ಮಿತ್ರಪಕ್ಷಕ್ಕೆ ಟಾಂಗ್ ನೀಡಿದ ಶಿವಸೇನೆಯ ಸಂಸದ ಸಂಜಯ್ ರಾವತ್?!ಮಹಾರಾಷ್ಟ್ರ: ಮಹಾರಾಷ್ಟ್ರ ಸರ್ಕಾರದ ಭಾಗವಾಗಿರುವ ಕಾಂಗ್ರೆಸ್ ಪಕ್ಷವನ್ನ ಮಿತ್ರಪಕ್ಷ ಶಿವಸೇನೆಯೇ ಚಿವುಟಿದೆ. ‘ಕಾಂಗ್ರೆಸ್ ಈಗ ವೀಕ್ ಆಗಿದೆ’ ಅಂತ ಶಿವಸೇನೆ ಸಂಸದ ಸಂಜಯ್ ರಾವತ್ ಹೇಳಿದ್ದಾರೆ. ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನ ಯುಪಿಎ ಅಧ್ಯಕ್ಷರನ್ನಾಗಿ ಮಾಡುವ ಬಗ್ಗೆ ಮಾತನಾಡಿದ ಸಂಜಯ್ ರಾವತ್, ‘ಶರದ್ ಪವಾರ್ ಯುಪಿಎ ಅಧ್ಯಕ್ಷರಾದ್ರೆ ನಮಗೆ ಖುಷಿ. ಆದ್ರೆ ಅವರೇ ಅದನ್ನ ನಿರಾಕರಿಸಿದ್ದಾರೆ. ಅಂತಹ ಪ್ರಸ್ತಾವನೆ ಏನಾದ್ರೂ ಬಂದ್ರೆ ನಾವು ಖಂಡಿತವಾಗಿಯೂ ಅವರನ್ನ ಬೆಂಬಲಿಸ್ತೀವಿ. ಈಗ ಕಾಂಗ್ರೆಸ್ ವೀಕ್ ಆಗಿದೆ. ಹೀಗಾಗಿ ವಿಪಕ್ಷಗಳು ಒಗ್ಗಟ್ಟಾಗಿ ಯುಪಿಎ ಬಲಗೊಳಿಸಬೇಕು’ ಅಂತ ಹೇಳಿದ್ರು. ಅಂದ್ಹಾಗೆ ಶಿವಸೇನೆ-ಎನ್ಸಿಪಿ-ಕಾಂಗ್ರೆಸ್ ಪಕ್ಷಗಳು ಸೇರಿಕೊಂಡೇ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಿರೋದು.

ಅಲ್ಲಿ ಕಾಂಗ್ರೆಸ್​ ಪಕ್ಷದ ಹಲವು ಸಚಿವರಿದ್ದಾರೆ. ಆದ್ರೂ ಸಂಜಯ್ ರಾವತ್ ಈ ರೀತಿ ಹೇಳಿಕೆ ಕೊಟ್ಟಿದ್ದಾರೆ. ಇದಕ್ಕೆ ಕಾಂಗ್ರೆಸ್ ಯಾವ ರೀತಿ ಪ್ರತಿಕ್ರಿಯಿಸುತ್ತೆ ಅನ್ನೋದನ್ನ ಕಾದು ನೋಡಬೇಕು. ಅಂದ್ಹಾಗೆ 2004ರಲ್ಲಿ ಕಾಂಗ್ರೆಸ್​ ನೇತೃತ್ವದಲ್ಲಿ ಹಲವು ಪಕ್ಷಗಳು UPA (United Progressive Alliance) ಮೈತ್ರಿಕೂಟ ರಚಿಸಿಕೊಂಡವು. ಮೈತ್ರಿಕೂಟದಲ್ಲಿ ಅತಿದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯೇ ಅದರ ಅಧ್ಯಕ್ಷರಾಗಿದ್ದಾರೆ. ಇದೀಗ ಆ ಸ್ಥಾನಕ್ಕೆ ಶರದ್ ಪವಾರ್ ಹೆಸರು ಕೇಳಿ ಬರ್ತಿದೆ

ಇದನ್ನೂ ಓದಿ :  ಈಶ್ವರಪ್ಪ ಮತ್ತೆ ಸಿಡಿಮಿಡಿ

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/