ದೋಷ ಮುಕ್ತ ಟ್ರಂಪ್!!ವಾಷಿಂಗ್ಟನ್: ಅಮೆರಿಕದ ಕ್ಯಾಪಿಟಲ್ ಹಿಲ್ ನಲ್ಲಿನ ಮಾರಣಾಂತಿಕ ಹಿಂಸಾಚಾರಕ್ಕೆ ಪ್ರಚೋದನೆ ಆರೋಪದ ಮೇರೆಗೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹೊಣೆಗಾರನ್ನಾಗಿ ಮಾಡುವ ಡೆಮಾಕ್ರಟಿಕ್ ಪ್ರಯತ್ನ ಮುಗಿದಿದೆ. ಶನಿವಾರ ನಡೆದ ಎರಡನೇ ಬಾರಿಯ ದೋಷರೋಪಣೆ ವಿಚಾರಣೆಯಲ್ಲಿ ಸೆನೆಟ್ ಟ್ರಂಪ್ ಅವರನ್ನು ಖುಲಾಸೆಗೊಳಿಸಿದೆ.

ಐದು ದಿನಗಳ ಕಾಲ ನಡೆದ ವಿಚಾರಣೆಯಲ್ಲಿ ನೆವೆಂಬರ್ ನಲ್ಲಿ ನಡೆದ ಚುನಾವಣೆ ವೇಳೆಯಲ್ಲಿ ಟ್ರಂಪ್ ಪ್ರಚೋದನೆಯಿಂದಾಗಿ ಅವರ ಬೆಂಬಲಿಗರು ಕ್ಯಾಪಿಟಲ್ ಮೇಲೆ ದಾಳಿ ನಡೆಸಿದ್ದಾರೆ ಎಂದು ಡೆಮಾಕ್ರಟಿಕ್ ದೋಷರೋಪಣೆ ಮ್ಯಾನೇಜರ್ ವಾದಿಸಿದರು. ಕೊನೆಯಲ್ಲಿ 57-43 ಬಹುಮತದ ಕೊರತೆಯೊಂದಿಗೆ ಸೆನೆಟರ್ ಮತ ಚಲಾಯಿಸಿದರು.

ಮಾಜಿ ಅಧ್ಯಕ್ಷ ಟ್ರಂಪ್ ಮೇಲೆ ಕಪ್ಪು ಚುಕ್ಕೆ ಇಟ್ಟು, ಅವರು ಮತ್ತೆ ಕಚೇರಿಯತ್ತ ತಿರುಗಿ ನೋಡದಂತೆ ಬಯಸಿ ಟ್ರಂಪ್ ಮೇಲಿನ ಅಪರಾಧವನ್ನು ನಿರ್ಣಯಿಸಲು ಏಳು ರಿಪಬ್ಲಿಕನ್ನರು ಸೇರಿ ಎಲ್ಲಾ 50 ಡೆಮಾಕ್ರಟಿಕ್ ಪಕ್ಷದವರು ಮತದಾನ ಮಾಡಿದ್ದರು. ಆದರೆ, ಅಪರಾಧ ನಿರ್ಣಯಿಸಲು ಮೂರನೇ ಎರಡರಷ್ಚು ಅಥವಾ 67 ಸೆನೆಟರ್ ಗಳ ಅಗತ್ಯವಿತ್ತು. ಕೊನೆಯದಾಗಿ ಮಾಜಿ ಅಧ್ಯಕ್ಷರಿಗೆ ಶಿಕ್ಷೆ ವಿಧಿಸಲು ಸೆನೆಟ್ ಒಪ್ಪಿಕೊಳ್ಳಲಿಲ್ಲ.