ಮುಳುಗಿದ ಟೈಟಾನಿಕ್ ಹಡಗಿನಿಂದ ನೈತಿಕ ಪಾಠವೇ?ಅಂದಾಜು ನೂರು ವರ್ಷಕ್ಕೂ ಹಿಂದೆ ಇಂಜಿನಿಯರ್ ಗಳು ಮತ್ತು ವ್ಯಾಪಾರಿಗಳು ಸೇರಿ ಒಂದು ದೊಡ್ಡ ಹಡಗು ನಿರ್ಮಿಸುವುದಕ್ಕೆ ಯೋಚಿಸಿದರು. ಅಲ್ಲಿಯವರೆಗೂ ಇದ್ದಂತಹ ಹಡಗುಗಳನ್ನು ತಾಂತ್ರಿಕವಾಗಿ ಮೀರಿಸುವಂತಹ ದೊಡ್ಡ ಹಡಗನ್ನು ನಿರ್ಮಿಸಿ, ಅದಕ್ಕೆ ಟೈಟಾನಿಕ್ ಎಂದು ಹೆಸರಿಟ್ಟರು. ದೇವರಿಂದಲೂ ಹಡಗನ್ನು ಮುಳುಗಿಸುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದರು. ಈ ಹಡಗು ಪ್ರಯಾಣಕ್ಕೆ ಸಿದ್ಧವಾಯಿತು. ಆಗಿನ ಕಾಲದ ಗಣ್ಯಾತಿಗಣ್ಯರೆಲ್ಲ ಈ ಹಡಗಿನಲ್ಲಿ ಪ್ರಯಾಣ ಮಾಡಿದರು.

ಆದರೆ ನಾಲ್ಕೇ ದಿನಗಳಲ್ಲಿ ಅದು ಮುಳುಗಿಹೋಯಿತು. ಮುಳುಗುವುದಕ್ಕೆ ಸಾಧ್ಯವೇ ಇಲ್ಲ ಎನ್ನುವಂತಿದ್ದ ಒಂದು ದೈತ್ಯ ಹಡಗು ನಾಲ್ಕು ತಾಸುಗಳಲ್ಲಿ ಮುಳುಗಿ ಹೋಯಿತು ಯ. ಒಂದೂವರೆ ಸಾವಿರ ಜನ ಸತ್ತು ಹೋದರು . ಇದರಿಂದ ತಿಳಿಯುವುದೇನೆಂದರೆ, ನೀವೆಷ್ಟೇ ಬಲಿಷ್ಠ ಮತ್ತು ದೊಡ್ಡವರಾಗಿರಬಹುದು. ಆದರೆ, ಒಂದಲ್ಲ ಒಂದು ದಿನ ಬೀಳಲೇಬೇಕು. ಹಣಬಲದಲ್ಲಿ ಮತ್ತು ತೋಳ್ಳಲದಲ್ಲಿ ನಾವೆಷ್ಟೇ ಬಲಿಷ್ಠರಾಗಿರಬಹುದು.

ಇದನ್ನೂ ಓದಿ :  ಬಿಜೆಪಿ ಹೈಕಮಾಂಡ್ ನಾಯಕ ಶೀಘ್ರ ರಾಜ್ಯಕ್ಕೆ

ಆದರೆ, ಪ್ರಕೃತಿಯ ಮುಂದೆ ನಾವು ಕುಬ್ಬರೇ. ಮಿಂಚುಹುಳುಗಳು ಎಷ್ಟೇ ಮಿಂಚಿದರೂ ಅದು ರಾತ್ರಿಯಲ್ಲಿ ಮಾತ್ರ. ಒಮ್ಮೆ ಬೆಳಗಾದರೆ, ಮಿಂಚುಹುಳು ಬೆಳಕಾಗದು. ಅದಕ್ಕೇ ಹೇಳಿದ್ದು, ಎಷ್ಟು ದಿನ ಇರುತ್ತೀವೋ ಅಷ್ಟು ದಿನ ವಿನಮ್ರರಾಗಿರಬೇಕು. ನಾನು, ನನ್ನದು ಎಂಬುದನ್ನು ಬಿಟ್ಟು, ಎಲ್ಲರೊಂದಿಗೆ ಪ್ರೀತಿ ಮತ್ತು ಸ್ನೇಹದಿಂದ ಬಾಳ್ವೆ ಮಾಡಬೇಕು.