ನಟಿ ತಾಪ್ಸಿ ಪನ್ನುಗೆ ಎದಾರಿಯಿತು ಸಂಕಷ್ಟ! ಕೇಂದ್ರ ಸರ್ಕಾರದ ಮಾಸ್ಟರ್ ಪ್ಲಾನ್?!ಮುಂಬೈ: ಬಾಲಿವುಡ್ ನಿರ್ಮಾಪಕರಾದ ಅನುರಾಗ್ ಕಶ್ಯಪ್, ವಿಕಾಸ್ ಬಹ್ಲ್ ಹಾಗೂ ಜನಪ್ರಿಯ ನಟಿ ತಾಪ್ಸಿ ಪನ್ನು ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ.

ಅನುರಾಗ್ ಕಶ್ಯಪ್ ಅವರ ನಿರ್ಮಾಣ ಸಂಸ್ಥೆ ಫ್ಯಾಂಟಮ್ ಫಿಲಂಸ್‍ಗೆ ಸಂಬಂಧಿಸಿದ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಲಾಗಿದೆ. ಈ ಮೂವರು ಸೆಲೆಬ್ರಿಟಿಗಳ ಮನೆಗಳು ಮಾತ್ರವಲ್ಲದೆ ಮುಂಬೈ ಹಾಗೂ ಪುಣೆಯಲ್ಲಿ 20 ಕಡೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತೆರಿಗೆ ವಂಚನೆಗೆ ಸಂಬಂಧಿಸಿದಂತೆ ದಾಳಿ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಟ್ಯಾಲೆಂಟ್ ಮ್ಯಾನೇಜ್‍ಮೆಂಟ್ ಕಂಪನಿ ನಡೆಸುತ್ತಿರುವ ಸಿನಿಮಾ ನಿರ್ಮಾಪಕ ಮಧು ಮಂತೇನಾ ವರ್ಮಾ ಸಹ ಐಟಿ ಕಣ್ಗಾವಲಿನಲ್ಲಿದ್ದಾರೆ.

ಅನುರಾಗ್ ಕಶ್ಯಪ್ ನಿರ್ಮಾಣದಲ್ಲಿ ಮುಂಬರುವ ಥ್ರಿಲ್ಲರ್ ‘ದೋಬಾರಾ’ಗಾಗಿ ನಟ ಪಾವೈಲ್ ಗುಲಾಟಿ ಅವರೊಂದಿಗೆ ಮತ್ತೆ ಒಂದಾಗುತ್ತಿರುವುದಾಗಿ ತಾಪ್ಸೀ ಪನ್ನು ಇತ್ತೀಚೆಗೆ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಅಲ್ಲದೆ ಫೆಬ್ರವರಿ 28ರಂದು ಥಪ್ಪಡ್ ಸಿನಿಮಾದ ಮೊದಲ ವರ್ಷದ ಆ್ಯನಿವರ್ಸರಿ ಆಚರಿಸುತ್ತಿರುವುದಾಗಿ ಸಹ ಪೋಸ್ಟ್ ಮಾಡಿದ್ದರು.

ದೋಬಾರಾ ಸಿನಿಮಾ ಒಪ್ಪಿಕೊಳ್ಳುವ ಮೂಲಕ ತಾಪ್ಸಿ ಪನ್ನು ಅವರು ಅನುರಾಗ್ ಕಶ್ಯಪ್ ಜೊತೆ ಮೂರನೇ ಬಾರಿ ಒಂದಾಗುತ್ತಿದ್ದಾರೆ. 2018ರಲ್ಲಿ ಹಿಟ್ ಆಗಿದ್ದ ಮನ್‍ಮರ್ಝಿಯಾನ್ ಹಾಗೂ ಸಂದ್ ಕಿ ಆಂಖ್ ಸಿನಿಮಾಗಳಲ್ಲಿ ಈ ಜೋಡಿ ಒಂದಾಗಿತ್ತು. ತಾಪ್ಸಿ ಪನ್ನು ಅವರು ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ಹೆಚ್ಚು ಗುರುತಿಸಿಕೊಂಡಿದ್ದಾರೆ.