ಅತೀ ಚಿಕ್ಕ ವಯಸ್ಸಿನಲ್ಲೇ ಪೊಲೀಸ್ ಅಧಿಕಾರಿಯಾದ ಬಡ ಕುಟುಂಬದ ಹೆಣ್ಣುಮಗಳು, ವಯಸ್ಸೆಷ್ಟು ಗೊತ್ತಾಅಫಜಲ್ಪುರ : ತಾಲೂಕಿನ ಕುಗ್ರಾಮ ಭೋಸ್ಗಾದಲ್ಲಿ ಬಡ ಕುಟುಂಬದಲ್ಲಿ ಜನಿಸಿದ ಹೆಣ್ಣು ಮಗಳು ಈಗ ಪೋಲಿಸ್‌ ಇನ್ಸಪೆಕ್ಟರ್‌ ಆಗುವ ಯೋಗ ಕೂಡಿ ಬಂದಿದೆ. ಭೋಸ್ಗಾದ ಶಿವಣ್ಣ ಹಾಗೂ ಕಮಲಾಬಾಯಿ ದೇಗಿನಾಳ ದಂಪತಿ ಪುತ್ರಿ ಲಕ್ಷ್ಮಿ ದೇಗಿನಾಳ ಇದೀಗ ಪೋಲಿಸ್‌ ಅಧಿಕಾರಿಯಾಗಿ ಆಯ್ಕೆಯಾಗಿದ್ದಾಳೆ. ಇವರು ಹುಟ್ಟಿದ್ದು 1996ರಲ್ಲಿ. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡರು. ಎರಡು ವರ್ಷ ಇದ್ದಾಗ ವಿಜಯಪುದಲ್ಲಿರುವ ಸೋದರ ಮಾವ ಸಾತಲಿಂಗಪ್ಪ ಸಂಗೋಳಗಿ ಅವರು ಲಕ್ಷ್ಮಿ ಅವರನ್ನು ತಮ್ಮ ಜೊತೆ ವಿಜಯಪುರಕ್ಕೆ ಕರೆದುಕೊಂಡು ಹೋಗಿ ತಮ್ಮ ಮನೆಯಲ್ಲಿಯೇ ಇಟ್ಟುಕೊಂಡು ಬೆಳೆಸಿ ಅವರಿಗೆ ಒಂದನೇ ತರಗತಿಯಿಂದ ಡಿ ಫಾರ್ಮಸಿ ಹಾಗೂ ಬೆಂಗಳೂರಿನಲ್ಲಿ ಪಿಎಸ್‌ಐ ಕೋಚಿಂಗ್‌ ಪಡೆದುಕೊಂಡು ಪಿಎಸ್‌ಐ ಆಗಿ ಆಯ್ಕೆಯಾಗುವವರೆಗೂ ವಿದ್ಯಾಭ್ಯಾಸಕ್ಕೆ ಬೇಕಾಗುವ ಎಲ್ಲಾ ಮೂಲ ಸೌಕರ್ಯಗಳನ್ನು ಒದಗಿಸಿದ್ದಾರೆ.

24 ವರ್ಷದ ಲಕ್ಷ್ಮಿ ದೇಗಿನಾಳ ಒಂದನೇ ಹಾಗೂ ಎರಡನೇ ತರಗತಿ ವಿಜಯಪುರದ ಸತ್ಯ ಸಾಯಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ, 3 ರಿಂದ 7ನೇ ತರಗತಿವರೆಗೆ ಆದರ್ಶ ವಿದ್ಯಾ ಮಂದಿರ ವಿಜಯಪುರ, 8 ರಿಂದ 10, ಪ್ರಥಮ ಹಾಗೂ ದ್ವಿತೀಯ ಪಿಯುಸಿ ಬಿಎಲ್‌ಡಿ ಕಾಲೇಜಿನಲ್ಲಿ, ಬ್ಯಾಚುಲರ್‌ ಆಫ್‌ ಫಾರ್ಮಸಿ ವಿಜಯಪುರದ ಬಿಎಲ್‌ಡಿ ಫಾರ್ಮಸಿ ಕಾಲೇಜಿನಲ್ಲಿ ಮುಗಿಸಿದ್ದಾರೆ. ಪೋಲಿಸ್‌ ಇಲಾಖೆಗೆ ಸೇರಿದರೆ ಸಮಾಜದಲ್ಲಿ ನಾಲ್ಕು ಜನರಿಗೆ ಸಹಾಯ ಮಾಡಬಹುದು ಎಂಬ ಉದ್ದೇಶದಿಂದ ಪಿಎಸ್‌ಐ ಪರೀಕ್ಷೆಗೆ ಸಿದ್ಧತೆ ನಡೆಸಿದರು. ಬೆಂಗಳೂರಿನಲ್ಲಿ ಕೋಚಿಂಗ್‌ ಪಡೆದುಕೊಂಡು ಮೊದಲ ಬಾರಿಗೆ ಪರೀಕ್ಷೆ ಬರೆದಾಗ ಯಶಸ್ಸು ಸಿಗಲಿಲ್ಲ. ಆದರೆ, ಸಾಧನೆಗೆ ಅಸಾಧ್ಯವಾದದ್ದು ಯಾವುದು ಇಲ್ಲ. ಸಾಧಿಸುವ ಛಲ ಬೇಕು ಎನ್ನುವಂತೆ ಸತತ ಪ್ರಯತ್ನ ಹಾಗೂ ಛಲ ಬಿಡದೆ ಎರಡನೇ ಬಾರಿ ಬರೆದು ಪರೀಕ್ಷೆಯಲ್ಲಿ ಪಾಸಾಗಿ 28ನೇ ರಾರ‍ಯಂಕ್‌ನಲ್ಲಿ ಪಿಎಸ್‌ಐ ಹುದ್ದೆಗೆ ಆಯ್ಕೆಯಾಗಿದ್ದಾರೆ.

ಜಾಹಿರಾತು ; ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ಇವರು ವಶೀಕರಣ ಮಹಾ ಮಾಂತ್ರಿಕರು ಹಾಗೂ ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವ ಶೀಕರಣ ಹಾಗೂ ಪುರುಷ ವಶೀ ಕರಣ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಕೆಳಗೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ 9740202800 ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು. 9740202800