2020 ರಲ್ಲಿ ವೈರಲ್ ಆದ ಟಾಪ್ 5 ವೈರಲ್ ವೀಡಿಯೋಗಳು ಇಲ್ಲಿವೆ!ಕಳೆದ ಅನೇಕ ವರ್ಷಗಳಿಗೆ ಹೋಲಿಸಿದ್ರೆ 2020ನೇ ಇಸ್ವಿ ಸಂತಸದ ಸುದ್ದಿಯನ್ನ ನೀಡಿದ್ದಕ್ಕಿಂತ ಜಾಸ್ತಿ ಕಹಿ ಸುದ್ದಿಯನ್ನೇ ನೀಡಿದೆ. ಕೊರೊನಾದಿಂದ ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಕೆಲವರು ಕುಟುಂಬಸ್ಥರಿಂದ ದೂರಾಗಿದ್ದಾರೆ. ಹಲವರು ತಮ್ಮ ಕೆಲಸವನ್ನೇ ಕಳೆದುಕೊಂಡಿದ್ದಾರೆ. ಜಾಗತಿಕ ಸಾಂಕ್ರಾಮಿಕದ ನಡುವೆಯೇ ಈ ಬಾರಿ ಜನರು ಅತಿ ಹೆಚ್ಚು ಸಾಮಾಜಿಕ ಮಾಧ್ಯಮಕ್ಕೆ ಅವಲಂಬಿತರಾಗಿದ್ದಂತೂ ನಿಜ. ಹಾಗಾದ್ರೆ ಈ ವರ್ಷ ಅತೀ ಹೆಚ್ಚು ಮನರಂಜನೆ ನೀಡಿದ ವೈರಲ್​ ವಿಡಿಯೋಗಳು ಯಾವುದು ಎಂಬುದನ್ನ ನೋಡೊಣ. ಗೋ ಕೊರೊನಾ ಗೋ : ಮಾರ್ಚ್​ ತಿಂಗಳಲ್ಲಿ ಕೇಂದ್ರ ಸಚಿವ ರಾಮದಾಸ್ ಅಥಾವಳೆ ಗೋ ಕೊರೊನಾ ಗೋ ಎಂಬ ಪದವನ್ನ ಮಂತ್ರದ ರೀತಿಯಲ್ಲಿ ಪಠಿಸಿದ್ದರು.

ಈ ವಿಡಿಯೋ ಈ ವರ್ಷ ಸಾಮಾಜಿಕ ಜಾಲತಾಣದಲ್ಲಿ ಅತೀ ಹೆಚ್ಚು ವೈರಲ್​ ಆದ ವಿಡಿಯೋವಾಗಿದೆ. ರಸೋಡೇ ಮೇ ಕೌನ್​ ಥಾ : ಸಂಗೀತ ನಿರ್ದೇಶಕ ಯಶ್​ರಾಜ್​ ಮುಖಾಟೆ ಎಂಬವರು ಸಾಥ್​ ನಿಭಾನಾ ಸಾಥಿಯಾ ಎಂಬ ಧಾರವಾಹಿಯ ದೃಶ್ಯವನ್ನ ಬಳಸಿಕೊಂಡು ಸಂಗೀತ ರಚಿಸುವ ಮೂಲಕ ರಾತ್ರಿ ಬೆಳಗಾಗೋದ್ರಲ್ಲಿ ಫೇಮಸ್ ಆಗಿದ್ದರು. ಫಿಲಿಫೈನ್ಸ್​ನ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಪತ್ರಕರ್ತೆ ಡೋರಿಸ್​ ಬಿಗೋರಿನಿಯಾ ಭಾಗಿಯಾಗಿದ್ದ ವೇಳೆ 2 ಬೆಕ್ಕುಗಳು ಹೊಡೆದಾಡಿಕೊಂಡ ದೃಶ್ಯವೂ ಸೆರೆಯಾಗಿತ್ತು. ಈ ವಿಡಿಯೋ ಕೂಡ ಇಂಟರ್ನೆಟ್​ನಲ್ಲಿ ಹಲ್​ಚಲ್​ ಎಬ್ಬಿಸಿತ್ತು. ಇನ್ನುಳಿದಂತೆ ಲಾಕ್​ಡೌನ್​ ಸಂದರ್ಭದಲ್ಲಿ ಪೊಲೀಸರು ನೀಡಿದ ಶಿಕ್ಷೆಗಳ ವಿಡಿಯೋ, ಕಾಕು ಎಂಬ ಮನೆಗೆಲಸದಾಕೆ ತನ್ನ ಸಂಬಳಕ್ಕಾಗಿ ಜಗಳವಾಡಿದ್ದು ಸೇರಿದಂತೆ ಸಾಕಷ್ಟು ವಿಡಿಯೋಗಳು ವೈರಲ್​ ಆಗಿವೆ.

 ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/