ಟೊಮ್ಯಾಟೊ ಹಣ್ಣಿಗೆ ಕನ್ನಡದಲ್ಲಿ ಏನಂತ ಹೇಳ್ತಾರೆ ಗೊತ್ತಾ? ಇಲ್ಲಿದೆ ಯಾರಿಗೂ ಗೊತ್ತಿಲ್ಲದ ಮಾಹಿತಿ.ಟೊಮ್ಯಾಟೋ ಹಣ್ಣಿನ ಹೆಸರಂತೂ ಎಲ್ಲರೂ ಕೇಳಿಯೇ ಇರುತ್ತೀವಿ, ಇದನ್ನು ಸಾಮಾನ್ಯವಾಗಿ ಎಲ್ಲಾ ಮನೆಗಳಲ್ಲಿ ಅಡುಗೆಗೆ ಬಳಸುತ್ತಾರೆ. ಆದರೆ ನಮ್ಮಲ್ಲಿ ಎಷ್ಟು ಜನರಿಗೆ ಟೊಮ್ಯಾಟೋ ವನ್ನು ಕನ್ನಡದಲ್ಲಿ  ಏನೆಂದು ಕರೆಯುತ್ತಾರೆ ಎಂಬ ವಿಷಯ ಗೊತ್ತೇ ಇರುವುದಿಲ್ಲ. 100 ರಲ್ಲಿ 90 ಅಷ್ಟು ಜನ ಇದೊಂದು ಕನ್ನಡ ಪದವಿರಬೇಕೆಂದೇ ನಂಬಿದ್ದಾರೆ. ಆದರೆ ಇದು ಕನ್ನಡ ಪದವಲ್ಲ. ಹಾಗಾದರೆ ಕನ್ನಡದಲ್ಲಿ ಟೊಮ್ಯಾಟೋ ಹಣ್ಣನ್ನು ಏನೆಂದು ಕರೆಯುತ್ತಾರೆ ಗೊತ್ತಾ?

ಗೂದೇಹಣ್ಣು ಎಂಬುದು ಟೊಮ್ಯಾಟೋ ಹಣ್ಣಿನ ಕನ್ನಡದ ಹೆಸರು. ಈ ಗೂದೇಹಣ್ಣನ ಗಿಡಗಳನ್ನು  ಹಿಂದಿನ ಕಾಲದಲ್ಲಿ ಹಿತ್ತಲಿನ ತಿಪ್ಪೆಗಳಲ್ಲಿ ಕಾಣಬಹುದಾಗಿತ್ತು. ಈ ಗೂದೇಹಣ್ಣನ್ನು ಯಾರು ನೆಟ್ಟು ಬೆಳೆಸುತ್ತಿರಲಿಲ್ಲ, ಅದು ಸ್ವಾಬಾವಿಕವಾಗಿ ತಿಪ್ಪೆಗಳಲ್ಲಿ ಬೆಳೆದಿರುತ್ತಿತ್ತು. ಇದು ಹಿತ್ತಲಿನ ತಿಪ್ಪೆಗಳಲ್ಲಿ ಬೆಳೆಯುವ ಕಾರಣದಿಂದ ಜನರು ಗೂದೇಹಣ್ಣöನ್ನು ಅಡಿಗೆಗೆ ಬಳಸುತ್ತಿರಲಿಲ್ಲ, ಇದೊಂದು ನಿರುಪಯುಕ್ತ ವಸ್ತು ಎಂದೇ ಭಾವಿಸಿದ್ದರು. ಇದೊಂದು ಕಾಡುಗಿಡಗಳ ಹಾಗೆ ಬೆಳೆದು ನಿಂತಿರುತ್ತಿತ್ತು.

ಒಮ್ಮೆ ನಾಟಿ ವೈದ್ಯರೊಬ್ಬರು ಬೇರೆ ಗಿಡಗಳ ಹಾಗೆ ಗೂದೇಹಣ್ಣನ್ನು ಪರೀಕ್ಷೆ ಮಾಡಿದಾಗ, ಇದೊಂದು ತಿನ್ನಲು ಯೋಗ್ಯವಾದುದು ಎಂದು ಹೇಳುತ್ತಾರೆ. ಆದಾದ ನಂತರ ಗೂದೇಹಣ್ಣನ್ನು ಉಪಯೋಗಿಸುವವರ ಸಂಖ್ಯೆ ಹೆಚ್ಚಾಯಿತು. ಗೂದೇಹಣ್ಣು ಕೂಡ ರೈತರು ಬೆಳೆಯುವ ಬೆಳೆಗಳ ಸಾಲಿಗೆ ಸೇರಿಕೊಂಡಿತು. ಟೊಮ್ಯಾಟೋ ಇಲ್ಲದೆ ಅಡುಗೆ ಮಾಡಲು ಸಾಧ್ಯವೇ ಇಲ್ಲ ಎನ್ನುವಷ್ಟು ಅವಲಂಬಿತರಾಗಿರುವ ಕಾರಣದಿಂದ ಕೆಲವೊಮ್ಮೆ ಟೊಮ್ಯಾಟೋ ಹಣ್ಣಿನ ಬೆಲೆ 100ರೂ ಗೆ ಏರಿದ ಉದಾಹರಣೆಗಳೂ ನಮ್ಮಲ್ಲಿವೆ.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/