ಒಂದು ಕಾಲದಲ್ಲಿ WWE ಅಲ್ಲಿ ಮಿಂಚಿದ್ದ “ದ ಗ್ರೇಟ್ ಖಲಿ” ಇದೀಗ ಏನು ಮಾಡುತ್ತಿದ್ದಾರೆ ಗೊತ್ತಾ?!.WWEಯ ಖ್ಯಾತ ಸ್ಟಾರ್, ಕುಸ್ತಿಪಟು ದಿ ಗ್ರೇಟ್ ಖಲಿ ಅವರು ಇಂದು ಅಪಾರ ಹೆಸರುವಾಸಿಯಾಗಿದ್ದಾರೆ. ಜಗತ್ತೇ ಇವರನ್ನು ಗುರುತಿಸುವಷ್ಟು ಚಿರಪರಿಚಿತರಾಗಿದ್ದಾರೆ. ಆದರೆ, ಇವರ ಆರಂಭದ ದಿನಗಳು ಈಗಿರುವಷ್ಟು ಖುಷಿ, ಸಂತಸ ಇರಲಿಲ್ಲ. ಗ್ರೇಟ್ ಖಲಿ ಅವರು ಜೀವನದದಲ್ಲಿ ಅನೇಕ ಬಾರಿ ಏಳು-ಬೀಳುಗಳು ಕಂಡಿದ್ದಾರೆ. 1927 ರ ಅಗಸ್ಟ್ 27 ರಂದು ಹಿಮಾಚಲ ಪ್ರದೇಶದ ಧಿರೈನಾ ಎಂಬ ಊರಿನಲ್ಲಿ ಜ್ವಾಲಾ ರಾಂ ಮತ್ತು ತಾಂಡಿ ದೇವಿ ದಂಪತಿ ಮುದ್ದಾದ ಗಂಡು ಮಗುವಿನ ಜನ್ಮ ನೀಡುತ್ತಾರೆ. ಆತನ ಹೆಸರೇ ದಿಲೀಪ್ ಸಿಂಗ್ ರಾಣಾ. ಏಳು ಮಕ್ಕಳಲ್ಲಿ ದಿಲೀಪ್ ಕೂಡ ಒಬ್ಬರು. ತುಂಬು ಸಂಸಾರದ ಜೊತೆ ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದರು. ಮನೆಯವರ ಕಷ್ಟದ ಜೀವನವನ್ನು ಅರಿತ ದಿಲೀಪ್ ಶಾಲಾ ಕಡೆ ಮುಖ ಮಾಡುವುದನ್ನು ಮರೆತು ದುಡಿಮೆ ಮಾಡಲು ಪ್ರಾರಂಭಿಸುತ್ತಾರೆ. ಸಣ್ಣ ಪ್ರಾಯದಲ್ಲೇ ಕೆಲಸ ಮಾಡಿ ಸಂಸಾರವನ್ನು ನಡೆಸುವ ಜವಾಬ್ದಾರಿಯು ರಾಣಾ ಸಿಂಗ್ ಮೇಲಿತ್ತು. ಹಾಗಾಗಿ ರಸ್ತೆ ಬದಿಯ ಕೂಲಿ ಕೆಲಸಗಳನ್ನು ಮಾಡತೊಡಗಿದರು. ಇದರಿಂದ ಬಂದ ಹಣದಿಂದ ತಂದೆ ತಾಯಿ ಅಕ್ಕ – ತಂಗಿಯನ್ನು ನೋಡಿಕೊಳ್ಳುತ್ತಿದ್ದರು.

ಹೀಗೆ ಕೂಲಿ ಕೆಲಸ ಮಾಡುತ್ತಿದ್ದ ದಿಲೀಪ್ ರಾಣಾ ಅವರಿಗೆ ಪರಿಚಯಸ್ಥರ ನೆರವಿನಿಂದ ಶಿಮ್ಲಾದಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಸಿಕ್ಕಿತು . ನೋಡಲು ಕಟ್ಟುಮಸ್ತಾದ ದೇಹ ಹೊಂದಿದ್ದ ದಿಲೀಪ್ ರಾಣಾ 7.1 ಅಡಿ ಎತ್ತರವಿದ್ದರು . ಹಾಗಾಗೀ ಶಿಮ್ಲಾದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಸಿಕ್ಕಿತ್ತು. ಒಂದು ದಿನ ಪಂಜಾಬ್ ಪೊಲೀಸ್ ಮುಖ್ಯಸ್ಥರಾದ ಮಹಲ್ ಸಿಂಗ್ ಮುಲ್ಲರ್ ಕಣ್ಣಿಗೆ ದಿಲೀಪ್ ಕಾಣಿಸಿಕೊಳ್ಳುತ್ತಾರೆ. ಅವರ ಸಹಾಯದಿಂದ 1992 ರಲ್ಲಿ ಸಹೋದರರೊಂದಿಗೆ ಪೊಲೀಸ್ ಕೆಲಸಕ್ಕಾಗಿ ಜಲಂಧರ್ಗೆ ಬಂದ ದಿಲೀಪ್ ಜಿಮ್ನಲ್ಲಿ ಕುಸ್ತಿ ಅಭ್ಯಾಸ ಮಾಡುತ್ತಾರೆ. ಜೊತೆಗೆ ಸುಮಾರು 6 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿದ ದಿಲೀಪ್ ರಾಣಾ 1999 ರಲ್ಲಿ ವೃತ್ತಿಪರ ಕುಸ್ತಿ ಅಖಾಡದಲ್ಲಿ ಪಾಲ್ಗೊಳ್ಳಲು ಅಮೆರಿಕಾಗೆ ತೆರಳುತ್ತಾರೆ. ಅಮೆರಿಕದಲ್ಲಿ ಅಲ್ ಪ್ರೊ ರೆಸ್ಲಿಂಗ್ ಕ್ಯಾಂಪ್ನಲ್ಲಿ ತರಬೇತಿ ಪಡೆಯುತ್ತಾರೆ. ಅಲ್ಲಿಂದ ದಿಲೀಪ್ ರಾಣಾ , ಜೈಂಟ್ ಸಿಂಗ್ ಆಗಿ ಬದಲಾಗುತ್ತಾರೆ . 2000 ನೇ ಇಸವಿಯ ಅಕ್ಟೋಬರ್ 7 ರಂದು ಎಪಿ ಡಬ್ಲ್ಯೂಗೆ ವೃತ್ತಿಪರ ರೆಸ್ಲಿಂಗ್ ಪಟುವಾಗಿ ಜೈಂಟ್ ಸಿಂಗ್ ಕಣಕ್ಕಿಳಿಯುತ್ತಾರೆ .

2001 ರಲ್ಲಿ ವಿಶ್ವ ಚಾಂಪಿಯನ್ ಶಿಪ್ ರೆಸ್ಲಿಂಗ್ (WCW) ಸೇರಿದ ಜೈಂಟ್ ನಂತರ ಜಪಾನಿನ ನ್ಯೂ ಜಪಾನ್ ಪ್ರೊ ರೆಸ್ಲಿಂಗ್ನಲ್ಲಿ ಕುಸ್ತಿ ಆಡುತ್ತಾರೆ. ನಂತರ 2006 ರ ಜನವರಿಯಲ್ಲಿ WWE ಜೊತೆ ಒಪ್ಪಂದ ಮಾಡಿಕೊಳ್ಳುತ್ತಾರೆ. ‘ ಡೀಪ್ ಸೌತ್ ರೆಸ್ಲಿಂಗ್ ಸಂಸ್ಥೆ ‘ ಜೈಂಟ್ ಸಿಂಗ್ರನ್ನು ರೆಸ್ಲಿಂಗ್ಗೆ ಕಳುಹಿಸುತ್ತಾರೆ. ಜೈಂಟ್ ಸಿಂಗ್ ಬದಲಾಗಿದ್ದ ದಿಲೀಪ್ ರಾಣಾಗೆ WWE ನಲ್ಲಿ ಹೊಸ ಹೆಸರಿಡಲು ಸಂಸ್ಥೆ ನಿರ್ಧರಿಸುತ್ತದೆ. ಹಾಗಾಗಿ ‘ ದಿ ಗ್ರೇಟ್ ಖಲಿ ‘ ಎಂದು ಹೊಸ ಹೆಸರನ್ನು ಇಡಲಾಗುತ್ತದೆ. 2006 ರ ಎಪ್ರಿಲ್ ನಲ್ಲಿ ಸ್ಮ್ಯಾಕ್ ಡೌನ್ ತೆರಳಿದ ಖಲಿ , ಅಂಡರ್ ಟೇಕರ್ ರನ್ನು ಕೇವಲ ಐದು ನಿಮಿಷದಲ್ಲಿ ಸೋಲಿಸಿಬಿಡುತ್ತಾರೆ. ನಂತರದ ದಿನಗಳಲ್ಲಿ ಜಾನ್ ಸೀನಾ , ಶಾನ್ ಮೈಕೆಲ್ , ಎಡ್ಜ್ , ಕೇನ್ ಮುಂತಾದವರ ಜೊತೆ ಸೋಲಿಸಿ WWE ವೇದಿಕೆಯಲ್ಲಿ ದೊಡ್ಡದಾಗಿ ಹೆಸರುಗಳಿಸುತ್ತಾರೆ. ಆದರೆ , ಬರಬರುತ್ತಾ ಖಲಿಯ ಆಟವು ಅಷ್ಟೇನು ಮನರಂಜನೆಯಾಗಿರಲಿಲ್ಲ. ಇದರಿಂದಾಗಿ ದೊಡ್ಡ ದೊಡ್ಡ ಪಂದ್ಯಗಳಲ್ಲಿ ಅವಕಾಶವೂ ಸಿಗಲಿಲ್ಲ . ಹೀಗಾಗಿ ಖಲಿ 2014 ರಲ್ಲಿ WWE ಒಪ್ಪಂದ ಕೊನೆಗೊಳಿಸಿದರು. ಭಾರತಕ್ಕೆ ಮರಳಿದ ಖಲಿ 2015 ರಲ್ಲಿ ಜಲಂಧರ್ ನಲ್ಲಿ ತನ್ನದೇ ಒಂದು ತರಬೇತಿ ಸಂಸ್ಥೆ ಆರಂಭಿಸಿ ‘ ಕಾಂಟಿನೆಂಟಲ್ ರೆಸ್ಲಿಂಗ್ ಎಂಟರ್ಟೈನ್ ಮೆಂಟ್ ‘ ಎಂದು ಹೆಸರಿಟ್ಟರು. 2017 ರಲ್ಲಿ ಮತ್ತೆ WWE ಗೆ ಕಾಲಿಟ್ಟ ಗ್ರೇಟ್ ಖಲಿ ರಾಂಡಿ ಆರ್ಟನ್ ವಿರುದ್ದ ಪ್ರಸಿದ್ದ ಪಂಜಾಬ್ ಪ್ರಿಸನ್ ಪಂದ್ಯವಾಡಿದ್ದರು. ಸದ್ಯ ಪಂಜಾಬಿ ಚಿತ್ರ ನಟಿ ಹರ್ಮಿಂದರ್ ಕೌರ್ ಅವರನ್ನು ವಿವಾಹವಾಗಿರುವ ಖಲಿಗೆ ಅವ್ಲೀನ್ ಎಂಬ ಮಗಳಿದ್ದಾಳೆ. ಸದ್ಯ ಇವರು ಅಮೆರಿಕದ ನಾಗರಿಕನಾಗಿಕರಾಗಿದ್ದಾರೆ.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/