ಪ್ರತೀ ಟಿವಿ ಚಾನೆಲ್ ಗಳು TRP ಬೆನ್ನ ಹಿಂದೆ ಯಾಕೆ ಬೀಳ್ತಾರೆ ಗೊತ್ತಾ?! ; BARC ಗೂ TRP ಗೂ ಇರುವ ವ್ಯತ್ಯಾಸ ಇಲ್ಲಿದೆ.

ಹೆಚ್ಚು TRP ಬಂದರೆ ಆ TV ಗೆ ಬರುವ ಜಾಹೀರಾತಿನ ಹಣ ಕೊಡ ಹೆಚ್ಚಾಗಿ ಬರುತ್ತದೆ. TRP ಜಾಸ್ತಿ ಇದ್ದರೆ ಅದರಿಂದ ಬರುವ ರೆವೆನ್ಯೂ ಕೂಡ ಜಾಸ್ತಿ ಇರುತ್ತದೆ. ಇದರಿಂದಾಗಿ ಪ್ರತಿ ಟಿವಿ ಚಾನಲ್ ಕೂಡ ವಿಭಿನ್ನ ಕಾರ್ಯಕ್ರಮಗಳನ್ನು ಮಾಡುತ್ತದೆ. TRP ಎಂದರೆ ಟೆಲಿವಿಷನ್ ರೇಟಿಂಗ್ ಪಾಯಿಂಟ್. TRP ಅನ್ನುವುದು ಯಾವ ಟಿವಿ ಚಾನೆಲ್ ಗೆ, ಯಾವ ಕಾರ್ಯಕ್ರಮಕ್ಕೆ ಹೆಚ್ಚು ಪಾಪ್ಯುಲಾರಿಟಿ ಇದೆ ಎನ್ನುವುದನ್ನು ಸೂಚಿಸುತ್ತದೆ. ಕೆಲವು ಟಿವಿ ಚಾನೆಲ್ ಗಳು ಐದು ಸೆಕೆಂಡ್ Advertisement ನೀಡಲು 200ರಿಂದ 5 ಲಕ್ಷದವರೆಗೆ ಚಾರ್ಜ್ ಮಾಡುತ್ತಾರೆ. ಇದು ಅವರ TRP ಪಾಪ್ಯುಲಾರಿಟಿ ಆಧಾರದ ಮೇಲೆ ಇರುತ್ತದೆ.

TRP ಅನ್ನು ನಮ್ಮ ದೇಶದಲ್ಲಿ BARC ಅಂದರೆ broadcast audience research ಅನ್ನೊ ಸಂಸ್ಥೆ calculate ಮಾಡುತ್ತದೆ. BARC ಅನ್ನೋ ಸಂಸ್ಥೆ ಎರಡು ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ.

  1. ಮನೆಗಳಲ್ಲಿರುವ ಟಿವಿಗಳಲ್ಲಿ ಜನರು ಏನನ್ನು ವೀಕ್ಷಿಸುತ್ತಾರೆ ಎಂದು ತಿಳಿದುಕೊಳ್ಳಲು ದೊಡ್ಡಮಟ್ಟದಲ್ಲಿ ಸರ್ವೆ ಮಾಡುತ್ತಾರೆ. ಅದಕ್ಕಾಗಿ ಟಿವಿಗೆ ಒಂದು ಮೀಟರನ್ನು ಅಳವಡಿಸುತ್ತಾರೆ.ಈ ಮೀಟರ್ ಜನರು ಯಾವ ಚಾನೆಲ್ ನೋಡುತ್ತಾರೆ ಎಂಬ ಡೇಟಾವನ್ನು ಸಂಗ್ರಹಿಸುತ್ತದೆ.
  2. ರೆಸ್ಟೋರೆಂಟ್ ಮತ್ತು ಹೋಟೆಲ್ಗಳಲ್ಲಿ ಜನರು ಯಾವ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದಾರೆ ಎಂದು ತಿಳಿದುಕೊಳ್ಳಲು ಡೇಟಾ collect ಮಾಡುತ್ತದೆ. ಈಗ ನಮ್ಮ ದೇಶದಲ್ಲಿ 44000 ಮನೆಗಳಿಂದ ಡೇಟಾವನ್ನು ಕಲೆಕ್ಟ್ ಮಾಡುತ್ತಿದ್ದಾರೆ. 2020 ರ ಹೊತ್ತಿಗೆ ಈ ಸಂಖ್ಯೆಯನ್ನು 55000 ಕ್ಕೆ ಏರಿಸಲು BARC ಪ್ರಯತ್ನಪಡುತ್ತಿದೆ. ಈ ರೀತಿ ಶೇಖರಿಸಿದ ಡೇಟಾವನ್ನು BARC ಪ್ರತಿ ವಾರ ಬಿಡುಗಡೆ ಮಾಡುತ್ತದೆ. ಈ ರೀತಿ TRP ಆಧಾರದ ಮೇಲೆ ಯಾವ ಚಾನೆಲ್ ಗೆ advertisement ನೀಡಬೇಕೆಂದು ಕಂಪನಿಗಳು ನಿರ್ಧರಿಸುತ್ತವೆ. ಅದೇ ರೀತಿ TRP ಆಧಾರದ ಮೇಲೆ ಪ್ರೈಸ್ ಕೂಡ ಇರುತ್ತೆ. ಸರ್ವೇ ಪ್ರಕಾರ ಭಾರತದಲ್ಲಿ 19.5 ಕೋಟಿ ಟಿವಿ ಗಳು ಇವೆ. ಜಾಹೀರಾತುಗಳ ಮುಖಾಂತರ ಭಾರತದ ಟಿವಿ ಮಾಧ್ಯಮಗಳಿಗೆ ಸುಮಾರು 24 ಸಾವಿರ ಕೋಟಿ ಆದಾಯ ಬರುತ್ತದೆ.

ಐಪಿಎಲ್ ಪ್ರತಿವರ್ಷ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ನಡೆಯುತ್ತದೆ. ನಮ್ಮೆಲ್ಲರಿಗೂ ಐಪಿಎಲ್ ಎನ್ನುವುದು ಕ್ರಿಕೆಟ್ ಮ್ಯಾಚ್ ಆದರೆ ಬೇರೆಯವರಿಗೆ ಅದು ಬಿಸಿನೆಸ್. ಇಂಟರ್ನ್ಯಾಷನಲ್ ಕ್ರಿಕೆಟ್ ಮ್ಯಾಚ್ ನಿಂದ ಬರುವಂತಹ ಲಾಭಕ್ಕಿಂತ ಹೆಚ್ಚಾನ ಲಾಭ ಐಪಿಎಲ್ ಕ್ರಿಕೆಟ್ ಮ್ಯಾಚ್ ಬರುತ್ತದೆ. BCCI 2008ರಲ್ಲಿ ಐಪಿಎಲ್ ಅನ್ನು ಪ್ರಾರಂಭ ಮಾಡುತ್ತಾರೆ. 2008 ರಲ್ಲಿ ಸೋನಿ ಪಿಚ್ಚರ್ ನೆಟ್ವರ್ಕ್ ಎಂಬ ಸಂಸ್ಥೆ 10 ವರ್ಷಗಳ ಕಾಲ ಐಪಿಎಲ್ ಮ್ಯಾಚ್ ಅನ್ನು ಟಿವಿಯಲ್ಲಿ ಪ್ರಸಾರ ಮಾಡಲು 8200 ಕೋಟಿಗಳನ್ನು ಕೊಟ್ಟು ಟಿವಿ ರೈಟ್ಸ್ ಅನ್ನು ತೆಗೆದುಕೊಳ್ಳುತ್ತೆ. 2018 ರಲ್ಲಿ ಸ್ಟಾರ್ ಇಂಡಿಯಾ ಎಂಬ ಕಂಪನಿ ಐಪಿಎಲ್ ಮ್ಯಾಚ್ ಅನ್ನು ಟಿವಿಯಲ್ಲಿ ಪ್ರಸಾರ ಮಾಡಲು ಮತ್ತು ಇಂಟರ್ನೆಟ್ ನಲ್ಲಿ ಪ್ರಸಾರ ಮಾಡಲು 16347 ಕೋಟಿ ಕೊಟ್ಟು BCCI ನಿಂದ ರೈಟ್ಸ್ ತೆಗೆದುಕೊಳ್ಳುತ್ತೆ. ಸ್ಫೋನ್ಸರ್ಷಿಪ್ – ಪ್ರತಿವರ್ಷ ಯಾವುದೋ ಒಂದು ಕಂಪನಿ ಐಪಿಎಲ್ ಗೆ ಟೈಟಲ್ ಸ್ಪಾನ್ಸರ್ ಮಾಡುತ್ತ ಬಂದಿದೆ. ಉದಾಹರಣೆಗೆ ಪೆಪ್ಸಿ ಐಪಿಎಲ್, ಡಿಎಲ್ಎಫ್ ಐಪಿಎಲ್, ವಿವೋ ಐಪಿಎಲ್ ಈಗ ಡ್ರೀಮ್ ಲೆವೆನ್ ಐಪಿಎಲ್. ಹೀಗೆ ಒಂದು ವರ್ಷ ಸ್ಫೋನ್ಸರ್ಷಿಪ್ ಮಾಡಲು ಸುಮಾರು ಇನ್ನೂರು ಕೋಟಿ ಹಣವನ್ನು BCCI ಗೆ ನೀಡಬೇಕು.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/