ಹಿರಿಯ ಪತ್ರಕರ್ತ ‘ರವಿ ಬೆಳಗೆರೆ’ ಇನ್ನು ನೆನಪು ಮಾತ್ರ!ಬೆಂಗಳೂರು: ಬರಹಗಳ ಮೂಲಕವೇ ಬೆರಗು ಮೂಡಿಸಿದ್ದ, ಆ ಮೂಲಕವೇ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ, ‘ಅಕ್ಷರ ಮಾಂತ್ರಿಕ’ ಎಂದೇ ಖ್ಯಾತಿ ಪಡೆದಿದ್ದ ಪತ್ರಕರ್ತ, ಹಾಯ್ ಬೆಂಗಳೂರ್ ಪತ್ರಿಕೆಯ ಸಂಪಾದಕ, ‘ವಿಜಯವಾಣಿ’ ಅಂಕಣಕಾರ ರವಿ ಬೆಳಗೆರೆ(62) ಇಂದು ನಿಧನರಾದರು. ತಡರಾತ್ರಿ ಹೃದಯಾಘಾತಕ್ಕೆ ಒಳಗಾದ ಅವರನ್ನು ತಕ್ಷಣ ಆಸ್ಪತ್ರೆ ದಾಖಲಿಸಲಾಯಿತಾದರೂ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು. ಪಾರ್ಥಿವ ಶರೀರವನ್ನು ಇಂದು ಅಂತಿಮ ದರ್ಶನಕ್ಕೆ ಇಡಲಾಗುವುದು. ಬಾಲ್ಯದ ರವಿ ರವಿ ಬೆಳಗೆರೆ ವಿಜಯವಾಣಿಯಲ್ಲಿ ಪ್ರತಿ ಭಾನುವಾರ ನಮ್ಮನಮ್ಮಲ್ಲಿ ಎಂಬ ಅಂಕಣ ಬರೆಯುತ್ತಿದ್ದರು. ಇವರು ಪತ್ನಿಯರಾದ ಲಲಿತಾ, ಯಶೋಮತಿ, ಮಕ್ಕಳಾದ ಚೇತನಾ, ಭಾವನಾ, ಕರ್ಣ ಹಾಗೂ ಹಿಮವಂತ ಸೇರಿ ಅಪಾರ ಬಂಧು-ಬಳಗ ಅಭಿಮಾನಿಗಳನ್ನೂ ಅಗಲಿದ್ದಾರೆ. 1995ರ ಸೆ. 25ರಂದು ‘ಹಾಯ್ ಬೆಂಗಳೂರ್’ ಪತ್ರಿಕೆಯನ್ನು ಆರಂಭಿಸಿದ ಅವರು ತನಿಖಾ ಪತ್ರಿಕೋದ್ಯಮದ ಮೂಲಕ ಭಾರಿ ಸಂಚಲನವನ್ನೇ ಮೂಡಿಸಿದ್ದರು. ಬಳ್ಳಾರಿಯಿಂದ ಬರೀ 400 ರೂ. ಹಿಡಿದುಕೊಂಡು ಬಂದು ಬೆಂಗಳೂರಿನಲ್ಲಿ ಅಕ್ಷರ-ಬರವಣಿಗೆ ಮೂಲಕವೇ ಬದುಕು ಕಟ್ಟಿಕೊಂಡಿದ್ದ ಇವರು, ಪ್ರಾರ್ಥನಾ ಎಂಬ ಶಿಕ್ಷಣ ಸಂಸ್ಥೆಯನ್ನೂ ಕಟ್ಟಿದ್ದಾರೆ.

ADVERTISEMENT

‘ಹೇಳಿ ಹೋಗು ಕಾರಣ’, ‘ನೀ ಹಿಂಗ ನೋಡಬ್ಯಾಡ ನನ್ನ’, ‘ಮಾಂಡೋವಿ’, ‘ಮಾಟಗಾತಿ’, ‘ಸರ್ಪ ಸಂಬಂಧ’ ಮುಂತಾದ ಕಾದಂಬರಿಗಳ ಮೂಲಕ ಭಾವುಕ ಓದುಗರ ಅಚ್ಚುಮೆಚ್ಚಿನ ಲೇಖಕ ಎನಿಸಿಕೊಂಡಿದ್ದರು. ‘ಬಾಟಮ್ ಐಟಮ್’, ‘ಖಾಸ್ ಬಾತ್ ಅಂಕಣಗಳ ಮೂಲಕ ತನ್ನ ಬದುಕನ್ನೇ ತೆರೆದುಕೊಳ್ಳುತ್ತ ಇತರರ ಬದುಕಿಗೆ ಸ್ಫೂರ್ತಿಯಾಗುವಂಥ ವಿಚಾರಗಳನ್ನು ಹೇಳುತ್ತಿದ್ದರು. ಅಪರಾಧ ಜಗತ್ತನ್ನು ಅನಾವರಣಗೊಳಿಸಿದ ಹಾಯ್ ಬೆಂಗಳೂರ್ ಜತೆಗೆ ಓ ಮನಸೇ ಎಂಬ ಮೃದುಭಾವಗಳಿಗೆ ಆದ್ಯತೆ ಕೊಡುವ ನಿಯತಕಾಲಿಕೆಯ ಸಂಪಾದಕರಾಗಿ ಮತ್ತೊಂದು ವರ್ಗದ ಓದುಗರನ್ನೂ ತಲುಪಿದ್ದರು. ಅಲ್ಲದೆ ಅನೇಕ ಪ್ರತ್ಯಕ್ಷದರ್ಶಿ ವರದಿಗಳನ್ನು ಕಣ್ಣಿಗೆ ಕಟ್ಟಿದಂತೆ ಬರೆದು ಓದುಗರ ಮನದಲ್ಲಿ ಅಚ್ಚೊತ್ತಿದ್ದರು. ಕಾರ್ಗಿಲ್, ಪುಲ್ವಾಮಾಗೂ ತೆರಳಿದ್ದ ಇವರು ಅಲ್ಲಿನ ಯುದ್ಧ ಸಂಬಂಧಿತ ವಿಸ್ತೃತ ವರದಿ ಬರೆದಿದ್ದಲ್ಲದೆ ಆ ಕುರಿತ ಪುಸ್ತಕಗಳನ್ನೂ ರಚಿಸಿದ್ದರು. ಬರಹ, ಬರವಣಿಗೆ ಮಾತ್ರವಲ್ಲದೆ ಸಿನಿಮಾದಲ್ಲೂ ಆಸಕ್ತಿ ಹೊಂದಿದ್ದ ಇವರು, ರವಿ ಶ್ರೀವತ್ಸ ನಿರ್ದೇಶನದ ‘ಗಂಡ ಹೆಂಡತಿ’ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡುವ ಮೂಲಕ ಮೊದಲ ಸಲ ಬೆಳ್ಳಿಪರದೆ ಮೇಲೂ ರಾರಾಜಿಸಿದ್ದರು.


ಜಾಹಿರಾತು: ನಿಮ್ಮ ಏನೇ ಸಮಸ್ಯೆ ಇದ್ದರೂ ಕೂಡಲೇ ಈ ಕೆಳಕಂಡ ಸಂಖ್ಯೆಗೆ ಕರೆ ಮಾಡಿ!

ಪಂಡಿತ್ ದಾಮೋದರ್ ಭಟ್
ದಕ್ಷಿಣ ಕರ್ನಾಟಕದ ಖ್ಯಾತ
ಜ್ಯೋತಿಷ್ಯರು ಮತ್ತು ಆಧ್ಯಾತ್ಮಿಕ ಚಿಂತಕರು
ನಿಮ್ಮ ಕುಟುಂಬದ ಯಾವುದೇ ಸಮಸ್ಯೆ ಹೇಳಿಕೊಳ್ಳಬಹುದಾದ
ಅಥವಾ ಅಲ್ಲದ, ವಿದ್ಯಾಭ್ಯಾಸ ವ್ಯವಹಾರದ ಕಷ್ಟ,
ಆರ್ಥಿಕ ಸಂಕಷ್ಟಕ್ಕೆ ಮೂಲಕಾರಣ ಮತ್ತು ಅದಕ್ಕೆ ಸೂಕ್ತ ಪರಿಹಾರ ಶತಸಿದ್ಧ!

ಈಗಲೇ ಕರೆಮಾಡಿ : 9008611444


ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್  ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ http://www.uralsayurveda.inhttps://www.facebook.com/DrUrals/ +91 81053 71042 , 8310191364.