500 ಸಾಲ ಕೊಟ್ಟಿದ್ದ ಶಿಕ್ಷಕರಿಗೆ 30 ಲಕ್ಷದ ಗಿಫ್ಟ್ ಕೊಟ್ಟ ವಿದ್ಯಾರ್ಥಿ, ಏನದು ಗೊತ್ತೆ?ಬ್ಯಾಂಕ್‌ನ ಸಿಇಒ ಆಗಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬರು ತಮ್ಮ ಶಿಕ್ಷಕನಿಗೆ 30 ಲಕ್ಷದ ಶೇರ್ಸ್ ಗಿಫ್ಟ್ ಮಾಡಿದ್ದಾರೆ. ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಎಂಡಿ ಮತ್ತು ಸಿಇಒ ಆಗಿರುವ ವಿ. ವೈದ್ಯನಾಥನ್ 30 ಲಕ್ಷ ಬೆಲೆ ಬಾಳುವ 1 ಲಕ್ಷ ಈಕ್ವಿಟಿ ಶೇರ್ಸ್‌ನ್ನು ತಮ್ಮ ಗಣಿತ ಅಧ್ಯಾಪಕರಿಗೆ ಗಿಫ್ಟ್ ಮಾಡಿದ್ದಾರೆ.ತನ್ನ ಬದುಕಿನ ಆರಂಭದ ಹಂತದಲ್ಲಿ ತನಗೆ ನೆರವಾದ ಶಿಕ್ಷಕರಿಗೆ ಥ್ಯಾಂಕ್ಸ್ ಹೇಳಿದ ವೈದ್ಯನಾಥ್ ಇಂತಹದೊಂದು ಗಿಫ್ಟ್ ಕೊಟ್ಟಿದ್ದಾರೆ. ಫೇಸ್‌ಬುಕ್ ಪೋಸ್ಟ್ ಒಂದು ವೈರಲ್ ಆಗುತ್ತಿದ್ದು, ಶಿಕ್ಷಕ ಸೈನಿ ಅವರು ವಿದ್ಯಾರ್ಥಿಯ ಇಂಟರ್‌ವ್ಯೂ ಎಟೆಂಡ್ ಮಾಡಲು ಪ್ರಯಾಣಕ್ಕೆ 500 ರೂಪಾಯಿ ಸಾಲ ನೀಡಿರುವ ಸ್ಟೋರಿ ನೆಟ್ಟಿಗರ ಮನ ಮುಟ್ಟಿದೆ.

ಬಿಇಟಿಎಸ್ ನಲ್ಲಿ ವೈದ್ಯನಾಥನ್ ಗೆ ಎಡ್ಮಿಸ಼ನ್ ಸಿಕ್ಕಿತ್ತು ಕೌನ್ಸಿಲಿಂಗ್ ಫಾರ್ಮಾಲಿಟೀಸ್ ಹಾಗೂ ಇಂಟರ್‌ವ್ಯೂಗೆ ಹೋಗಲು ಆತನಲ್ಲಿ ಹಣವಿರಲಿಲ್ಲ. ವೈದ್ಯನಾಥನ್‌ನ ಆಗಿನ ಗಣಿತ ಶಿಕ್ಷಕ ಗರ್ಡಿಯಲ್ ಸೈನಿ ವಿದ್ಯಾರ್ಥಿಗೆ 500 ರೂಪಾಯಿ ಸಾಲ ಕೊಟ್ಟಿದ್ದರು. ವೈದ್ಯನಾಥನ್ ಚೆನ್ನಾಗಿ ಕಲಿತು ಔದ್ಯೋಗಿಕ ಜೀವನದಲ್ಲಿ ಮೇಲೆ ಬಂದರು. ವೈದ್ಯನಾಥ್ ತನ್ನ ಶಿಕ್ಷಕರನ್ನು ಹುಡುಕಿದ್ದರು. ಆದರೆ ಕೆಲಸದ ನಿಮಿತ್ತ ವರ್ಗವಾಗಿ ಹೋಗಿದ್ದರಿಂದ ಶಿಕ್ಷಕರನ್ನು ಪತ್ತೆ ಮಾಡಲಾಗಲಿಲ್ಲ. ತುಂಬ ವರ್ಷಗಳ ನಂತರ ವೈದ್ಯನಾಥನ್‌ಗೆ ತನ್ನ ಸಹುದ್ಯೋಗಿ ಮೂಲಕ ಶಿಕ್ಷಕನ ಬಗ್ಗೆ ಗೊತ್ತಾಯಿತು. ಸೈನಿ ಆಗ್ರಾದಲ್ಲಿರುವುದನ್ನು ತಿಳಿದ ವೈದ್ಯನಾಥನ್ ವೈದ್ಯರಿಗೆ ಕರೆ ಮಾಡಿ ತಮಗೆ ಮಾಡಿದ ನೆರವಿಗೆ ಧನ್ಯವಾದ ತಿಳಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ ಬ್ಯಾಂಕ್ ಸಾಮಾನ್ಯ ಸ್ಟಾಕ್ ಎಕ್ಸ್‌ಚೇಂಜ್ ಫಿಲ್ಲಿಂಗ್ ಮಾಡಿತ್ತು. ವೈದ್ಯನಾಥನ್ ಅವರು ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ನಲ್ಲಿದ್ದ ಅವರ ವೈಯಕ್ತಿಕ ಶೇರ್ 1 ಲಕ್ಷದ ಈಕ್ವಿಟಿಯನ್ನು ಅವರ ಹಳೆಯ ಶಾಲೆಯ ಶಿಕ್ಷಕ ಗಾರ್ಡಿಯಲ್ ಸರೂಪ್ ಸೈನಿ ಅವರಿಗೆ ಉಡುಗೊರೆಯಾಗಿ ವಾರ್ಗಯಿಸಿದ್ದಾರೆ ಎಂದು ಬ್ಯಾಂಕ್ ಹೇಳಿತ್ತು. ಈ ಸುದ್ದಿ ಸಿಗುತ್ತಲೇ ವೈದ್ಯನಾಥನ್‌ಗೆ ಪ್ರಶಂಸೆಯ ಮಹಾಪೂರವೇ ಹರಿದುಬಂದಿದೆ.

ಜಾಹಿರಾತು : ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ಇವರು ವಶೀಕರಣ ಮಹಾ ಮಾಂತ್ರಿಕರು ಹಾಗೂ ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ ಹಾಗೂ ಪುರುಷ ವಶೀಕರಣ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಕೆಳಗೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ 9740202800 ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು.9740202800

ಇದನ್ನೂ ಓದಿ :  ಭಾರತಕ್ಕೆ ಬರಲಿದ್ದಾರೆ ಆರೋಪಿ ನೀರವ್ ಮೋದಿ!