶತಮಾನಗಳಲ್ಲೂ ಅಪಾಯಕಾರಿಗಳಾಗಿ, ಶೋಷಣೆ ಮಾಡುವವರಾಗಿ, ಯಾವತ್ತೂ ಕೈಗೆ ಸಿಕ್ಕರೂ ಒದೆಯ ಬೇಕಾದವರಾಗಿ ಕಾಣಿಸಿದರು.

‘ನೀವು ಶತಶತಮಾನಗಳಿಂದ ಮಾಡುತ್ತ ಬಂದಿದ್ದ ಶೋಷಣೆಗೆ ಇವತ್ತು ನಿಮ್ಮ ತಲೆಮಾರು ಕಂದಾಯ ಕಟ್ಟಲೇ ಬೇಕು ’ ಅಂದರು. ‘ಇಕ್ರಲಾ’ ಅಂದರು.‘ಒದೀರಲಾ’ ಅಂದರು!

ಫೈನ್‌. ಅವೆಲ್ಲವೂ ಕ್ರಾಂತಿಕಾರಿಯಾಗಿ ಕಾಣಿಸಿದವು.

ಒಬ್ಬ ಮುಸಲ್ಮಾನನನ್ನು ನಿಲ್ಲಿಸಿ? ಕವಿ ಕೆ.ಎಸ್‌.ನಿಸಾರ್‌ ಅಹಮದ್‌ರೊಬ್ಬರನ್ನು ಬಿಟ್ಟರೆ, ಕನ್ನಡದಲ್ಲಿ(ಅದೂ ಕರಾವಳಿಯಲ್ಲಿ) ಯಾವುದೇ ಮುಸ್ಲಿಂ ಗಂಡು ಅಥವಾ ಹೆಣ್ಣು ಪದ್ಯ ಬರೆದರೆ, ಕತೆ, ಕಾದಂಬರಿ ಬರೆದರೆ ‘ಅವರದು ಮುಸ್ಲಿಂ ಸಂವೇದನೆಯಿರುವ ಕ್ರಿಯಾಶೀಲತೆ ’ ಅಂದರು. ಅಪ್ಪಿ ತಪ್ಪಿ ಕೂಡ ಹಿಂದೂ ಸಂವೇದನೆಯನ್ನು ಇವರು ಗೌರವಿಸಿ ಮಾತನಾಡಲಿಲ್ಲ.

ಬ್ರಾಹ್ಮಣ ಲೇಖಕ ಜಾತಿ ಬಿಟ್ಟು ಮದುವೆಯಾದರೆ, ಮಾಂಸ ತಿನ್ನುವುದನ್ನು ರೂಢಿಸಿಕೊಂಡರೆ, ತನ್ನದೇ ಮನೆಯಲ್ಲಿ ಜಾತ್ಯಂತರ ವಿವಾಹ ನಡೆಸಿಕೊಟ್ಟರೆ ಅದನ್ನು ‘ಲಿಬರೇಟೆಡ್‌ ಮೈಂಡ್‌’ ಅಂದರು. ‘ಜಾತಿ ವಿನಾಶವಾಗಿ ಸಮಸಮಾಜ ಬರಬೇಕಾದರೆ ಮೇಲ್ಜಾತಿಯವರು ಕೆಳಜಾತಿಯವರನ್ನು ಮದುವೆಯಾಗಬೇಕು’ ಅಂದರು. ಹಿಂದೂ ಹುಡುಗಿ, ಒಬ್ಬ ಮುಸ್ಲಿಂ ಯುವಕನೊಂದಿಗೆ ಓಡಿ ಹೋದರೆ ‘ಅದು ಕ್ರಾಂತಿಕಾರಿ ಘಟನೆ’ ಅಂದರು.

ಮುಸ್ಲಿಂ ಹುಡುಗನೊಬ್ಬ ಹಿಂದೂ ಹುಡುಗಿ ತನ್ನೊಂದಿಗೆ ಬರಲು ಒಪ್ಪದಿದ್ದಾಗ ಅವಳನ್ನು ಕೊಂದು ಹಾಕಿದರೆ ‘ಯಾರೋ ಒಬ್ಬ ಮುಸಲ್ಮಾನ ತಪ್ಪು ಮಾಡಿದನೆಂದು, ನೀವು ಎಲ್ಲಾ ಮುಸಲ್ಮಾನರನ್ನೂ ದ್ವೇಷಿಸಿದರೆ ಹೇಗೆ? ನಿಮ್ಮದು ಮನು ಪೀಡಿತ ಮನಸ್ಸು ’ ಅಂದರು. ಮದರಸಾಗಳಿಂದ ಎದ್ದು ಹೋದ ಪಾನ್‌ ಇಸ್ಲಾಮಿಕ್‌ ಪ್ರೇರಿತ ಯುವಕರು ಸೆಂಟ್ರಲ್‌ ಮಾರ್ಕೆಟ್ಟಿನಲ್ಲಿ ಬಾಂಬು ಸಿಡಿಸಿ ಹಿಂದೂ-ಮುಸ್ಲಿಂರೆನ್ನದೆ ನೂರಾರು ಜನರನ್ನು ಕೊಂದು ಹಾಕಾದಾಗ, ‘ಅವರು ವಿದ್ಯೆಯಿಂದ ವಂಚಿತರಾದ ಅಮಾಯಕರು. ಅವರನ್ನು ದ್ವೇಷಿಸುವುದಕ್ಕಿಂತ, ಅವರು ಹಿಂದೂ ಬಹುಸಂಖ್ಯಾತರ ಮಧ್ಯೆ ಅನುಭವಿಸುತ್ತಿರುವ ಅಭದ್ರತೆಯನ್ನ, ಇನ್‌ಸೆಕ್ಯೂರಿಟಿಯನ್ನ ನಾವು ಅರ್ಥಮಾಡಿಕೊಳ್ಳಬೇಕು!’ ಅಂದರು.


ಇವತ್ತಿನ ತನಕ ಚಂದ್ರಶೇಖರ ಪಾಟೀಲ, ಲಂಕೇಶ್‌, ಅನಂತಮೂರ್ತಿ, ದೇವನೂರ ಮಹಾದೇವ, ಸಿದ್ಲಿಂಗಯ್ಯ ಅಥವಾ ಮತ್ಯಾವುದೇ ಹೆಸರಾಂತ ಕನ್ನಡ ಲೇಖಕನೂ ಮುಸ್ಲಿಂರ ಪೈಕಿ ಒಬ್ಬೇ ಒಬ್ಬ ಮುಸಲ್ಮಾನನ್ನು ನಿಲ್ಲಿಸಿ, ‘ನೀನು ನಿನ್ನ ಜಾತಿಯ ನಿರ್ಗತಿಕರನ್ನು ಶೋಷಣೆ ಮಾಡ್ತಿದೀಯ. ಕಾಂಡೋಮ್ನ ಬಳಸಬೇಡಿ ಅಂತ ಬೋಧಿಸಿ ಬಡತನ ಹೆಚ್ಚಿಸುತ್ತಿದ್ದೀಯ. ಸೈನ್ಸ್‌ ಓದಿಕೊಳ್ಳಲು ಬಿಡದೆ ನಿನ್ನ ಮಕ್ಕಳಿಗೆ ಅರಬ್ಬಿ-ಫಾರ್ಸಿ ಕಲಿಸುತ್ತಿದ್ದೀಯ. ನೀನೊಬ್ಬ ಶೋಷಕ. ಬ್ರಾಹ್ಮಣರ ಜುಟ್ಟಿನಂತೆಯೇ ನಿನ್ನ ಗಡ್ಡ ಕೂಡ ಶೋಷಕ ಧರ್ಮದ ಸಂಕೇತ!’ ಅಂತ ಹೇಳಿಲ್ಲ.

ಒಂದು ಕಡೆಯಿಂದ ಲೆಕ್ಕ ಹಾಕುತ್ತ ಬಂದರೆ, ಜಾತಿ ನಾಶದ ಪ್ರಯತ್ನ-ಕ್ರಾಂತಿಕಾರಿ ನಿಲುವುಗಳು, ಸಮಸಮಾಜದ ನಿರ್ಮಾಣ ಪ್ರಯತ್ನ, ಪುರೋಹಿತ ಶಾಹಿ ವಿರೋಧಿ ಹೋರಾಟ, ಉಳಿದವರಿಗಿಂತ ಮೊದಲು ನಾವು-ನಾವು ನಮ್ಮ ಜಾತಿಗಳನ್ನು ಕಳೆದುಕೊಳ್ಳಬೇಕು ಎಂಬ ಉದಾತ್ತ ಚಡಪಡಿಕೆ -ಇವೆಲ್ಲ ಆರಂಭವಾಗಿ ನಲವತ್ತು ವರ್ಷಗಳೇ ಆದವು. ನೂರಾರು, ಸಾವಿರಾರು ಬ್ರಾಹ್ಮಣರು ಜಾತಿ ಧಿಕ್ಕರಿಸಿ ಲಿಬರೇಟ್‌ ಆದರು. ಮಾಂಸ ತಿಂದರು. ಜಾತ್ಯಂತರ ವಿವಾಹಗಳಾದರು. ತಮ್ಮದೇ ಜಾತಿಯ ಮಡಿ ಹೆಂಗಸರನ್ನು ಧಿಕ್ಕರಿಸಿದರು. ಅವಹೇಳನ ಮಾಡಿ ಬರೆದರು.

ಹಂದಿ ತಿಂದರಾ?

ಇಷ್ಟಾಯಿತಲ್ಲ? ಈ ನಲವತ್ತು ವರ್ಷದ ಕ್ರಾಂತಿ ಪಥದಲ್ಲಿ, ಬದಲಾವಣೆಯಲ್ಲಿ, ಸಂಕ್ರಮಣದಲ್ಲಿ ಒಬ್ಬೇ ಒಬ್ಬ ಮುಲ್ಲಾ ಅಥವಾ ಒಬ್ಬೇ ಒಬ್ಬ ಮುಸಲ್ಮಾನ ಕುರಾನದ ವಿರುದ್ಧ, ಸುನ್ನಿ ಅಥವಾ ಷಿಯಾ ಸಂಪ್ರದಾಯಗಳ ವಿರುದ್ಧ ಮಾತಾಡಿದುದನ್ನು ಕೇಳಿದ್ದೀರಾ? ಒಬ್ಬ ಕ್ರಾಂತಿಕಾರಿ ಮುಸಲ್ಮಾನ ತನ್ನ ಮನೆಯಲ್ಲಿ ಜಾತ್ಯಂತರ ವಿವಾಹ ಮಾಡಿಸಿದುದನ್ನು ನೋಡಿದ್ದೀರಾ? ಒಬ್ಬೇ ಒಬ್ಬ ಲಿಬರಲ್‌ ಮುಸಲ್ಮಾನ ಹಂದಿ ತಿನ್ನುವುದಾಗಿ ಘೋಷಿಸಿದುದು ನಿಮ್ಮ ಗಮನಕ್ಕೆ ಬಂದಿದೆಯೇ?

ಬ್ರಾಹ್ಮಣರಲ್ಲಿ, ಹಿಂದೂ ದೇಶದ ಮತ್ಯಾವುದೇ ಮೇಲು ಜಾತಿಗಳಲ್ಲಿ ಆದ ಯಾವ ಬದಲಾವಣೆಯೂ ಮುಸ್ಲಿಮ್‌ ಪುರೋಹಿತಶಾಹಿಯಲ್ಲಿ ಆಗಿಲ್ಲ. ಅಟ್‌ ಲೀಸ್ಟ್‌, ನಿಮ ಸಾಹಿತ್ಯ-ಭಾಷಣಗಳಿಂದಾಗಿ ಆಗಿಲ್ಲ. ಅಲ್ಲಿ ಬಂಡಾಯದ ಬಾವುಟ ಏಳಲಿಲ್ಲ.

ಗಮನಿಸಿ ನೋಡಿದರೆ, ಉಳಿದ ಮಡಿವಂತರಿಗಿಂತ ತೀವ್ರವಾಗಿ, ಭಯಂಕರವಾಗಿ ಮುಸ್ಲಿಮರಲ್ಲಿ ಅನೇಕರು ಆತಂಕಕಾರಿ ಉಗ್ರ ಇಸ್ಲಾಮಿಕ್‌ ಚಳವಳಿಯ ಕಡೆಗೆ ಆಕರ್ಷಿತರಾದರು. ಬ್ರಾಹ್ಮಣರಿಗಿಂತ, ಲಿಂಗಾಯಿತರಿಗಿಂತ, ವಕ್ಕಲಿಗರಿಗಿಂತ ಹೆಚ್ಚು ಉತ್ಸಾಹದಿಂದ ತಮ್ಮ ಧಾರ್ಮಿಕ ಮೂಲವನ್ನು ಅಸರ್ಟೈನ್‌ ಮಾಡಿಕೊಂಡರು. ಒಸಾಮಾ ಬಿನ್‌ ಲ್ಯಾಡೆನ್‌ ಮಾಡಿದ್ದು ಸರಿಯೆಂದರು, ಅವನ ಪರವಾಗಿ ಬೀದಿಗಳಿದರು.

ಇವತ್ತು ಇಡೀ ಪ್ರಪಂಚಕ್ಕೆ ತಲೆ ನೋವಾಗಿರುವುದು ಪಾಕ್‌ ಇಸ್ಲಾಮಿಕ್‌ ಉಗ್ರವಾದವೇ ಹೊರತು ಬ್ರಾಹ್ಮಣರಲ್ಲ, ಆರೆಸ್ಸೆಸ್ಸಲ್ಲ, ಹಿಂದೂ ಐಕಮತ್ಯವಲ್ಲ, ಬಿಜೆಪಿ ಅಲ್ಲವೇ ಅಲ್ಲ. ಆದರೆ ಯಾರೂ ಕೂಡ ಮುಸ್ಲಿಂ ಉಗ್ರವಾದವನ್ನು ಬೆಂಬಲಿಸುವ ಮುಲ್ಲಾನನ್ನು ನಿಲ್ಲಿಸಿ ‘ಏನ್ರಯ್ಯಾ ನೀವು ಮಾಡ್ತಿರೋದು .. ’ ಅಂತ ಗದರಿಸಿ ಕೇಳಲಿಲ್ಲ.

`ಏನೋ ಬ್ರಾಹ್ಮಣಾ.. ಪುಳಿಚಾರೂ! ಅಂದವರು ಒಂದೇ ಒಂದು ಸಲ ಮುಸ್ಲಿಮರ ಗಡ್ಡದ ಬಗ್ಗೆ, ತುಂಡರಿಸಿದ ಅಂಗದ ಬಗ್ಗೆ, ಮುಸ್ಲಿಂ ಮೌಢ್ಯದ ಬಗ್ಗೆ ಮಾತನಾಡಿದ್ದಿದ್ದರೆ ಇಷ್ಟೆಲ್ಲ ರಗಳೆಯಾಗುತ್ತಿರಲಿಲ್ಲ. ಜಾತಿ ನಾಶಬಯಸುವವರು ಎಲ್ಲ ಜಾತಿಗಳ ನಾಶವನ್ನೂ ಬಯಸಬೇಕು.

ನಿಜ ಹೇಳಬೇಕೆಂದರೆ, ಮುಸ್ಲಿಮರು ಭಾರತದ ಮೇಲೆ ದಂಡೆತ್ತಿ ಬಂದು ನಾನಾ ನಗರ, ಊರು, ದೇಗುಲ, ವ್ಯಕ್ತಿಗಳ ಮೇಲೆ ಅನಾಚಾರ ಮತ್ತು ಅತ್ಯಾಚಾರ ಮಾಡಿದರು ಅಂದ ಇವತ್ತು ಅವರನ್ನು ಖಂಡಿಸಬೇಕಾಗಿಲ್ಲ. ಅದಕ್ಕೋಸ್ಕರ ಎಸ್.ಎಲ್.ಭೈರಪ್ಪ ಇಷ್ಟೆಲ್ಲ ಸಾಕ್ಷಿ ಹುಡುಕಿ `ಮುಸ್ಲಿಂ ಅತಿರೇಕವನ್ನು ಓದುಗರಿಗೆ ಸಾಬೀತು ಮಾಡಬೇಕಿಲ್ಲ.

ಇತಿಹಾಸದಿಂದ ಅವರು ಒಂದೇ ಒಂದು ಗರಿ ಎತ್ತಿಕೊಂಡು ಬರಬೇಕಿರಲಿಲ್ಲ. ಇವತ್ತು ಮುಸ್ಲಿಂ ಭಯೋತ್ಪಾದನೆ, ಇವತ್ತು ವಿಜ್ಞಾನದೆಡೆಗೆ ಮುಸ್ಲಿಂ ಕರ್ಮಠರ ನಿಲುವು, ಇವತ್ತು ಮುಸ್ಲಿಂ ರಾಷ್ಟ್ರಗಳು ಇತರರೆಡೆಗೆ ತಳೆದಿರುವ ರಾಜಕೀಯ ನಿಲುವುಗಳು, ಇವತ್ತು ಮುಲ್ಲಾಗಳು ಬೋಧಿಸುವ ಮಡಿವಂತ ಇಸ್ಲಾಂ-ಹೇಗಿದೆಯೆಂದು ವಿಶ್ಲೇಷಿಸಿದ್ದರೆ ಸಾಕಿತ್ತು.

ಜಾತಿಗಳನ್ನು ಧಿಕ್ಕರಿಸುವುದೇ ನಿಮ್ಮ ನಿಲುವಾಗಿದ್ದರೆ ಮುಸ್ಲಿಂ ಮಡಿವಂತಿಕೆಯನ್ನೂ ಧಿಕ್ಕರಿಸಿ. ಇಕ್ರಲಾ ಅನ್ನಿ, ವದೀರಲಾ ಅನ್ನಿ. ನಮ್ಮ ಹಂದೀನ ಮನೆಯೊಳಕ್ಕೆ ಬಿಟ್ಕಂಡು, ಅದರ ತಲೆ ನೇವರಿಸರಪ್ಪಾ ಅನ್ನಿ!

ಗೀತೇ ನೀನು ಹೇತೆ! (ಜಾಹಿರಾತಿನ ನಂತರ ಓದಿ)

ಉಹುಂ, ಯಾವ ಕ್ರಾಂತಿಕಾರಿಯೂ ಅನ್ನುವುದಿಲ್ಲ. `ಭಗವದ್ಗೀತೇ, ನೀನು ಭಾರತದ ತುಂಬ ಹೇತೆ ಅಂತ ಪದ್ಯ ಬರೆದವರಿದ್ದಾರೆ. ಸೀತೆ ಹೋಗಿ ಲಕ್ಷ್ಮಣನ ಜೊತೆಗೆ ಮಲಗಬಯಸಿದ್ದಳು ಅಂತ ಬರೆದವರಿದ್ದಾರೆ. ಮಡಿವಂತ ಪ್ರಾಣೇಶಾಚಾರ್ಯರನ್ನು ಹೆಂಡತಿ ಸಾಯುತ್ತಿರುವ ಘಳಿಗೆಯಲ್ಲಿ ಶೂದ್ರ ಚಂದ್ರಿಯೊಂದಿಗೆ ಮಲಗಿಸಿದವರಿದ್ದಾರೆ.

ಹಾಡಹಗಲೇ ಭಗವಂತನ ಫೋಟೋಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದವರಿದ್ದಾರೆ. ಶಂಕರಾಚಾರ್ಯರನ್ನು ರೌಡಿ ಷೀಟರ್ ಎಂಬಂತೆ ಚಿತ್ರಿಸಿದವರಿದ್ದಾರೆ. ಒಬ್ಬೇ ಒಬ್ಬ ಕ್ರಾಂತಿಕಾರಿ ತನ್ನ ಕೃತಿಯಲ್ಲಿ, ಕತೆಯಲ್ಲಿ, ಕವಿತೆಯಲ್ಲಿ ಭಗವದ್ಗೀತೆಗೆ ಅಂಥ ಮಾತುಗಳನ್ನ, ಪುರೋಹಿತನಿಗೆ ಬೈದ ಬೈಗುಳವನ್ನು, ಆರೆಸ್ಸೆಸ್ಸಿಗೆ ಮಾಡಿದ ಅವಹೇಳನವನ್ನು -ಕುರಾನ್‌ಗೆ, ಮುಲ್ಲಾಗೆ ಮತ್ತು ಜಮಾತ್-ಎ-ಇಸ್ಲಾಂಗೆ ಮಾಡಿದುದನ್ನು ತೋರಿಸುತ್ತೀರಾ?

ಇವು ಪ್ರಶ್ನೆಗಳು.

ಗೋಡ್ಸೆ ಎಂಬ ಹೆಸರು

ಇವತ್ತು ನಾವು ಕೇಳದಿದ್ದರೂ, ಸಾವಿರ ವರ್ಷಗಳ ನಂತರ ಇತಿಹಾಸ ಓದುತ್ತಾ ಕುಳಿತವನೊಬ್ಬ ಎದ್ದು ಹೋಗಿ ಅವರಪ್ಪನನ್ನು ಕೇಳುವ ಪ್ರಶ್ನೆಗಳು ಸಾಕಷ್ಟಿವೆ. ಜಗತ್ತಿನ ಯಾವುದೋ ಮೂಲೆಯಲ್ಲಿ ಆಗುವ ಅತಿಚಿಕ್ಕ ಕದಲಿಕೆಯನ್ನೂ ಅರ್ಥಮಾಡಿಕೊಳ್ಳಬಲ್ಲ, ವಿಶ್ಲೇಷಿಸಬಲ್ಲ ನಮ್ಮ ಬುದ್ಧಿಜೀವಿಗಳು, ಕ್ರಾಂತಿಕಾರಿಗಳು -ಮುಸ್ಲಿಂ ಉಗ್ರವಾದದ ವಿಷಯಕ್ಕೆ ಬಂದ ಕೂಡಲೇ ಸುಮ್ಮನಾಗಿಬಿಡುತ್ತಾರೆ. ಕ್ರೈಸ್ತ, ಬೌದ್ಧ, ಜೈನ, ಸಿಖ್, ಇಸ್ಲಾಂ -ಎಲ್ಲ ಧರ್ಮಗಳೂ ಸರಿ. ಹಿಂದೂ ಧರ್ಮವೊಂದು ಮಾತ್ರ ಸರಿಯಿಲ್ಲ ಎಂಬಂತೆ ಮಾತನಾಡುತ್ತಾರೆ.

ಶಂಭೂಕನಂತಹ ವಿದ್ಯಾವಂತ, ಶ್ರದ್ಧಾವಂತನನ್ನು ಕೊಂದದ್ದಕ್ಕೆ ಅವತ್ತಿನ ಕ್ಷತ್ರಿಯ ರಾಮನು ಕಾರಣನಾದರೂ, ಇವತ್ತಿನ ಬೈಗುಳ ತಿನ್ನಬೇಕಾದವನು ಆರೆಸ್ಸೆಸ್ಸಿಗ ಮತ್ತು ಬ್ರಾಹ್ಮಣ. ಆದರೆ ಕೆಲವೇ ನೂರು ವರ್ಷಗಳ ಹಿಂದೆ ಸೋಮಾನಾಥ ದೇಗುಲದ ಮೇಲೆ ದಾಳಿ ಮಾಡಿದ, ಹಿಂದೂ ರಾಣಿಯರನ್ನು ಹೊತ್ತೊಯ್ದು ಮದುವೆಯಾದ ಮುಸ್ಲಿಮ? ಅವನನ್ನು ಚರ್ಚೆಗೆ ಎಳೆಯುವಂತಿಲ್ಲ! ಅವನು ಅಲ್ಪಸಂಖ್ಯಾತ. ಅವನು ಶೋಷಿತ. ಹೇಳಿಕೊಂಡರೆ ಒದ್ದುಗಿದ್ದಾರು ಅಂತ ಹೆದರಿ,

ತನಗೆ ಯಾವ ತಲೆಮಾರಿನಲ್ಲಿ ರಕ್ತ ಸಂಬಂಧಿಯಲ್ಲದಿದ್ದರೂ, ಗೋಡ್ಸೆ ಎಂಬ ಸರ್‌ನೇಮ್(ಅಡ್ಡ ಹೆಸರನ್ನು )ಬದಲಾಯಿಸಿಕೊಂಡ ಲಕ್ಷಾಂತರ ಚಿತ್ಪಾವನರಿದ್ದಾರೆ. ಅರವತ್ತು ವರ್ಷಗಳ ಹಿಂದೆ ಮಹಾತ್ಮಾ ಗಾಂಧಿಯನ್ನು ಕೊಂದ ನಾಥೂರಾಮನಿಗೂ ಅವರಿಗೂ ಸಂಬಂಧವೇ ಇಲ್ಲ. ಆದರೂ ಅವರುಗೋಡ್ಸೆ ಎಂಬ ತಮ್ಮ ಸರ್‌ನೇಮ್ ಧರಿಸಲೊಲ್ಲರು.

ಹೀಗೆ ಹೆದರಿಕೊಂಡ ಒಬ್ಬೆ ಒಬ್ಬ ಮುಸ್ಲಿಮನನ್ನು ತೋರಿಸುತ್ತೀರಾ?

ಮುಸ್ಲಿಂ ಸಂವೇದನೆ

ಮಹ್ಮದ್ ಘಜ್ನಿಯ ಮಾತು ಬಿಟ್ಟು ಬಿಡಿ, ಮೊನ್ನೆ ಮೊನ್ನೆ ಭಾರತದ ವಿಮಾನ ಎತ್ತಿಕೊಂಡು ಹೋದದ್ದಕ್ಕೆ, ಕಾಶ್ಮೀರದಲ್ಲಿ ಮಕ್ಕಳನ್ನು ಕೊಂದದ್ದಕ್ಕೆ, ಪಂಡಿತರ ಹೆಂಗಸರನ್ನು ದೋಚಿದ್ದಕ್ಕೆ, ಪಾರ್ಲಿಮೆಂಟಿಗೆ ನುಗ್ಗಿ ಕೊಂದದ್ದಕ್ಕೆ, ಹೈದರಾಬಾದಿನಲ್ಲಿ ಬಾಂಬು ಸಿಡಿಸಿದ್ದಕ್ಕೆ -ಅವಮಾನದಿಂದ, ನೋವಿನಿಂದ, ಅದೆಲ್ಲ ಜವಾಬ್ದಾರಿಯನ್ನು ನನ್ನವರ ಪರವಾಗಿ ನಾನು ಹೊರುತ್ತೇನೆ ಅಂತ ತಲೆ ತಗ್ಗಿಸಿ ನಿಂತ ಒಬ್ಬ ಲಿಬರೇಟೆಡ್ ಮುಸ್ಲಿಮನನ್ನು ನನಗೆ ತೋರಿಸುತ್ತೀರಾ?

ನಿನ್ನ ತಾತ-ಮುತ್ತಾತ-ಎಂಟು ನೂರು ಸಾವಿರ ವರ್ಷಗಳ ಹಿಂದೆ ಬದುಕಿದ್ದ ನಿನ್ನ ತಾತನ ಮುತ್ತಾತನ ಮರಿತಾತ ಮಾಡಿದ ತಪ್ಪಿಗೆ, ಇವತ್ತು ನೀನು ಕಂದಾಯ ಕಟ್ಟಲೇ ಬೇಕು. ಹಾವು ಮತ್ತು ನೀನು ಒಟ್ಟಿಗೆ ಬಂದರೆ, ನಿನ್ನನ್ನು ಮೊದಲು ಕೊಂದು ಆನಂತರ ಹಾವನ್ನು ಕೊಲ್ಲುತ್ತೇವೆ : ಅಂಥ ನೀಚ ನೀನು ಎಂಬ ಮಾತನ್ನು ಅನ್ನಿಸಿಕೊಂಡವರು,ಆಹಾ ಅವರದು ಮುಸ್ಲಿಂ ಸಂವೇದನೆಯಿರುವ ಮನಸ್ಸು ಅಂತ ಹೊಗಳಿಸಿಕೊಳ್ಳುವುದನ್ನು ನೋಡಿದಾಗ ಸುಮ್ಮನೆ ಇರುವುದು ಕಷ್ಟವಾಗುತ್ತದೆ. ಅಷ್ಟೆ!

‘ಏನೋ ಬ್ರಾಹ್ಮಣಾ.. ಪುಳಿಚಾರೂ! ಅಂದವರು ಒಂದೇ ಒಂದು ಸಲ ಮುಸ್ಲಿಮರ ಗಡ್ಡದ ಬಗ್ಗೆ, ತುಂಡರಿಸಿದ ಅಂಗದ ಬಗ್ಗೆ, ಮುಸ್ಲಿಂ ಮೌಢ್ಯದ ಬಗ್ಗೆ ಮಾತನಾಡಿದ್ದಿದ್ದರೆ ಇಷ್ಟೆಲ್ಲ ರಗಳೆಯಾಗುತ್ತಿರಲಿಲ್ಲ. ಜಾತಿ ನಾಶಬಯಸುವವರು ಎಲ್ಲ ಜಾತಿಗಳ ನಾಶವನ್ನೂ ಬಯಸಬೇಕು.

ಕರ್ನಾಟಕದ ಮಟ್ಟಿಗೆ ಅದು ಆಗಲಿಲ್ಲ.

ಲೇಖಕರು : ರವಿ ಬೆಳೆಗೆರೆ (ಲೇಖದ ಸಂಪೂರ್ಣ ಹಕ್ಕು ಆಯಾ ಲೇಖಕರಿಗೆ, ಪ್ರಕಾಶಕರಿಗೆ ಸೇರಿದೆ. ಜನರಿಗೆ ತಲುಪಿಸುವ ಉದ್ದೇಶದಿಂದ ನಕಲಿ ಮಾಡಲಾಗಿದೆ)