ಇಲ್ಲಿ ಹೆಣ್ಣನ್ನು ಅಪಹರಿಸಿ ಮದುವೆಯಾದರೂ ಕ್ರೈಂ ಅಲ್ಲ! ; ಇಲ್ಲಿ ಜಾರಿಯಿದೆ ವಿಚಿತ್ರ ಸಂಪ್ರದಾಯ.ಸುಂಬಾ: ಪ್ರತಿಯೊಂದು ದೇಶದಲ್ಲೂ ಅದರದ್ದೇ ಆದ ಸಂಪ್ರದಾಯವಿದೆ. ಪ್ರತಿಯೊಂದು ಧರ್ಮ, ಜನಾಂಗದವರೂ ಅವರದ್ದೇ ಆದ ವಿಶಿಷ್ಟ ಸಂಪ್ರದಾಯವನ್ನು ಪಾಲಿಸುತ್ತಾರೆ. ಈ ದ್ವೀಪದಲ್ಲಿಯೂ ಕೂಡ ವಿಚಿತ್ರವಾದ ಸಂಪ್ರದಾಯವೊಂದನ್ನು ಪಾಲಿಸಲಾಗುತ್ತದೆ. ಇವರ ಸಂಪ್ರದಾಯದ ಪ್ರಕಾರ ಮದುವೆಯಾಗಲು ಹೆಣ್ಣಿನ ಒಪ್ಪಿಗೆ ಕೇಳಬೇಕಿಲ್ಲ, ಇಷ್ಟ ಪಟ್ಟವಳನ್ನು ಕಿಡ್ನಾಪ್ ಮಾಡಿ ಮದುವೆಯಾಗುವುದು ಕ್ರೈಂ ಅಲ್ಲ.! ಇಂತದ್ದೊಂದು ವಿಚಿತ್ರ ಸಂಪ್ರದಾಯವನ್ನು ಪಾಲಿಸುತ್ತಿರುವುದು ಇಂಡೋನೇಷಿಯಾದ ಬಾಲಿಗೆ ಸಮೀಪದಲ್ಲಿರುವ ಸುಂಬಾ ದ್ವೀಪದಲ್ಲಿ. ಇಲ್ಲಿನ ಮದುವೆಗಳು ವಿಚಿತ್ರವಾಗಿರುತ್ತದೆ. ವಧುವನ್ನು ವರನ ಕಡೆಯವರು ಕಿಡ್ನಾಪ್ ಮಾಡುತ್ತಾರೆ. ಆಕೆಯ ಒಪ್ಪಿಗೆಯನ್ನು ಕೇಳಲಾಗುವುದಿಲ್ಲ.

ಹೀಗೆ ಅಪಹರಣ ಮಾಡಿ ಕರೆತಂದ ವಧುವನ್ನು ವರ ಮದುವೆಯಾಗುತ್ತಾನೆ. ಈ ದ್ವೀಪದಲ್ಲಿ 7.5 ಮಿಲಿಯನ್​ ಜನರು ವಾಸವಿದ್ದಾರೆ. ಹಲವಾರು ಮಹಿಳಾ ರಕ್ಷಣಾ ಸಂಸ್ಥೆಗಳೂ ಇಲ್ಲಿವೆ. ಈ ಅನಿಷ್ಟ ಪದ್ಧತಿಯನ್ನು ನಿಷೇಧಿಸಬೇಕು ಎಂದು ಹತ್ತಾರು ವರ್ಷಗಳಿಂದ ಸರ್ಕಾರಕ್ಕೆ ಒತ್ತಾಯಿಸಲಾಗುತ್ತಿದೆ. ಹಾಗಿದ್ದರೂ ಈವರೆಗೆ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. 2020ರಲ್ಲಿ ಈ ರೀತಿ ಅಪಹರಿಸಿ ಮದುವೆಯಾಗಿರುವ ಎರಡು ವಿಡಿಯೋಗಳು ವೈರಲ್​ ಆಗಿದ್ದವು. ಈ ವಿಚಾರ ದೇಶ ವಿದೇಶಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಇದೀಗ ಈ ಸಂಪ್ರದಾಯವನ್ನು ಅಂತ್ಯ ಮಾಡುವ ಚಿಂತನೆ ಸರ್ಕಾರ ನಡೆಸುತ್ತಿದೆ ಎನ್ನಲಾಗಿದೆ.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/