ಮೋದಿಯವರೇ ಲಸಿಕೆ ಚುಚ್ಚಿಸಿಕೊಂಡಿರಾ ಎಂದ ಕಾಂಗ್ರೆಸಿಗರಿಗೆ ಟಾಂಗ್ ಕೊಟ್ಟ ತೇಜಸ್ವಿ ಸೂರ್ಯ!ನವದೆಹಲಿ: ದೇಶಾದ್ಯಂತ ಇಂದಿನಿಂದ ಜನ ಸಾಮಾನ್ಯರಿಕೆ ಲಸಿಕೆ ಪ್ರಯೋಗ ಪ್ರಾರಂಭವಾಗುತ್ತಿದ್ದಂತೆ ದೇಶದ ಪ್ರಧಾನಿ ನರೇಂದ್ರ ಮೋದಿ ಲಸಿಕೆ ಪಡೆದುಕೊಂಡಿದ್ದಾರೆ. ಇದೀಗ ಲಸಿಕೆ ಪಡೆದುಕೊಂಡಿರುವ ಮೋದಿ ಕುರಿತು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮೂರು ವಿಷಯಗಳನ್ನು ಹಂಚಿ ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ.

ಪ್ರಧಾನಿಯಾಗಿರುವ ಮೋದಿ ಲಸಿಕೆಗಾಗಿ ಮೊದಲ ಸರದಿಯಲ್ಲಿ ನಿಲ್ಲಲಿಲ್ಲ ಎಲ್ಲರಂತೆ ಹಿರಿಯ ನಾಗರಿಕರ ಸರದಿ ಬಂದಾಗ ಹೋಗಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಇದರೊಂದಿಕೆ ಲಸಿಕೆ ಹಾಕಿಸಿಕೊಳ್ಳುವಂತೆ ಹಾಗೂ ಲಸಿಕೆಯ ಕುರಿತು ಎಲ್ಲರಿಗೂ ಮನವರಿಕೆ ಮಾಡಿಸಿದ್ದಾರೆ. ಹಾಗೆ ಮೋದಿಯವರು ಲಸಿಕೆಯನ್ನು ತಮ್ಮ ನಿವಾಸಕ್ಕೆ ತರಿಸದೇ ಎಲ್ಲಾ ನಾಗರಿಕರಂತೆ ಸರ್ಕಾರಿ ಆಸ್ಪತ್ರೆಗೆ ತೆರಳಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಇದು ದೇಶದ ನಾಯಕನಿಗಿರುವ ಉತ್ತಮವಾದ ಗುಣ ಎಂದು ಪ್ರಶಂಸಿದ್ದಾರೆ.

ಮೋದಿಯವರು ಹೈದರಾಬಾದ್ ನ ಭಾರತ್ ಬಯೋಟೆಕ್ ಕಂಪನಿ ಕೊವಾಕ್ಸಿನ್ ಲಸಿಕೆಯನ್ನು ಪಡೆದ ಬಳಿಕ ಟ್ವೀಟ್ ಮಾಡಿ ನಾನು ಏಮ್ಸ್ ನಲ್ಲಿ ಮೊದಲ ಡೋಸ್ ಕೋವಿಡ್-19 ಲಸಿಕೆ ತೆಗೆದುಕೊಂಡಿದ್ದೇನೆ. ಕೋವಿಡ್-19 ವಿರುದ್ಧ ಹೋರಾಟವನ್ನು ಬಲಪಡಿಸಲು ನಮ್ಮ ವೈದ್ಯರು ಮತ್ತು ವಿಜ್ಞಾನಿಗಳು ಹೆಚ್ಚಿನ ಶ್ರಮ ವಹಿಸಿರುವುದು ಗಮನಾರ್ಹವಾಗಿದೆ. ಲಸಿಕೆ ಪಡೆದುಕೊಳ್ಳುವಂತೆ ನಾನು ಎಲ್ಲರಿಗೂ ಮನವಿ ಮಾಡುತ್ತೇನೆ ಎಂದು ಟ್ಟಿಟ್ಟರ್ ನಲ್ಲಿ ಬರೆದುಕೊಂಡಿದ್ದರು.